ಆಯಸ್ಸು ವೃದ್ಧಿಗೆ ಅತ್ಯವಶ್ಯಕ (ಕ್ಲೋಥೋ) ಪೌಷ್ಠಿಕಾಂಶ!

ಅನಾರೋಗ್ಯ, ಮಾನಸಿಕ ಖಿನ್ನತೆ ಹಾಗೂ ಇನ್ನಿತರೆ ಸಮಸ್ಯೆಗಳನ್ನಿಡಿದು ಚಿಕಿತ್ಸೆಗಾಗಿ ವೈದ್ಯರು, ಮಾನಸಿಕ ತಜ್ಞರ ಬಳಿ ಹೋಗುತ್ತಿರುವ ಜನರ ಸಂಖ್ಯೆ ದಿನೆದಿನೇ ಹೆಚ್ಚಾಗುತ್ತಿದೆ. ಎಷ್ಟೋ ಮಂದಿ ತಮ್ಮ ಸಮಸ್ಯೆಗೆ...
ಆಯಸ್ಸು ವೃದ್ಧಿಗೆ ಅತ್ಯವಶ್ಯಕ (ಕ್ಲೋಥೋ) ಪೌಷ್ಠಿಕಾಂಶ!
ಆಯಸ್ಸು ವೃದ್ಧಿಗೆ ಅತ್ಯವಶ್ಯಕ (ಕ್ಲೋಥೋ) ಪೌಷ್ಠಿಕಾಂಶ!

ಅನಾರೋಗ್ಯ, ಮಾನಸಿಕ ಖಿನ್ನತೆ ಹಾಗೂ ಇನ್ನಿತರೆ ಸಮಸ್ಯೆಗಳನ್ನಿಡಿದು ಚಿಕಿತ್ಸೆಗಾಗಿ ವೈದ್ಯರು, ಮಾನಸಿಕ ತಜ್ಞರ ಬಳಿ ಹೋಗುತ್ತಿರುವ ಜನರ ಸಂಖ್ಯೆ ದಿನೆದಿನೇ ಹೆಚ್ಚಾಗುತ್ತಿದೆ. ಎಷ್ಟೋ ಮಂದಿ ತಮ್ಮ ಸಮಸ್ಯೆಗೆ ಪರಿಹಾರ ಇಲ್ಲವೆಂದು ಕೂತು ತಮ್ಮ ಜೀವನದ ಅರ್ಧ ಆಯಸ್ಸನ್ನೇ ತಮ್ಮ ಕೈಯಿಂದಲೇ ಹಾಳು ಮಾಡಿಕೊಳ್ಳುತ್ತಿದ್ದಾರೆ.

ಎಷ್ಟೋ ಮಂದಿ ಸಣ್ಣ ವಯಸ್ಸಿನಲ್ಲೇ ಕಾರಣವಿಲ್ಲದೆ ಸಾವನ್ನಪ್ಪುತ್ತಿದ್ದಾರೆ. ಇಂತಹ ಸಾವು ನೋಡಿ ಬಾಯಿ ಮೇಲೆ ಬೆರಳಿಟ್ಟುಕೊಂಡು ಪಾಪ ಎಂದುಕೊಳ್ಳುವ ಜನರ ಸಂಖ್ಯೆ ಅದೆಷ್ಟೊ... ಅಕಾಲಿಕ ಮರಣ ಕುರಿತಂತೆ ಸಂಶೋಧನೆ ನಡೆಸಿರುವ ಸಂಸ್ಥೆಯೊಂದು ಸಣ್ಣ ವಯಸ್ಸಿನಲ್ಲಿ ಕಾರಣವಿಲ್ಲದೆ ಬರುವ ಸಾವಿಗೆ ಆಧುನಿಕ ಜೀವನದ ಒತ್ತಡ ಹಾಗೂ ಮಾನಸಿಕ ಖಿನ್ನತೆ ಪ್ರಮುಖ ಕಾರಣವೆಂದು ಹೇಳಿದೆ.

