ಭಾರತೀಯರು ದೀರ್ಘಾಯುಷಿಗಳು ಆದರೆ ಅನಾರೋಗ್ಯ ಪೀಡಿತರು

ಭಾರತೀಯರು ಹೆಚ್ಚು ಕಾಲ ಜೀವಿಸುತ್ತಾರೆ, ಅಂದರೆ ದೀರ್ಘಾಯುಷಿಗಳು ಎನ್ನುವುದನ್ನು ಸಂಶೋಧನೆಯೊಂದು ದೃಢಪಡಿಸಿದೆ.,,,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನವದೆಹಲಿ: ಭಾರತೀಯರು ಸದಾಕಾಲಕ್ಕೂ ಫಿಟ್ ಅಂಡ್ ಫೈನ್ ಅನ್ನೋದು ಹಳೇ ಮಾತು. ಭಾರತೀಯರು ಹೆಚ್ಚು ಕಾಲ ಜೀವಿಸುತ್ತಾರೆ, ಅಂದರೆ ದೀರ್ಘಾಯುಷಿಗಳು ಎನ್ನುವುದನ್ನು ಸಂಶೋಧನೆಯೊಂದು ದೃಢಪಡಿಸಿದೆ. ಜೊತೆಗೆ ಹೆಚಿಚನ ಸಮಯ ಅನಾರೋಗ್ಯ ಪೀಡಿತರಾಗಿರುತ್ತಾರೆ ಅಂತಾರಾಷ್ಟ್ರೀಯ ಸಂಶೋಧಕರ ಒಕ್ಕೂಟ ನಡೆಸಿದ ಸಂಶೋಧನೆಯಲ್ಲಿ ತಿಳಿದು ಬಂದಿದೆ.

ಜಗತ್ತಿನ ಇತರ ಪ್ರಾಣಿಗಳಿಗಿಂತ ಮನುಷ್ಯನ ಆಯಸ್ಸು ಹೆಚ್ಚು. ಆದರೆ ಈ ಮನುಷ್ಯ ಬದುಕಿರುವಷ್ಟು ಕಾಲ ಆರೋಗ್ಯವಂತಾನಾಗಿರುವುದಿಲ್ಲ. ಬದಲಿಗೆ ಅನಾರೋಗ್ಯ ಪೀಡಿತನಾಗಿರುತ್ತಾನೆ. ಮಾರಕವಲ್ಲದ ಕಾಯಿಲೆಗಳಾದ ಜ್ವರ, ಗಾಯ ಮಧುಮೇಹ, ಕಿವುಡುತನ, ದೃಷ್ಟಿದೋಷ ಮುಂತಾದ ರೋಗಗಳಿಂದ ಬಳಲುತ್ತಿರುತ್ತಾನೆ. ಮತ್ತು ಅವುಗಳಿಂದ ಗುಣಮುಖವಾಗಲು ಹೆಚ್ಚು ಸಮಯ ವ್ಯಯಿಸುತ್ತಾನೆ ಎಂದು ಸಂಶೋಧನೆಯ ವರದಿ ತಿಳಿಸಿದೆ. ಒಟ್ಟಾರೆ ಮನುಷ್ಯ ಬದುಕುವ ಆಯಸ್ಸಿನ ಕಾಲುಭಾಗದಷ್ಟು ಆಯಸ್ಸಿನಲ್ಲಿ ರೋಗಗ್ರಸ್ಥನಾಗಿ ನರಳುತ್ತಾನೆ ಎಂದು ಹೇಳಿದೆ.

1990 ಮತ್ತು 2013 ರಲ್ಲಿ ಮಹಿಳೆಯರಲ್ಲಿ  ಮಧುಮೇಹ  ಹೆಚ್ಚು ಕಾಣಿಸಿಕೊಂಡಿದೆ. ಹೆಚ್ಚುಕಾಲ ರೋಗಗ್ರಸ್ಥರಾಗಿ ಜೀವಿಸುವ ಮಹಿಳೆಯರ ಪ್ರಮಾಣ ಶೇ. 109 ರಷ್ಟು ಇದೆ. ಇನ್ನು ಕಬ್ಬಿಣಾಂಶ ಕೊರತೆಯಿಂದ ಉಂಟಾಗುವ ಅನಿಮೀಯಾ ದಿಂದ ಬಳಲುವವರ ಸಂಖ್ಯೆ ಶೇ.12 ರಷ್ಟಿದೆ. ಪುರುಷರಲ್ಲಿ ಕಾಯಿಲೆಪೀಡಿತರಾಗಿ ಬದುಕುವವರ ಸಂಖ್ಯೆ 2013 ರಲ್ಲಿ ಶೇ.136ಕ್ಕೆ ಏರಿಕೆಯಾಗಿದೆ.  1990ರಿಂದ ಮಾನಸಿಕ ಖಿನ್ನತೆ ಹಾಗೂ ಬೆನ್ನು ನೋವಿನಿಂದ ನರಳುವವರ ಪ್ರಮಾಣ ಶೇ, 50 ರಷ್ಟಿದೆ ಎಂದು ಸಮೀಕ್ಷೆ ತಿಳಿಸಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com