'ದಾಹ' ಶಮನಕ್ಕೆ ನೀರಿನ ರುಚಿ ಹೆಚ್ಚಿಸಿ

ಬೇಸಿಗೆ ಕಾಲ ಬಂತೆಂದರೆ, ಬಾಯಾರಿಕೆ ಹೆಚ್ಚು. ಏಷ್ಟೇ ನೀರು ಕುಡಿದರೂ ದಣಿವು ನೀಗುವುದಿಲ್ಲ. ಬಾಟಲಿ ನೀರಾಗಲಿ, ಮನೆ ನೀರಾಗಲಿ, ಫ್ರಿಡ್ಜ್ ನೀರಾದರೂ ಅಷ್ಟೇ, ಯಾವುದನ್ನೂ ಕುಡಿದರೂ
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೇಸಿಗೆ ಕಾಲ ಬಂತೆಂದರೆ, ಬಾಯಾರಿಕೆ ಹೆಚ್ಚು. ಏಷ್ಟೇ ನೀರು ಕುಡಿದರೂ ದಣಿವು ನೀಗುವುದಿಲ್ಲ. ಬಾಟಲಿ ನೀರಾಗಲಿ, ಮನೆ ನೀರಾಗಲಿ, ಫ್ರಿಡ್ಜ್ ನೀರಾದರೂ ಅಷ್ಟೇ, ಯಾವುದನ್ನೂ ಕುಡಿದರೂ ಬಾಯಾರಿಕೆ ನೀಗುವುದಿಲ್ಲ. ಮತ್ತೆ ಮತ್ತೆ ನೀರು ಕುಡಿಯಬೇಕು ಎನಿಸುತ್ತದೆ. ಹೀಗೆ ನೀವು ಕುಡಿಯುವ ನೀರನ್ನು ಮತ್ತಷ್ಟು ರುಚಿಯಾಗಿಸಿಕೊಂಡು ಕುಡಿದರೆ ಹೇಗಿರುತ್ತದೆ?. ನೀವು ಕುಡಿಯುವ ನೀರಿಗೆ ಸ್ವಲ್ಪ ರುಚಿ ಎಂಬ ಜೀವಶಕ್ತಿ ತುಂಬಿದರೆ ಆರೋಗ್ಯಕ್ಕೂ ಒಳ್ಳೆಯದು, ನಾಲಿಗೆಯ ರುಚಿಗೆ ಒಳ್ಳೆಯದು. ನೀರನ್ನು ರುಚಿಗೊಳಿಸಲು ಇಲ್ಲಿವೆ ಕೆಲವು ಸಲಹೆಗಳು...

1. ಉಪ್ಪು
ಎಲೆಕ್ಟ್ರೋಲೈಟ್ಸ್ ಪೌಡರ್ ಬಗ್ಗೆ ನಿಮಗೆ ತಿಳಿದೇ ಇದೆ. ರೋಗಿಗಳು ತುಂಬಾ ಸುಸ್ತಾದಾಗ ವೈದ್ಯರು ಇದನ್ನು ನೀರಲ್ಲಿ ಬೆರಸಿ ಕುಡಿಯಿರಿ ಎಂದು ಹೇಳುತ್ತಾರೆ. ಆದರೆ ಯಾವಾಗಲೂ ಎಲೆಕ್ಟ್ರೋಲೈಟ್ಸ್ ತಂದು ಕುಡಿಯಲು ಸಾಧ್ಯವಾಗುವುದಿಲ್ಲ. ಅದರ ಬದಲಾಗಿ ನೀವು ಕುಡಿಯುವ ನೀರಿಗೆ ಚಿಟಿಕೆ ಉಪ್ಪು ಬೆರೆಸಿ ಕುಡಿದರೆ. ಅದು ಎಲೆಕ್ಟ್ರೋಲೈಟ್ಸ್ ಪೌಡರ್ ಮಾದರಿಯಲ್ಲೇ ಕೆಲಸ ಮಾಡುತ್ತದೆ. ದೇಹದ ಶಕ್ತಿಯನ್ನು ಕಾಪಾಡುತ್ತದೆ. ನಿಮ್ಮಲ್ಲಿರುವ ಸುಸ್ತನ್ನು ಹೋಗಾಲಾಡಿಸುವಲ್ಲಿ ಸಹಕಾರಿಯಾಗುವುದಲ್ಲದೇ, ದಾಹವನ್ನು ಕಡಿಮೆ ಮಾಡುತ್ತದೆ. ನೀವು ಕುಡಿಯುವ ನೀರಿಗೆ ಚಿಟಿಕೆ ಉಪ್ಪು ಮತ್ತು ಚಿಟಿಕೆ ಸಕ್ಕರೆ ಬೆರೆಸಿ ಕುಡಿಯಬಹುದು.

