ಯುವ ಜನಾಂಗದಲ್ಲಿ ಹೆಚ್ಚುತ್ತಿರುವ ವಯಸ್ಕರ ಸಿನೆಮಾ ಚಟ: ತಜ್ಞರ ಆತಂಕ

ಪಶ್ಚಿಮ ದೇಶಗಳಲ್ಲಿ ಅಂತರ್ಜಾಲದ ಮೂಲಕ ಯುವ ಜನಾಂಗ ನೀಲಿ ಚಲನಚಿತ್ರಗಳ ಚಟಕ್ಕೆ ಬಿದ್ದು ಅದರಿಂದಾಗುವ ದುಷ್ಪರಿಣಾಮಗಳನ್ನು ಎದುರಿಸುತ್ತಿರುವಂತೆಯೇ...
ಸಾಂದರ್ಭಿಕ ಚಿತ್
ಸಾಂದರ್ಭಿಕ ಚಿತ್
Updated on

ನವದೆಹಲಿ: ಪಶ್ಚಿಮ ದೇಶಗಳಲ್ಲಿ ಅಂತರ್ಜಾಲದ ಮೂಲಕ ಯುವ ಜನಾಂಗ ನೀಲಿ ಚಲನಚಿತ್ರಗಳ ಚಟಕ್ಕೆ ಬಿದ್ದು ಅದರಿಂದಾಗುವ ದುಷ್ಪರಿಣಾಮಗಳನ್ನು ಎದುರಿಸುತ್ತಿರುವಂತೆಯೇ ಈಗ ಭಾರತೀಯ ಯುವಕರು ಇದೇ ಅಪಾಯ ಎದುರಿಸುತ್ತಿದ್ದಾರೆ ಎನ್ನುತಾರೆ ವರ್ತನ ಶಾಸ್ತ್ರ ತಜ್ಞರು.

ಲೈಂಗಿಕ ಮತ್ತು ವರ್ತನಾ ವಿಜ್ಞಾನಗಳ ತಜ್ಞರ ಪ್ರಕಾರ, ಲೈಂಗಿಕ ಕ್ರಿಯೆ ಎಂಬುದು ನಿಗೂಢವಾಗಿ ಉಳಿದಿರುವುದರಿಂದ ಯುವಕರು ಅದಕ್ಕೆ ಉತ್ತರ ಕಂಡುಕೊಳ್ಳಲು ಪ್ರಯತ್ನಿಸುತ್ತಲೇ ಇರುತ್ತಾರೆ. ಸಾಮಾಜಿಕ ಜಾಲತಾಣಗಳು ಮತ್ತು ಅಂತರ್ಜಾಲದ ಮೂಲಕ ಈ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳುವುದು ಸುಲಭವಾಗಿಬಿಟ್ಟಿದೆ. ಆದರೆ ಸಾಮಾನ್ಯವಾಗಿ ಈ ಉತ್ತರಗಳು ನೀಲಿ/ವಯಸ್ಕರ ಚಲನಚಿತ್ರಗಳ ಮೂಲಕ ಸಿಗುತ್ತವೆ ಎನ್ನುತ್ತಾರೆ ತಜ್ಞರು.

"ಲೈಂಗಿಕ ಕ್ರಿಯೆಯ ಬಗ್ಗೆ ಇರುವ ತಪ್ಪು ತಿಳುವಳಿಕೆಯೇ ಇದಕ್ಕೆ ಕಾರಣ. ಆರೋಗ್ಯಕರ ಲೈಂಗಿಕ ಕ್ರಿಯೆ ನಡೆಸುವುದರ ಬಗ್ಗೆ ಜನ ಮೊದಲು ತಿಳಿದುಕೊಳ್ಳಬೇಕು" ಎಂದು ಹೈದರಾಬಾದ್ ಮೂಲದ ವೈದ್ಯ ಡಾ. ಸುಧಾಕರ್ ಕೃಷ್ಣಮೂರ್ತಿ ತಿಳಿಸುತ್ತಾರೆ.

ಸುಮಾರು ೩೫೬ ಮಿಲಿಯನ್ ಯುವಕರಿರುವ ಹೆಚ್ಚು ಜನಸಂಖ್ಯೆಯ ನಮ್ಮ ದೇಶದಲ್ಲಿ ಪೋರ್ನ್ ಸಿನೆಮಾಗಳು ಯುವಕರನು ಅಪಾಯಕಾರಿ ಲೈಂಗಿಕ ಕ್ರಿಯೆಗಳತ್ತ ದೂಕುವ ಅಪಾಯವಿದೆ ಎನ್ನುತ್ತಾರೆ ತಜ್ಞರು.

ಅತಿ ಹೆಚ್ಚು ನೀಲಿ ಸಿನೆಮಾಗಳನ್ನು ನೋಡುವುದರಿಂದ ಮದುವೆಯಾದ ನಂತರ ವೈವಾಹಿಕ ಜೀವನದಲ್ಲೂ ಏರುಪೇರುಗಳಾಗುವ ಸಂಭವ ಇದೆ ಎನ್ನುತ್ತಾರೆ ನವದೆಹಲಿ ಫೋರ್ಟಿಸ್ ಆಸ್ಪತ್ರೆಯ ಮಾನಸಿಕ ಆರೋಗ್ಯ ಮತ್ತು ವರ್ತನಾ ವಿಜ್ಞಾನದ ವಿಭಾಗದ ನಿರ್ದೇಶಕ ಡಾ. ಸಮೀರ್ ಪಾರಿಕ್. ಪೋರ್ನ್ ಸಿನೆಮಾಗಳಿಂದ ವೈವಾಹಿಕ ಜೀವನದಲ್ಲಿ ತೊಂದರೆ ಅನುಭವಿಸುತ್ತಿರುವ ಹಲವು ಯುವಕರಿಗೆ ಸಮೀರ್ ಚಿಕಿತ್ಸೆ ನೀಡುತ್ತಿದ್ದಾರೆ.

ಇದು ಸ್ವಲ್ಪ ವಿಪರೀತ ಎನ್ನಿಸಿದರೂ ಭಾರತೀಯ ಪೋಷಕರು ಮಕ್ಕಳಿಗೆ ಲೈಂಗಿಕ ಆರೋಗ್ಯದ ಬಗ್ಗೆ ಅರಿವು ಮೂಡಿಸುವುದು ಮುಂದೆ ತಲೆದೋರಬಹುದಾದ ತೊಂದರೆಗಳನ್ನು ನಿವಾರಿಸಲು ಸರಳ ಸುಲಭ ಉಪಾಯ ಎಂಬುದು ತಜ್ಞರ ಅಭಿಮತ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com