ಕತ್ತಲೆಯಲ್ಲಿ ಸ್ಮಾರ್ಟ್ ಫೋನ್ ನೋಡ್ತಾನೇ ಇದ್ರೆ ಕಣ್ಣಿನ ಸಮಸ್ಯೆ ಗ್ಯಾರಂಟಿ

ಮನುಷ್ಯನ ಜೀವನದಲ್ಲಿ ಸ್ಮಾರ್ಟ್ ಫೋನ್ ಎಂಬುದು ಜೀವನದ ಭಾಗವಾಗಿ ಹೋಗಿದೆ. ಎಲ್ಲಿಯೇ ಹೋದರೂ ತನ್ನ ಜೀವವನ್ನು ಜೋಪಾನ ಮಾಡುವಂತೆ ಸ್ಮಾರ್ಟ್ ಫೋನ್ ಗಳನ್ನು ಜೋಪಾನವಾಗಿಟ್ಟುಕೊಂಡಿರುತ್ತಾರೆ...
ಕತ್ತಲೆಯಲ್ಲಿ ಸ್ಮಾರ್ಟ್ ಫೋನ್ ನೋಡ್ತಾನೇ ಇದ್ರೆ ಕಣ್ಣಿನ ಸಮಸ್ಯೆ ಗ್ಯಾರಂಟಿ (ಸಾಂದರ್ಭಿಕ ಚಿತ್ರ)
ಕತ್ತಲೆಯಲ್ಲಿ ಸ್ಮಾರ್ಟ್ ಫೋನ್ ನೋಡ್ತಾನೇ ಇದ್ರೆ ಕಣ್ಣಿನ ಸಮಸ್ಯೆ ಗ್ಯಾರಂಟಿ (ಸಾಂದರ್ಭಿಕ ಚಿತ್ರ)

ಲಂಡನ್: ಮನುಷ್ಯನ ಜೀವನದಲ್ಲಿ ಸ್ಮಾರ್ಟ್ ಫೋನ್ ಎಂಬುದು ಜೀವನದ ಭಾಗವಾಗಿ ಹೋಗಿದೆ. ಎಲ್ಲಿಯೇ ಹೋದರೂ ತನ್ನ ಜೀವವನ್ನು ಜೋಪಾನ ಮಾಡುವಂತೆ ಸ್ಮಾರ್ಟ್ ಫೋನ್ ಗಳನ್ನು ಜೋಪಾನವಾಗಿಟ್ಟುಕೊಂಡಿರುತ್ತಾರೆ. ಮಲಗುವಾಗಲೂ ಫೋನ್ ನೋಡಿಯೇ ಮಲಗುವುದು ಕೂಡ ಇತ್ತೀಚಿನ ದಿನಗಳಲ್ಲಿ ರೂಢಿಯಾಗಿ ಹೋಗಿದೆ.

ಇಂತಹ ಜನರಿಗೆ ಆಘಾತ ನೀಡುವ ಸುದ್ದಿಯೊಂದು ಹೊರಬಿದ್ದಿದ್ದು, ಕತ್ತಲಲ್ಲಿ ಗಂಟೆಗಟ್ಟಲೆ ಸ್ಮಾರ್ಟ್ ಫೋನ್ ನೋಡುವವರ ಕಣ್ಣಿಗೆ ಕತ್ತಲೆ ಕವಿಯುವ ಸಾಧ್ಯತೆಗಳಿವೆ ಎಂದು ವರದಿಯೊಂದು ತಿಳಿಸಿದೆ.

ರಾತ್ರಿವೇಳೆಯಲ್ಲಿ ಸ್ಮಾರ್ಟ್ ಫೋನ್ ಗಳನ್ನು ನೋಡುವ ರೂಢಿಯಿಟ್ಟುಕೊಂಡಿದ್ದ ಇಬ್ಬರು ಮಹಿಳೆಯರು ಇದೀಗ ಅಂಧತ್ವದಲ್ಲಿ ಜೀವನ ನಡೆಸುವಂತಾಗಿದೆ. ಇಂಗ್ಲೆಂಡ್ ಮೂಲದ 22 ವರ್ಷದ ಮಹಿಳೆಯೊಬ್ಬರು ರಾತ್ರಿ ಮಲಗುವ ಮುನ್ನ ಸ್ಮಾರ್ಟ್ ಫೋನ್ ನೋಡುವ ರೂಢಿ ಮಾಡಿಕೊಂಡಿದ್ದರು. ಎಡಭಾಗದಲ್ಲಿ ಮಲಗುತ್ತಿದ್ದ ಮಹಿಳೆ ಬಲಗಣ್ಣಿನಿಂದ ನೇರವಾಗಿ ಫೋನ್ ನೋಡುತ್ತಿದ್ದಳು. ಇದರಂತೆ ಮಹಿಳೆ ಬಲಗಣ್ಣಿನ ದೃಷ್ಟಿಯನ್ನು ಕಳೆದುಕೊಂಡಿದ್ದಾಳೆಂದು www.npr.org ವರದಿ ಮಾಡಿದೆ.