ಇತ್ತೀಚಿನ ದಿನಗಳಲ್ಲಿ ಒತ್ತಡ ಹಾಗೂ ಮಾನಸಿಕ ಖಿನ್ನತೆಯಂತಹ ಆರೋಗ್ಯ ಸಮಸ್ಯೆ ಹೆಚ್ಚಾಗುತ್ತಿದ್ದು, ಸಣ್ಣ ವಯಸ್ಸಿನಲ್ಲೇ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ. ಹೀಗಾಗಿ ಈ ಕುರಿತಂತೆ ಅಧ್ಯಯನ ಮಾಡುವ ಸಲುವಾಗಿ ಕ್ಯಾಲಿಫೋರ್ನಿಯ ವಿಶ್ವವಿದ್ಯಾಲಯವು ಸಂಶೋಧನೆ ಮಾಡಲು ಪ್ರಾರಂಭಿಸಿದೆ. ಪ್ರಾಥಮಿಕ ಸಂಶೋಧನೆಯ ಪ್ರಕಾರ ಕಾರಣವಿಲ್ಲದೆ ಅಕಾಲಿಕ ಮರಣವಪ್ಪುವ ಸಾಕಷ್ಟು ಮಂದಿ ಅತೀವ ಒತ್ತಡದಿಂದ ಹಾಗೂ ಮಾನಸಿಕ ಖಿನ್ನತೆಯಿಂದ ಸಾವನ್ನಪ್ಪುತ್ತಿರುವುದು ಕಂಡುಬಂದಿದೆ. ಅಕಾಲಿಕ ಮರಣವಪ್ಪುವವರ ಸಂಖ್ಯೆಯಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದು ಈ ಸಂಶೋಧನೆಯಲ್ಲಿ ತಿಳಿದುಬಂದಿದೆ.  

ಸಾಮಾನ್ಯವಾಗಿ ಒತ್ತಡ ಎಂಬುದು ಒಬ್ಬ ವ್ಯಕ್ತಿ ಜೀವಿತಾವಧಿಯ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ, ಸಂಶೋಧನೆ ಹೇಳುವ ಪ್ರಕಾರ ಆಯಸ್ಸು ಹೆಚ್ಚಿಸಲು ಕ್ಲೋಥೋ ಎಂಬ ಪ್ರೊಟೀನ್ ಅಂಶ ಪ್ರಮುಖವಾಗಿದೆ. ಅತೀವ ಒತ್ತಡ  ಹೃದಯ ಸಂಬಂಧಿ ತೊಂದರೆ, ಸಕ್ಕರೆ ಖಾಯಿಲೆ, ಕ್ಯಾನ್ಸರ್ ಹಾಗೂ ಮಾನಸಿಕ ಖಿನ್ನತೆ ಎಲ್ಲವೂ ಒಂದಕ್ಕೊಂದು ಸಂಬಂಧ ಹೊಂದಿದ್ದು, ಒತ್ತಡ ಹೆಚ್ಚಾದಂತೆ ದೇಹದಲ್ಲಿ ಕ್ಲೋಥೋ ಅಂಶ ಕಡಿಮೆಯಾಗುತ್ತದೆ. ಕ್ಲೋಥೋ ಅಂಶ ಕಡಿಮೆಯಾಗುತ್ತಾ ಹೋಗುತ್ತಿದ್ದಂತೆ ಮನುಷ್ಯನ ಆಯಸ್ಸಿನ ಪ್ರಮಾಣವೂ ಕಡಿಮೆಯಾಗುತ್ತದೆ. ಮಹಿಳೆಯರಲ್ಲಿ ಹೆಚ್ಚಿನ ಒತ್ತಡ ಇರುವುದರಿಂದ ಅವರಲ್ಲಿ ಕ್ಲೋಥೋ ಅಂಶ ಕಡಿಮೆಯಿರುತ್ತದೆ. ಹೀಗಾಗಿ ಹೆಚ್ಚಿನ ಮಹಿಳೆಯರು ಅಕಾಲಿಕ ಮರಣ ಹೊಂದಲು ಪ್ರಮುಖವಾಗಿ ಇದೇ ಕಾರಣವಾಗುತ್ತೆ ಎಂದು ಹೇಳಲಾಗುತ್ತಿದೆ.

ಮನುಷ್ಯನ ದೇಹದಲ್ಲಿ ಕ್ಲೋಥೋ ಅಂಶ ಎಷ್ಟು ಮುಖ್ಯ ಎಂಬುದು ನಮಗೆ ಈ ಸಂಶೋಧನೆಯಿಂದ ತಿಳಿದುಬಂದಿದ್ದು, ಆರೋಗ್ಯವಾಗಿರಲು ಹಾಗೂ ಆಯಸ್ಸು ಹೆಚ್ಚಿಸಲು ಕ್ಲೋಧೋ ಪ್ರೊಟೀನ್ ಅಂಶ ಪ್ರಮುಖ ಪಾತ್ರವಹಿಸುತ್ತದೆ. ಅಲ್ಲದೇ ಕ್ಲೋಥೋ ಅಂಶದೊಂದಿಗೆ ಮರಣ, ಅಕಾಲಿಕ ಮರಣಗಳು ಒಂದಕ್ಕೊಂದು ಸಂಬಂಧ ಹೊಂದಿದ್ದು, ಸಾಕಷ್ಟು ಅಕಾಲಿಕ ಮರಣ ಸಂಭವಿಸಿವುದು ಕ್ಲೋಥೋ ಎಂಬ ಅಂಶ ಕಡಿಮೆಯಾಗುವುದರಿಂದಲೇ ಆಗಿದೆ ಹಾಗೆಂದು ಎಲ್ಲಾ ಸಾವು ಇದರಿಂದಲೇ ಸಂಭವಿಸುತ್ತದೆ ಎಂದು ಹೇಳಲು ಸಾಧ್ಯವಿಲ್ಲ. ಕೆಲವು ಪ್ರಕರಣಗಳು ಕ್ಲೋಥೋ ಅಂಶ ಕಡಿಮೆಯಾಗಿಯೂ ಸಂಭವಿಸುತ್ತದೆ ಎಂದು ತಜ್ಞ ಅರಿಕ್ ಪ್ರಾತೋರ್ ಹೇಳಿದ್ದಾರೆ.

