
ವಾಶಿಂಗ್ ಟನ್: ಅಮೆರಿಕಾ ಆಹಾರ ಮತ್ತು ಡ್ರಗ್ ನಿರ್ವಹಣಾ ಸಮಿತಿ (ಎಫ್ ಡಿ ಎ) ಆಗಸ್ಟ್ ವೇಳೆಗೆ ಮಹಿಳೆಯರಲ್ಲಿ ಲೈಂಗಿಕ ಆಸಕ್ತಿಯಯನ್ನು ಉದ್ರೇಕಿಸುವ ಮೊದಲ ಔಷದಕ್ಕೆ ಓಂಕಾರ ಹಾಡಲು ಸಿದ್ಧವಾಗಿದೆ.
ಪುರುಷರಲ್ಲಿ ಶಿಶ್ನೋದ್ರೇಕ ದೌರ್ಬಲ್ಯಕ್ಕೆ ಬಳಸುವ ವಯಾಗ್ರದ ರೀತಿಯ 'ಫ್ಲಿಬಾನ್ ಸೆರಿನ್' ಎಂಬ ಔಷಧವನ್ನು ಸಲಹಾ ಸಮಿತಿ ಅಂಗೀಕರಿಸಾಲಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.
ಈ ವರ್ಷದ ಆಗಸ್ಟ್ ವೇಳೆಗೆ ಎಪ್ ಡಿ ಎ ಈ ಔಷಧಕ್ಕೆ ಮಾನ್ಯತೆ ನೀಡಲು ಸಾಧ್ಯತೆಯಿದೆ.
ಲೈಂಗಿಕ ಆಸಕ್ತಿಯ ದೌರ್ಬಲ್ಯದಿಂದ ನರಳುತ್ತಿರುವ ಮಹಿಳೆಯರಿಗೆ ಮುಟ್ಟು ತೀರಿಕೆಗೂ ಪೂರ್ವದಲ್ಲಿ ಮಲಗವು ವೇಳೆಯಲ್ಲೂ ದಿನಕ್ಕೊಮ್ಮೆ ತೆಗೆದುಕೊಳ್ಳಲು ಈ ಕಂದು ಮಾತ್ರೆಗೆ ಮಾನ್ಯತೆ ಸಿಗಲಿದೆ ಎನ್ನಲಾಗಿದೆ.
ಮುಟ್ಟುತೀರಿಕೆಯ ಪೂರ್ವದಲ್ಲಿ ಸುಮಾರು ೭% ಮಹಿಳೆಯರಿಗೆ ಈ ಲೈಂಗಿಕ ದೌರ್ಬಲ್ಯ ಕಂಡು ಬಂದಿದೆ ಎಂದು ಅಂದಾಜಿಸಲಾಗಿದೆ.
ಇದರ ಪ್ರಯೋಗದ ವೇಳೆ ಮಹಿಳೆಯರಿಗೆ ಈ ಮಾತ್ರೆ ಉಪಯೋಗವಾಗಿದ್ದರೂ ಇದು ಇತರ ಸಣ್ಣ ಖಾಯಿಲೆಗಳಿಗೆ ಎಡೆಮಾಡಿಕೊಟ್ಟಿದೆ. ಕಡಿಮೆ ರಕ್ತದೊತ್ತಡ, ತಲೆಸುತ್ತುವುದು ಇತ್ಯಾದಿ ಕಂಡುಬಂದಿವೆ.
ಲೈಂಗಿಕ ಸಮಾನತೆಗೆ ಇದು ಒಳ್ಳೆಯ ನಡೆ ಎಂದು ಕೆಲವು ಮಹಿಳಾ ಸಂಘಟನೆಗಳು ಇದನ್ನು ಸ್ವಾಗತಿಸಿವೆ.
Advertisement