2. ಶುಂಠಿ
ಹೆಚ್ಚು ಖಾರ ಪ್ರಿಯರಾಗಿದ್ದರೇ ಅಂತಹವರು ಸ್ವಲ್ಪ ಶುಂಠಿಯನ್ನು ಅರೆದು ಅದನ್ನು ನೀರಲ್ಲಿ ಹಾಕಿ ಕುಡಿಯಿರಿ. ಬಿಸಿ ನೀರಲ್ಲಿ ಶುಂಠಿಯ ಸಣ್ಣ ತುಂಡು ಹಾಕಿ ಕುದಿಸಿ, ಆರಿದ ನಂತರ ಕುಡಿಯಿರಿ. ಇದು ಗಂಟಲು ನೋವು, ತುರಿಕೆ, ಕೆಮ್ಮು,  ಕಡಿಮೆ ಮಾಡುತ್ತದೆ ಹಾಗೆ, ಸೀನುವಿಕೆ ಕಡಿಮೆಯಾಗುತ್ತದೆ.
3. ಸಿಟ್ರಸ್
ಸಿಟ್ರಸ್ ಹಣ್ಣುಗಳ ರಸವನ್ನು ನೀರಿನಲ್ಲಿ ಬೆರೆಸಿ ಕುಡಿದರೆ, ದೇಹವನ್ನು ತಂಪಾಗಿಡುವಲ್ಲಿ ಸಹಕಾರಿಯಾಗುತ್ತದೆ. ಕಿತ್ತಳೆ, ಮೂಸಂಬಿ, ನಿಂಬೆ, ದ್ರಾಕ್ಷಿ, ಪೈನಾಪಲ್, ಮಾವು, ಸ್ಟ್ರಾಬೆರ್ರಿ, ಕಿವಿ ಹಣ್ಣಿನಲ್ಲಿ ಸಿಟ್ರೆಸ್ ಅಂಶ ಹೆಚ್ಚಾಗಿವೆ. ಈ ಹಣ್ಣುಗಳಲ್ಲಿ ವಿಟಮಿನ್ ಸಿ ಮತ್ತು ಆ್ಯಂಟಿ ಆಕ್ಸಿಡೆಂಟ್ ಗಳು ಹೆಚ್ಚಾಗಿರುತ್ತದೆ. ಇದು ಮೆದುಳು ಮತ್ತು ನರವ್ಯೂಹದ ಆರೋಗ್ಯ ಕಾಪಾಡುತ್ತದೆ, ಹಾಗೆ ಜೀರ್ಣಶಕ್ತಿಗೆ ಸಹಕಾರಿಯಾಗುತ್ತದೆ. ಇವುಗಳಿಂದ ರಕ್ತಪರಿಚಲನೆಸುಧಾರಿಸುತ್ತದೆ.
ಹಣ್ಣಿನ ರಸವನ್ನು ತೆಗೆದು ಐಸ್ ಕ್ಯೂಬ್ ಗಳನ್ನಾಗಿ ತಯಾರಿಸಿಕೊಳ್ಳಿ. ಬೇಕಾದಾಗ ತಾವು ಕುಡಿಯುವ ನೀರಿಗೆ ಒಂದು ಐಸ್ ಕ್ಯೂಬ್ ಹಾಕಿಕೊಂಡು ಸೇವಿಸಿರಿ. ಉದಾಹರಣೆಗೆ ನಿಂಬೆರಸದಲ್ಲಿ ಐಸ್ ಕ್ಯೂಬ್ ತಯಾರಿಸಿಕೊಳ್ಳಿ. ನೀರು ಕುಡಿಯುವಾಗೆಲ್ಲ ಆ ಐಸ್ ಕ್ಯೂಬ್ ಹಾಕಿಕೊಂಡು ಕುಡಿಯಿರಿ.
4. ಮೂಲಿಕೆಗಳು
ಗಿಡ ಮೂಲಿಕೆಗಳನನ್ನು ಬಳಸಿ ನೀರನ್ನು ಮತ್ತಷ್ಟು ರುಚಿಗೊಳಿಸಬಹುದು. ಪುದೀನ, ನಿಂಬೆಹಣ್ಣಿನ ಎಲೆ, ಪಾರ್ಸ್ಲಿಯನ್ನು ಕುಡಿಯುವ ನೀರಿಗೆ ಬೆರೆಸಿದರೆ, ನೀವು ಕುಡಿಯುವ ನೀರು ಪರಿಮಳದಿಂದ ಕೂಡಿರುತ್ತದೆ. ಅಲ್ಲದೇ ಇದು ಆರೋಗ್ಯಕ್ಕೂ ಒಳ್ಳೆಯದು. ಹೆಚ್ಚಿನ ಪರಿಮಳ ಬೇಕಾದರೆ ಒಂದೆರಡು ಎಲೆಗಳನ್ನು ಹರೆದು ನೀರಲ್ಲಿ ಬೆರೆಸಬಹುದು. ಇದು ದೇಹಕ್ಕೆ ತಾಜಾತನ ನೀಡುತ್ತದೆ.