ಇಷ್ಟಕ್ಕೂ ಈ ಕ್ಲೋಥೋ ಎಂದರೇನು?....

ಕ್ಲೋಥೋ ಅಂಶ ಎಂಬುದು ಒಂದು ಪ್ರೋಟೀನ್ ಯುಕ್ತ ಅಂಶವಾಗಿದ್ದು, ಇದು ಮನುಷ್ಯನ ಆಯಸ್ಸು ವೃದ್ಧಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂದು ಸಂಶೋಧನೆಗಳು ತಿಳಿಸಿದೆ.



ಈ ಕುರಿತಂತೆ ಮಾಹಿತಿಯೊಂದನ್ನು ಮೊದಲು ಹೊರಹಾಕಿದ್ದು ಅಮೆರಿಕದ ಟೆಕ್ಸಾಸ್ ವಿಶ್ವವಿದ್ಯಾಲಯ. ಕ್ಲೋಥೋ ಎಂಬ ಅಂಶ ಅನುವಂಶಿಕವಾಗಿದ್ದು, ಯಾರಲ್ಲಿ ಅಧಿಕ ಪ್ರಮಾಣದ ಕ್ಲೋಥೋ ಅಂಶ ಇರುತ್ತದೆಯೋ ಅವರು ಹೆಚ್ಚು ಅವಧಿಯಲ್ಲಿ ಬದುಕುತ್ತಾರೆ ಎಂದು ಹೇಳಿದೆ. ಇದನ್ನು ಕಂಡು ಹಿಡಿಯುವ ಸಲುವಾಗಿ ಸಂಶೋಧನಾ ಸಂಸ್ಥೆಯು ವಂಶವಾಹಿ ಹೊಂದಿರದ ಇಲಿ ಹಾಗೂ ಅನುವಂಶಿಕವಾಗಿ ಬಂದಿರುವ ಇಲಿ ಎರಡನ್ನೂ ಅವಲೋಕನದಲ್ಲಿಟ್ಟು ಅಧ್ಯಯನ ನಡೆಸಿತು. ಅಧ್ಯಯನದಲ್ಲಿ ವಂಶವಾಹಿಯೇ ಇಲ್ಲದ ಇಲಿ 4 ತಿಂಗಳಿನಲ್ಲೇ ವೃದ್ಧಾಪ್ಯ ಪ್ರಾಪ್ತಿಯಾಗಿ ಸಾವನ್ನಪ್ಪಿದೆ. ಅನುವಂಶಿಕವಾಗಿ ಬಂದ ಇಲಿ ವಯಸ್ಕ ರೀತಿಯಲ್ಲಿಯೇ ಇದ್ದು, ಮತ್ತಷ್ಟು ತಿಂಗಳು ಬದುಕಿರುವುದು ಅಧ್ಯಯನದಲ್ಲಿ ಕಂಡುಬಂದಿದೆ.

ಕ್ಲೋಥೋ ಎಂಬ ಅಂಶದ ಬಗ್ಗೆ ಸಂಶೋಧನಾ ಅಧ್ಯಯನಗಳು ಹೊರಹಾಕಿರುವ ಈ ಮಾಹಿತಿಯು ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲೂ ಕುತೂಹಲ ಉಂಟುಮಾಡಿದ್ದು, ಕ್ಲೋಥೋ ಅಂಶ ಉತ್ಪಾದಿಸುವ ಮಾತ್ರೆಗಳಿವೆಯೇ ಎಂಬ ಕುತೂಹಲ ಪ್ರಶ್ನೆಗಳು ಸಾಮಾನ್ಯ ಜನರಲ್ಲಿ ಹುಟ್ಟುಹಾಕಿದೆ.

ಅಂತಹ ಪ್ರಶ್ನೆಗಳಿಗೆ ಉತ್ತರ ನಿಮ್ಮ ಮನೆಗಳಲ್ಲಿಯೇ ಇದೆ ಎಂಬುದು ಯಾರಿಗೂ ಗೊತ್ತಿಲ್ಲ. ಕ್ಲೋಥೋ ಅಂಶ ವೃದ್ಧಿಸಲು ಪ್ರಮುಖ ಕಾರಣ ವಿಟಮಿನ್ ಡಿ ಅಂಶ.