ಇದರಂತೆಯೇ ಮತ್ತೊಂದು ಪ್ರಕರಣ ಕೂಡ ಬೆಳಕಿಗೆ ಬಂದಿದ್ದು, 40 ವರ್ಷದ ಮಹಿಳೆ ಕೂಡ ಇದೇ ರೀತಿಯ ಸಮಸ್ಯೆಯನ್ನು ಅನುಭವಿಸುತ್ತಿದ್ದಾರೆ. ಬೆಳಗಾಗುತ್ತಿದ್ದಂತೆ ಫೋನ್ ನೋಡುವ ಅಭ್ಯಾಸ ಬೆಳೆಸಿಕೊಂಡಿದ್ದ ಈ ಮಹಿಳೆ, ನಿದ್ರೆಯಿಂದ ಏಳುತ್ತಿದ್ದಂತೆ ತನ್ನ ಫೋನ್ ನನ್ನು ಪರಿಶೀಲಿಸುತ್ತಿದ್ದಳು. ಈ ಅಭ್ಯಾಸ ಸಾಕಷ್ಟು ವರ್ಷಗಳು ಮುಂದುವರೆದಿತ್ತು. ಇದೀಗ ಈ ಮಹಿಳೆ ಕಣ್ಣಿನ ಕಾರ್ನಿಯಾ ದೋಷ(ಪಾರದರ್ಶಕ ಪಟಲ)ದಿಂದ ಬಳಲುತ್ತಿದ್ದಾರೆ.

ಖಾಸಗಿ ಪತ್ರಿಕೆಯೊಂದಕ್ಕೆ ಹೇಳಿಕೆ ನೀಡಿರುವ ಲಂಡನ್ ಮೂರ್ ಫೀಲ್ಡ್ಸ್ ಕಣ್ಣಿನ ಆಸ್ಪತ್ರೆಯ ನೇತ್ರತಜ್ಞ ಒಮರ್ ಮಹ್ರೂ ಅವರು, ಹಾಸಿಗೆ ಮೇಲೆ ಮಲಗಿದ್ದ ವೇಳೆ ಒಂದು ಕಣ್ಣನ್ನು ಮುಚ್ಚಿಕೊಂಡು ಒಂದು ಕಣ್ಣಿನಿಂದ ಸ್ಮಾರ್ಟ್ ಫೋನ್ ನೋಡಿದ ಕಾರಣ ಈ ರೀತಿಯ ಸಮಸ್ಯೆ ಎದುರಾಗಿದೆ. ಕಣ್ಣಿನ ಅಕ್ಷಿಪಟಲ (ರೆಟಿನಾ) ಅದ್ಭುತವಾಗಿದ್ದು, ಕ್ಯಾಮರಾಗಳಿಗಿಂತಲೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಹಂತ ಹಂತದಲ್ಲಿ ಅಕ್ಷಿಪಟಲ ಬೆಳಕನ್ನು ಸ್ವೀಕರಿಸುತ್ತಾ ಹೋಗುತ್ತದೆ. ಆದರೆ ಯಾವಾಗ ಅಕ್ಷಿಪಟಲದ ಮೇಲಿನ ಒತ್ತಡ ತೀವ್ರವಾಗುತ್ತದೆಯೋ ಆಗ ಅದು ಕ್ರಮೇಣ ತನ್ನ ಸಾಮರ್ಥ್ಯವನ್ನು ಕಳೆದುಕೊಳ್ಳುತ್ತದೆ. ಇಂತಹುದೇ ಸಮಸ್ಯೆಯನ್ನು ಮಹಿಳೆ ಎದುರಿಸುತ್ತಿದ್ದು, ಇದು ಅಪರೂಪದ ಸಮಸ್ಯೆಯಾಗಿದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಇನ್ನು ಈ ಸಮಸ್ಯೆಯ ಅರ್ಥ ಮಾಡಿಕೊಳ್ಳಲು ಒಂದು ಪುಟ್ಟ ವೈಜ್ಞಾನಿಕ ಸಂಶೋಧನೆ ನಡೆಸಿದ ವೈದ್ಯರು, ಈ ಸಮಸ್ಯೆಯಿಂದ ಬಳಲುತ್ತಿರುವ ಈ ಇಬ್ಬರು ಮಹಿಳೆಯರಿಗೆ ಕೇವಲ ಎಡಗಣ್ಣಿನಿಂದ ಮಾತ್ರ ಸ್ಮಾರ್ಟ್ ಫೋನ್ ವೀಕ್ಷಿಸಲು ಹೇಳಿದರು. ಪ್ರತ್ಯೇಕ ಸಮಯಗಳಲ್ಲಿ ಮಾತ್ರ ಬಲಗಣ್ಣಿನ ಬಳಕೆ ಮಾಡಲು ವೈದ್ಯರು ಸೂಚಿಸಿದ್ದರು. ವೈದ್ಯರ ಸೂಚನೆ ಪಾಲಿಸಿದ ಮಹಿಳೆಯರನ್ನು ಪರೀಕ್ಷಿಸಿದ ವೈದ್ಯರಿಗೆ ಮಹಿಳೆಯರ ಕಣ್ಣು ತಾತ್ಕಾಲಿಕವಾಗಿ ಅಂಧತ್ವದತ್ತ ಸಾಗಿರುವುದು ತಿಳಿದುಬಂದಿದೆ.

