ಚಾಕೊಲೇಟ್ ಪ್ರಿಯರಿಗೆ ಸಿಹಿ ಸುದ್ದಿ!

ಪ್ರತಿ ನಿತ್ಯ ಸಿಹಿ ತಿನ್ನಲು ಇಚ್ಛಿಸುವ ಚಾಕೋಲೇಟ್ ಪ್ರಿಯರಿಗೆ ಸಿಹಿ ಸುದ್ದಿ!...ಚಾಕೋಲೇಟ್ ತಿನ್ನುವುದರಿಂದ ಮೆದುಳಿನ ಶಕ್ತಿ ಹೆಚ್ಚಿ, ಬುದ್ಧಿಮಟ್ಟ ಕೂಡ ಹೆಚ್ಚಾಗುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ...
ಚಾಕೊಲೇಟ್ ಪ್ರಿಯರಿಗೆ ಸಿಹಿ ಸುದ್ದಿ!
ಚಾಕೊಲೇಟ್ ಪ್ರಿಯರಿಗೆ ಸಿಹಿ ಸುದ್ದಿ!
ವಾಷಿಂಗ್ಟನ್: ಪ್ರತಿ ನಿತ್ಯ ಸಿಹಿ ತಿನ್ನಲು ಇಚ್ಛಿಸುವ ಚಾಕೊಲೇಟ್ ಪ್ರಿಯರಿಗೆ ಸಿಹಿ ಸುದ್ದಿ!...ಚಾಕೊಲೇಟ್ ತಿನ್ನುವುದರಿಂದ ಮೆದುಳಿನ ಶಕ್ತಿ ಹೆಚ್ಚಿ, ಬುದ್ಧಿಮಟ್ಟ ಕೂಡ ಹೆಚ್ಚಾಗುತ್ತದೆ ಎಂದು ಹೊಸ ಅಧ್ಯಯನವೊಂದು ಹೇಳಿದೆ. 

ಚಾಕೊಲೇಟ್ ತಿಂದರೆ, ಹಲ್ಲುಗಳು ಹಾಳಾಗುತ್ತದೆ, ದೇಹದ ತೂಕ ಹೆಚ್ಚಾಗುತ್ತದೆ, ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಮಾತುಗಳನ್ನು ಕೇಳಿರಬಹುದು. ಆದರೆ, ಇದೀಗ ಇದೇ ಚಾಕೊಲೇಟ್ ದೇಹದ ಪ್ರಮುಖ ಭಾಗವಾಗಿರುವ ಮೆದುಳಿನ ಸಾಮರ್ಥ್ಯವನ್ನು ಹೆಚ್ಚುತ್ತದೆ ಎಂದರೆ ನಂಬಲೇಬೇಕು. ಹೀಗೆನ್ನುತ್ತಿರುವುದು ಸಂಶೋಧನೆ, ಚಾಕೊಲೇಟ್ ತಿನ್ನುವುದರಿಂದ ಚಾಕೊಲೇಟ್ ನಲ್ಲಿರುವ ಫ್ಲವನೋಲ್ ಗಳು ಮತ್ತು ಪೊಲಿಫೆನೋಲ್ಸ್ ಎಂಬ ರಾಸಾಯನಿಕ ಅಂಶ ಮಿದುಳಿನ ರಕ್ತದ ಪರಿಚಲನವನ್ನು ಹೆಚ್ಚುಸುತ್ತದೆ. ಇದರಿಂದ ಮಿದುಳಿನ ಸಾಮರ್ಥ್ಯ ಹೆಚ್ಚಾಗುತ್ತದೆ ಸಂಶೋಧನೆ ಹೇಳಿದೆ.

ದಕ್ಷಿಣ ಆಸ್ಟ್ರೇಲಿಯಾದ ವಿಶ್ವವಿದ್ಯಾಲಯ ಹಾಗೂ ಅಮೆರಿಕದ ಮೈನೆ ವಿಶ್ವವಿದ್ಯಾಲಯ ಈ ಬಗ್ಗೆ ಅಧ್ಯಯನವೊಂದನ್ನು ನಡೆಸಿದೆ. ಸಂಶೋಧನೆಗೆ 23-98 ವರ್ಷದ ವಿವಿಧ ಸಮುದಾಯಕ್ಕೆ ಸೇರಿದ 968 ಜನರನ್ನು ಬಳಸಿಕೊಂಡಿದೆ. ಈ ವೇಳೆ ಅಧ್ಯಯನಕ್ಕೊಳಪಟ್ಟವರಿಗೆ ಹಲವು ರೀತಿಯ ಪರೀಕ್ಷೆಗಳನ್ನು ನಡೆಸಲಾಗಿದೆ. ದೃಶ್ಯ-ಸ್ಥಳಕ್ಕೆ ಸಂಬಂಧಿಸಿದ ಪರೀಕ್ಷೆ, ಸಂಘಟನೆ, ಕಾರ್ಯಕಾರಿ ಮೆಮೋರಿ, ಸ್ಕ್ಯಾನಿಂಗ್, ಟ್ರಾಕಿಂಗ್, ಅಮೂರ್ತ ತರ್ಕ ಮತ್ತು ಮಿನಿ-ಮೆಂಟರ್ ಸ್ಟೇಟ್ ಪರೀಕ್ಷೆ ಹೀಗೆ ಹಲವಾರು ಪರೀಕ್ಷೆಗಳನ್ನು ನಡೆಸಲಾಗಿದೆ. 

ಈ ಎಲ್ಲಾ ಪರೀಕ್ಷೆಗಳಲ್ಲೂ ಹೆಚ್ಚು ಚಾಕೊಲೇಟ್ ತಿಂದವರು ಚುರುಕಾಗಿ ಕೆಲಸ ಮಾಡಿದ್ದಾರೆ. ಕಾರ್ಯಕಾರಿ ಶಕ್ತಿಯನ್ನು ಹೊರತು ಪಡಿಸಿದರೆ, ಹೃದಯ ಸಂಬಂಧಿ, ಜೀವನಶೈಲಿ ಮತ್ತು ಆಹಾರ ಅಂಶಗಳು ಹಾಗೂ ಸಂಖ್ಯಾಶಾಸ್ತ್ರದಂತಹ ಚಟುವಟಿಕೆಗಳ ಮೇಲೆ ಯಾವುದೇ ಪರಿಣಾಮವನ್ನು ಬೀರಿಲ್ಲ ಎಂದು ಅಧ್ಯಯನದಲ್ಲಿ ಹೇಳಲಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com