ಪರೋಕ್ಷ ಧೂಮಾಪನದಿಂದ ಹೆಚ್ಚುತ್ತದೆ ಪಾರ್ಶ್ವವಾಯು ಸಮಸ್ಯೆ !

ಪರೋಕ್ಷ ಧೂಮಪಾನ, ಧೂಮಪಾನ ಮಾಡದ ಜನರಿಗೆ ಪಾರ್ಶ್ವವಾಯು ಅಪಾಯವನ್ನು ಶೇ.30 ರಷ್ಟು ಹೆಚ್ಚಿಸುತ್ತದೆ ಎಂಬುದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ.
ಧೂಮಪಾನ (ಸಾಂಕೇತಿಕ ಚಿತ್ರ)
ಧೂಮಪಾನ (ಸಾಂಕೇತಿಕ ಚಿತ್ರ)

ನ್ಯೂಯಾರ್ಕ್: ಪರೋಕ್ಷ ಧೂಮಪಾನ, ಧೂಮಪಾನ ಮಾಡದ ಜನರಿಗೆ ಪಾರ್ಶ್ವವಾಯು ಅಪಾಯವನ್ನು ಶೇ.30 ರಷ್ಟು ಹೆಚ್ಚಿಸುತ್ತದೆ ಎಂಬುದು ಇತ್ತೀಚಿನ ಸಂಶೋಧನೆಯಿಂದ ತಿಳಿದುಬಂದಿದೆ.

ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದ್ರೋಗಗಳಿಗಿಂತಲೂ ಪರೋಕ್ಷ ಧೂಮಪಾನದಿಂದ ಶೇ.30 ರಷ್ಟು ಹೆಚ್ಚಿನ ಅಪಾಯ ಎದುರಾಗಲಿದೆ ಎಂಬುದನ್ನು ದಕ್ಷಿಣ ಕೆರೊಲಿನಾದ  ಚಾರ್ಲ್ ಸ್ಟನ್ ಮೆಡಿಕಲ್ ವಿಶ್ವವಿದ್ಯಾನಿಲಯದ ಸಂಶೋಧಕರು ಕಂಡುಕೊಂಡಿದ್ದಾರೆ.

ಧೂಮಾಪನ ಮಾಡದೇ ಇರುವವರಿಗೂ ಪರೋಕ್ಷ ಧೂಮಾಪನದಿಂದ ಪಾರ್ಶ್ವವಾಯು ಸಮಸ್ಯೆಗಳು ಉಂಟಾಗುತ್ತಿದ್ದು, ಕಠಿಣ ಧೂಮಪಾನ ನಿಯಮಗಳನ್ನು ರೂಪಿಸಬೇಕೆಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಈ ಅಧ್ಯಯನಕ್ಕಾಗಿ 22 ,೦೦೦ ಜನರನ್ನು ಸಮೀಕ್ಷೆಗೊಳಪಡಿಸಲಾಗಿದ್ದು ಈ ಪೈಕಿ ಶೇ.23 ರಷ್ಟು ಜನರು ಪರೋಕ್ಷ ಧೂಮಪಾನಕ್ಕೊಳಗಾಗಿದ್ದರು.

ಏಪ್ರಿಲ್ 2003 ರಿಂದ 2012 ರಲ್ಲಿ 428 ಜನರು ಪಾರ್ಶ್ವವಾಯುವಿಗೆ ತುತ್ತಾಗಿದ್ದಾರೆ. ಈ ಪೈಕಿ ಹೆಚ್ಚಿನವರಿಗೆ ಪರೋಕ್ಷ ಧೂಮಾಪನ ಮಾಡುವುದರಿಂದ ಮೆದುಳಿಗೆ ರಕ್ತ ಸಂಚಲನೆ ನಿಂತು ಹೋಗಿ ಪಾರ್ಶ್ವವಾಯು ಸಮಸ್ಯೆ ಎದುರಾಗಿದೆ ಎಂದು ತಿಳಿದುಬಂದಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com