ಲೈಂಗಿಕ ಕ್ರಿಯೆ ನಿಮ್ಮ ಬೆನ್ನು ಮೂಳೆಯನ್ನು ಮುರಿಯುವುದಿಲ್ಲ: ಅಧ್ಯಯನ

ಸೊಂಟ ನೋವು - ಬೆನ್ನು ನೋವು ಎಂದರೆ ಸಣ್ಣ ತುಂಟ ನಗೆ ಬೀರಿ ವಾರೆ ನೋಟ ಬೀರುವುದು ಸಾಮಾನ್ಯವಲ್ಲವೇ?...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಮೆಲ್ಬರ್ನ್: ಸೊಂಟ ನೋವು - ಬೆನ್ನು ನೋವು ಎಂದರೆ ಸಣ್ಣ ತುಂಟ ನಗೆ ಬೀರಿ ವಾರೆ ನೋಟ ಬೀರುವುದು ಸಾಮಾನ್ಯವಲ್ಲವೇ? ಆದರೆ ಈ ಹೊಸ ಅಧ್ಯಯನದ ಪ್ರಕಾರ ಲೈಂಗಿಕ ಕ್ರಿಯೆಗೂ ಬೆನ್ನು ನೋವಿಗೂ ಸಂಬಂಧವಿಲ್ಲ!

ಆಸ್ಟ್ರೇಲಿಯಾದ ಜಾಗತಿಕ ಆರೋಗ್ಯಕ್ಕಾಗಿ ಇರುವ ಜಾರ್ಜ್ ಇನ್ಸ್ಟಿಸ್ಟ್ಯೂಟ್ ಸಂಶೋಧಕರು ಬೆನ್ನು ನೋವಿನಿಂದ ನರಳುತ್ತಿರುವ ೧೦೦೦ಕ್ಕೂ ಹೆಚ್ಚು ಜನರ ಮೇಲೆ ಅಧ್ಯಯನ ನಡೆಸಿ ಈ ನಿರ್ಣಯಕ್ಕೆ ಬಂದಿದ್ದಾರೆ.

ಜನಪ್ರಿಯ ಅನಿಸಿಕೆಗೆ ವಿರುದ್ಧವಾಗಿ ೧೦೦೦ ಜನರಲ್ಲಿ ಕೇವಲ ಮೂರು ಜನ ಮಾತ್ರ ತಮ್ಮ ಬೆನ್ನು ನೋವಿಗೆ ಲೈಂಗಿಕ ಕ್ರಿಯೆ ಕಾರಣ ಎಂದು ನಂಬಿದ್ದರು ಎಂದು ಸಿಡ್ನಿ ಮಾರ್ನಿಂಗ್ ಹೆರಾಲ್ಡ್ ಪತ್ರಿಕೆ ವರದಿ ಮಾಡಿದೆ.

"ಅವರಿಗೆ ತಮ್ಮ ಲೈಂಗಿಕ ಚಟುವಟಿಗಳ ಬಗ್ಗೆ ಮಾತನಾಡಲು ಯಾವುದೇ ಸಂಕೋಚ ಇರಲಿಲ್ಲ ಆದರೆ ತಮ್ಮ ಬೆನ್ನು ನೋವಿಗೆ ಲೈಂಗಿಕ ಕ್ರಿಯೆ ಕಾರಣ ಎಂದು ಹೆಚ್ಚಿನ ಜನರಿಗೆ ಅನ್ನಿಸಲಿಲ್ಲ" ಎಂದು ಹಿರಿಯ ಸಂಶೋಧಕ ಪ್ರೊಫೆಸರ್ ಮ್ಯಾನ್ಯುಲಾ ಫೆರ್ರಿರಾ ತಿಳಿಸಿದ್ದಾರೆ.

ಸಾಮಾನ್ಯವಾಗಿ ಹೆಚ್ಚಿನ ಭಾರ ಎತ್ತಿದ್ದರಿಂದ ಬೆನ್ನು ನೋವು ಕಾಣಿಸಿಕೊಂಡಿತು ಎಂದು ಹಲವರು ಗುರುತಿಸಿದ್ದಾರೆ. ಅಲ್ಲದೆ ವಿಚಿತ್ರ ರೀತಿಯಲ್ಲಿ ಕುಳಿತುಕೊಳ್ಳುವುದು ಕೂಡ ಕಾರಣ ಎಂದು ಹಲವರಿಗೆ ತಿಳಿದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ. ತೋಟಗಾರಿಕೆ ಮತ್ತು ಗಾಲ್ಫ್ ಕೂಡ ಹೆಚ್ಚಿನ ಜನರ ಬೆನ್ನುನೋವಿಗೆ ಕಾರಣವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com