ವಿಟಮಿನ್ ಡಿ ಅಂಶ ಇರುವ ಮೀನು, ಮೊಟ್ಟೆ, ಹಾಲು, ಅಣಬೆ, ಸೋಯಾಬೀನ್ ಕಾಳು, ಬೀನ್ಸ್, ಆರೆಂಜ್, ಸೋಯಾ ಹಾಲು, ಧಾನ್ಯಗಳು, ಬೆಣ್ಣೆ ಆಹಾರಗಳನ್ನು ಪ್ರತಿನಿತ್ಯ ನಿಯಮಿತವಾಗಿ ಸೇವಿಸುವುದರಿಂದ ಕ್ಲೋಥೋ ಅಂಶ ವೃದ್ಧಿಸಿಕೊಳ್ಳಬಹುದು.

ಅತಿಯಾದರೆ ಅಮೃತವೂ ವಿಷವೇ
....
ಹಾಗೆಂದು ಕ್ಲೋಥೋ ಅಂಶ ಹೆಚ್ಚಿಸಿಕೊಳ್ಳಲು ಅತಿಯಾಗಿ ಆಹಾರ ಸೇವಿಸಿ ಇಲ್ಲದ ರೋಗಗಳನ್ನು ದೇಹಕ್ಕೆ ತಂದು ಕೊಳ್ಳಬೇಡಿ.


ಕ್ಲೋಥೋ ಅಂಶ ದೇಹದಲ್ಲಿ ಮಿತವಾಗಿದ್ದರೆ ಒಳ್ಳೆಯದು. ಇದು ಕಡಿಮೆಯಾದರೂ ಕಷ್ಟ, ಹೆಚ್ಚಾದರೂ ಕಷ್ಟವೇ. ಹಾಗಾದರೆ ನೀವು ಈ ಹಿಂದೆ ಹೇಳಿದೆಲ್ಲಾ ಸುಳ್ಳೇ ಎಂದು ಕೇಳಬಹುದು. ಇದಕ್ಕೆ ಉತ್ತರ ಕ್ಲೋಥೋ ದೇಹದಲ್ಲಿ ಪ್ರಮುಖ ಅಂಶ ಹೌದು. ಹಾಗೆಂದು ಆಯಸ್ಸು ಎಲ್ಲರಿಗಿಂತಲೂ ಹೆಚ್ಚಾಗಬೇಕೆಂದು ಹೆಚ್ಚು ವಿಟಮಿನ್ ಡಿ ಇರುವ ಆಹಾರ ಹೆಚ್ಚಾಗಿ ಸೇವಿಸಿದರೆ ದೇಹದಲ್ಲಿ ಖಾಯಿಲೆಗಳು ಉಂಟಾಗುತ್ತದೆ. ವಿಟಮಿನ್ ಡಿ ದೇಹದಲ್ಲಿ ಹೆಚ್ಚಾದರೆ ಸಕ್ಕರೆ ಖಾಯಿಲೆ, ಹೃದಯ ಸಂಬಂಧಿ ಕಾಯಿಲೆಗಳು ಉಂಟಾಗುತ್ತದೆ.

ಹಾಗಾದರೆ ದಿನದಲ್ಲಿ ವಿಟಮಿನ್ ಡಿ ಪೌಷ್ಟಿಕಾಂಶ ಇರುವ ಆಹಾರವನ್ನು ಎಷ್ಟು ಸೇವಿಸಬೇಕು?



ಕ್ಲೋಥೋ ಉತ್ಪಾದನೆಯಾಗುವ ವಿಟಮಿನ್ ಡಿ ಇರುವ ಅಹಾರವನ್ನು ಪ್ರತಿದಿನ 90. ಮಿ.ಗ್ರಾಂ. ನಷ್ಟು ಸೇವಿಸಬೇಕು. ಒಬ್ಬ ವ್ಯಕ್ತಿಗೆ ಪ್ರತಿದಿನ 270 ಮಿ.ಗ್ರಾಂನಷ್ಟು ಮಿಟಮಿನ್ ಡಿ ಬೇಕಾಗುತ್ತದೆ. ಇದರ ಅಂಶ ಹೆಚ್ಚಾದರೆ ತಲೆನೋವು, ಹೊಟ್ಟೆ ತೊಳೆಸುವುದು, ಹೃದಯ ಸಂಬಂಧಿ ಖಾಯಿಲೆ, ಮೂತ್ರಕೋಶದ ಖಾಯಿಲೆಗಳು ಸಂಭವಿಸುತ್ತದೆ.

-ಮಂಜುಳ.ವಿ.ಎನ್

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com