ಕಡಿಮೆ ಬೆಳಕಿನಡಿಯಲ್ಲಿ (ರಾತ್ರಿ ವೇಳೆ ಅಥವಾ ಲೈಟ್ ಆಫ್ ಮಾಡಿ ಮೊಬೈಲ್ ವೀಕ್ಷಿಸುವುದು) ಸ್ಮಾರ್ಟ್ ಫೋನ್ ವೀಕ್ಷಿಸುವುದರಿಂದ ಕಣ್ಣಿನ ಅಕ್ಷಿಪಟಲದ ಮೇಲೆ ಅತಿ ಹೆಚ್ಚು ಒತ್ತಡ ಬೀಳುತ್ತದೆ ಮತ್ತು ಇದು ಅಂಧತ್ವಕ್ಕೆ ಕಾರಣವಾಗುತ್ತದೆ ಎಂಬ ವಿಚಾರವನ್ನು ವೈದ್ಯ ಮೆಹ್ರೂ ಮನಗಂಡಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ಪರೀಕ್ಷೆಯಿಂದ ಕೆಲ ವಿಚಿತ್ರ ಮಾಹಿತಿ ತಿಳಿದುಬಂದಿದ್ದು, ಕಡಿಮೆ ಬೆಳಕನಡಿಯಲ್ಲಿ ಕಣ್ಣಿನ ರೆಟಿನಾ ಸ್ಮಾರ್ಟ್ ಫೋನ್ ಪರದೆಯನ್ನೇ ಕೇಂದ್ರವಾಗಿಸಿಕೊಂಡು ಹೊಸ ಬೆಳಕಿನ ವ್ಯವಸ್ಥೆಗೆ ತನ್ನನ್ನು ತಾನು ಒಡ್ಡಿಕೊಳ್ಳುವ ನಿಟ್ಟಿನಲ್ಲಿ ಸಿದ್ಧತೆ ನಡೆಸುತ್ತದೆ. ಈ ವೇಳೆ ಅದರ ಮೇಲೆ ಹೆಚ್ಚಿನ ಒತ್ತಡ ಬಿದ್ದು, ಅದರ ವೀಕ್ಷಣಾ ಸಾಮರ್ಥ್ಯ ಕುಂಠಿತಗೊಳ್ಳುತ್ತದೆ ಎಂದು ಮೆಹ್ರೂ ಅಭಿಪ್ರಾಯಪಟ್ಟಿದ್ದಾರೆ.

ಅಲ್ಲದೆ ವೈದ್ಯ ಮೆಹ್ರೂ ಅವರ ಬಳಿಗೆ ಇಂತಹುದೇ ಸಮಸ್ಯೆ ಹೊತ್ತ ಸಾಕಷ್ಟು ರೋಗಿಗಳು ಆಗಮಿಸಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com