ಬಾಲ್ಯದಲ್ಲಿನ ಒತ್ತಡ ಮಹಿಳೆಯರ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು

ಮಹಿಳೆಯರು ತಮ್ಮ ಬಾಲ್ಯದಲ್ಲಿ ಎದುರಿಸಿದ್ದ ಒತ್ತಡ, ಪ್ರೌಢವಯಸ್ಸಿನಲ್ಲಿ ತೂಕ ಹೆಚ್ಚುವುದರ ಮೇಲೆ ಪರಿಣಾಮ ಬೀರಲಿದೆ.
ತೂಕದ ಏರಿಕೆ(ಸಾಂಕೇತಿಕ ಚಿತ್ರ)
ತೂಕದ ಏರಿಕೆ(ಸಾಂಕೇತಿಕ ಚಿತ್ರ)

ನ್ಯೂಯಾರ್ಕ್: ಮಹಿಳೆಯರು ತಮ್ಮ ಬಾಲ್ಯದಲ್ಲಿ ಎದುರಿಸಿದ್ದ ಒತ್ತಡ, ಪ್ರೌಢವಯಸ್ಸಿನಲ್ಲಿ ತೂಕ ಹೆಚ್ಚುವುದರ ಮೇಲೆ ಪರಿಣಾಮ ಬೀರಲಿದೆ.

ಜರ್ನಲ್ ಸೋಸಿಯಲ್ ಸೈನ್ಸ್, ಮೆಡಿಸಿನ್ ನಲ್ಲಿ ಪ್ರಕಟವಾಗಿರುವ ಅಧ್ಯಯನ ವರದಿಯ ಪ್ರಕಾರ, ಬಾಲ್ಯದಲ್ಲಿ ಎದುರಿಸಿದ್ದ ಒತ್ತಡ ಮಹಿಳೆಯರ ಪ್ರೌಢವಯಸ್ಸಿನಲ್ಲಿ ತೂಕ ಹೆಚ್ಚುವುದರ ಮೇಲೆ ಪರಿಣಾಮ ಉಂಟುಮಾಡಿದರೆ, ತೂಕ ಹೆಚ್ಚಲು ಪುರುಷರ ಮೇಲೆ ಬಾಲ್ಯ ಹಾಗೂ ಪ್ರೌಢವಯಸ್ಸಿನ ಒತ್ತಡಗಳು ಯಾವುದೇ ಪರಿಣಾಮವಿರುವುದಿಲ್ಲ ಎಂದು ತಿಳಿದುಬಂದಿದೆ.
ತೂಕ ಏರಿಕೆಯಾಗುವ ವಿಷಯದಲ್ಲಿ  ಪುರುಷರು ಹಾಗೂ ಮಹಿಳೆಯರ ಮೇಲೆ ಪ್ರಭಾವ ಬೀರುವ ಅಂಶಗಳ ಬಗ್ಗೆ ತಿಳಿದುಕೊಳ್ಳಲು ಸಂಶೋಧನೆ ನಡೆಸಲಾಗಿದೆ ಎಂದು ಅಮೇರಿಕಾದಲ್ಲಿರುವ ಮಿಚಿಗನ್ ಸ್ಟೇಟ್ ವಿಶ್ವವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಸಹಾಯಕ ಪ್ರಾಧ್ಯಾಪಕ ಹುಯಿ ಲಿಯು ತಿಳಿಸಿದ್ದಾರೆ.

ಸಂಶೋಧನೆಗಾಗಿ ಒಟ್ಟು 3 ,617(2,259  ಮಹಿಳೆಯರು, 1,358 ಪುರುಷರು) ಜನರ ಸಮೀಕ್ಷೆ ನಡೆಸಲಾಗಿದೆ, 15 ವರ್ಷದ ಅವಧಿಯಲ್ಲಿ ಇವರನ್ನು 4 ಬಾರಿ ಸಂದರ್ಶನ ನಡೆಸಲಾಗಿದೆ. ಬಾಲ್ಯವಯಸ್ಸಿನ  ಒತ್ತಡಗಳನ್ನು(16 ಅಥವಾ ಅದಕ್ಕಿಂತ ಕಡಿಮೆ ವರ್ಷ), ಆರ್ಥಿಕ ಸಂಕಷ್ಟಗಳ, ಪೋಷಕರ ವಿಚ್ಛೇದನ ರೀತಿಯ ಕುಟುಂಬ ಸಂಬಂಧಿ ಒತ್ತಡಗಳೆಂದು ಪರಿಗಣಿಸಲಾಗಿದೆ. ಇನ್ನು ಕೆಲಸ ಕಳೆದುಕೊಳ್ಳುವ, ಪೋಷಕರ ಕಾಳಜಿ ರೀತಿಯ ಒತ್ತಡಗಳನ್ನು ಪ್ರೌಢವಯಸ್ಸಿನ ಒತ್ತಡ ಎಂದು ಪರಿಗಣಿಸಲಾಗಿದೆ.    

ಬಾಲ್ಯದಲ್ಲಿ ಅತಿ ಹೆಚ್ಚು ಒತ್ತಡಕ್ಕೊಳಗಾಗಿರುವ ಮಹಿಳೆಯರ ತೂಕ ಪ್ರೌಢಾವಸ್ಥೆಯಲ್ಲಿ ಹೆಚ್ಚಾಗುತ್ತದೆ ಎಂದು ಸಂಶೋಧನೆ ತಿಳಿಸಿದೆ. ಆದರೆ ಪುರುಷರ ತೂಕ ಹೆಚ್ಚಲು ಬಾಲ್ಯ ಹಾಗೂ ಪ್ರೌಢಾವಸ್ಥೆಯ ಒತ್ತಡಗಳೆರಡೂ ಕಾರಣವಾಗುವುದಿಲ್ಲವಂತೆ.     

ಒತ್ತಡಕ್ಕೆ ಪುರುಷರು ಹಾಗೂ ಮಹಿಳೆಯರು ಭಿನ್ನ ರೀತಿಯಲ್ಲಿ ಸ್ಪಂದಿಸುತ್ತಾರೆ ಆದ್ದರಿಂದ ತೂಕ ಹೆಚ್ಚುವ ವಿಷಯದಲ್ಲಿ ಒತ್ತಡದ ಪಾತ್ರ ಇಬ್ಬರ ಮೇಲೂ ಬೇರೆ ಬೇರೆ ರೀತಿಯದ್ದಾಗಿರುತ್ತದೆ ಎಂದು ಅಧ್ಯಯನ ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com