5. ಸೌತೆಕಾಯಿ
ದೇಹವನ್ನು ತಂಪಾಗಿಡುವಲ್ಲಿ ಇದರ ಪಾತ್ರ ದೊಡ್ಡದು. ಬಿಸಿಲ ಬೇಗೆಗೆ ದೇಹ ತಣಿದು ಹೋಗಿದ್ದರೆ, ಅದನ್ನು ನೀಗಿಸಬಲ್ಲ ಶಕ್ತಿ ಸೌತೆಕಾಯಿಗಿದೆ. ನೀರಿನ ಬಾಟಲಿಗೆ ಸೌತೆಕಾಯಿ ತುಂಡುಗಳನ್ನು ಹಾಕಿ. ಒಂದೆರಡು ನಿಮಿಷದ ನಂತರ ಅದನ್ನು ಕುಡಿಯುತ್ತಾ ಬನ್ನಿರಿ. ತ್ವಚೆಯನ್ನು ಸ್ವಚ್ಛವಾಗಿರಿಸುವುದರ ಜೊತೆಗೆ ಶರೀರದ ಜೀರ್ಣಾ೦ಗವ್ಯೂಹದ ಚಟುವಟಿಕೆಗಳಿಗೂ ಸಹಕಾರಿಯಾಗಲಿದೆ.

6. ವೈನ್
ಒಂದು ಸ್ಪೂನ್ ವೈನ್ (ದ್ರಾಕ್ಷಾರಸ) ನನ್ನು ನೀರಿಗೆ ಬೆರೆಸಿ ಕುಡಿಯಿರಿ. ಇದು ನೀರನ್ನು ಸಿಹಿಯಾಗಿಸುತ್ತದೆ. ಜಪಾನಿನ ಜನತೆ ಒಂದು ಚಮಚದಷ್ಟು ಉಮೇಶು ಅಥವಾ ವೈನ್ ನನ್ನು ನೀರಲ್ಲಿ ಬೆರೆಸಿ ಕುಡಿಯುತ್ತಾರೆ. ಹೀಗೆ ಮಾಡಿ ಕುಡಿಯುವುದರಿಂದ ನೀರನ್ನು ಸಿಹಿಗೊಳಿಸಿ, ಬಾಯಾರಿಕೆಯನ್ನು ನೀಗಿಸುತ್ತದೆ ಎಂದು ಅವರು ಹೇಳಿದ್ದಾರೆ.
7.ಬೆರ್ರಿ
ಬ್ಲೂ ಬೆರ್ರಿ ಮತ್ತು ಸ್ಟ್ರಾಬೆರ್ರಿಯನ್ನು ತುಂಡುಗಳನ್ನಾಗಿ ಕತ್ತರಿಸಿ ನೀರಲ್ಲಿ ಹಾಕಿ ಕುಡಿಯಿರಿ. ಇದು ತ್ವಚೆಯ ಕಾಂತಿ ಹೆಚ್ಚಿಸುತ್ತದೆ.
8. ವಿನೆಗರ್
ನೀರಿಗೆ ವಿನೆಗರ್ ಮಿಶ್ರಣ ಮಾಡಬಹುದು. ಸಿಟ್ರೆಸ್ ಮಾದರಿಯಲ್ಲಿಯೇ ಇದು ಕೆಲಸ ಮಾಡುತ್ತದೆ. ಇದರಿಂದ ವಿಟಮಿನ್ ಸಿ ಲಭ್ಯವಾಗುತ್ತದೆ.

-ಮೈನಾಶ್ರೀ.ಸಿ


ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com