ಪೋಷಕರಲ್ಲಿ ಇಂಟರ್ನೆಟ್ ಗೀಳು, ಕೇಳೋರಿಲ್ಲ ಮಕ್ಕಳ ಗೋಳು

ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್ ಗಳಲ್ಲಿ ಗೂಗಲ್ ಎಂದು ಮುಳಿಗಿರುವ ಇಂದಿನ ಕಾಲದ ಪೋಷಕರು ತಮ್ಮ ಇಂಟರ್ನೆಟ್ ಗೀಳನ್ನು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಸ್ಮಾರ್ಟ್ ಫೋನ್, ಲ್ಯಾಪ್ ಟಾಪ್, ಕಂಪ್ಯೂಟರ್ ಗಳಲ್ಲಿ ಗೂಗಲ್ ಎಂದು ಮುಳಿಗಿರುವ ಇಂದಿನ ಕಾಲದ ಪೋಷಕರು ತಮ್ಮ ಇಂಟರ್ನೆಟ್ ಗೀಳನ್ನು ಮಕ್ಕಳಿಗೂ ಹಬ್ಬುತ್ತಿದ್ದಾರೆ. ತಂತ್ರಜ್ಞಾನದ ಮೇಲೆ ಹೆಚ್ಚು ಸಮಯ ಕಳೆಯುವುದರಿಂದ ಮನೆಗೆಲಸಗಳ, ವೈಯಕ್ತಿಕ ಕೆಲಸಗಳ ಮೇಲೆ ಆಸಕ್ತಿ ಕಡಿಮೆಯಾಗಿ ಗಂಡ, ಹೆಂಡತಿ, ಮಕ್ಕಳ ಮಧ್ಯೆ ಸಂವಹನ ಕೊರತೆ ಕಂಡುಬರುತ್ತದೆ ಎಂದು ಮನಃಶಾಸ್ತ್ರಜ್ಞರು ಹೇಳುತ್ತಾರೆ.

ಹೀಗಾಗಿ ಇಂದು ಯಾವುದೇ ಮನೆಗೆ ಹೋಗಿ ನೋಡಿ, ವಿರಾಮದ ಸಮಯಗಳಲ್ಲಿ ತಂದೆ-ತಾಯಿ ಆನ್ ಲೈನ್ ನಲ್ಲಿ ಬಹಳ ಹೊತ್ತು ಕಳೆಯುತ್ತಿದ್ದರೆ ಇತ್ತ ಮಕ್ಕಳು ಟಿವಿ ನೋಡುತ್ತಾ, ಇಲ್ಲವೇ ಟ್ಯಾಬ್ ನಲ್ಲಿ ವಿಡಿಯೋ ಗೇಮ್ ಗಳಲ್ಲಿ ಆಡುತ್ತಾ ಕಾಲ ಕಳೆಯುತ್ತಾರೆ. ಈ ವಾತಾವರಣ ನಗರ ಪ್ರದೇಶಗಳಲ್ಲಿ ಇನ್ನೂ ಹೆಚ್ಚಾಗಿ ಕಂಡುಬರುತ್ತದೆ. ಪೋಷಕರು ತಮ್ಮ ಸ್ನೇಹಿತರ ಜೊತೆ ಸಂಪರ್ಕದಲ್ಲಿರಲು ಅಥವಾ ಕೆಲಸದ ವಿಷಯವಾಗಿ ಆನ್ ಲೈನ್ ನಲ್ಲಿ ಕೆಲಸ ಮಾಡುತ್ತಿರಬಹುದು. ಈಗ ಏನೇ ಸಮಸ್ಯೆ ಬಂದರೂ ಗೂಗಲ್ ಮೊರೆ ಹೋಗುವುದು ಸಾಮಾನ್ಯವಾಗಿದೆ.

ಮಕ್ಕಳು ಅನುಕರಣೆ ಮಾಡುವುದು ಬೇಗ: ಮಕ್ಕಳು ದೊಡ್ಡವರು ಏನು ಮಾಡುತ್ತಾರೆಯೋ ಅದನ್ನು ನೋಡಿ ಕಲಿಯುತ್ತಾರೆ. ಹಾಗಾಗಿ ಪೋಷಕರಲ್ಲಿರುವ ಗೀಳು ಮಕ್ಕಳಿಗೂ ಬರುತ್ತವೆ ಎನ್ನುತ್ತಾರೆ ಬೆಂಗಳೂರಿನ ನಿಮ್ಹಾನ್ಸ್ ಕೇಂದ್ರದ ವೈದ್ಯಕೀಯ ಮನೋರೋಗ ತಜ್ಞ ಡಾ. ಮನೋಜ್ ಕುಮಾರ್ ಶರ್ಮ.

ತಾವು ಪ್ರತಿ ತಿಂಗಳು ಹೀಗೆ ನೋಡುತ್ತಿರುವ ಪ್ರಕರಣವನ್ನು ಅವರು ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಗೆ ವಿವರಿಸಿದ್ದಾರೆ.

ರಮೇಶ್ ದಂಪತಿಯ 4 ವರ್ಷದ ಮಗು ಹೆಚ್ಚಿನ ಸಮಯವನ್ನು ಲ್ಯಾಪ್ ಟಾಪ್ ಮೇಲೆ ಕಳೆಯುತ್ತಿತ್ತು. ಅದಕ್ಕೆ ಕಾರಣ ರಮೇಶ್ ಹೆಚ್ಚಿನ ಸಮಯವನ್ನು ಆನ್ ಲೈನ್ ನಲ್ಲಿ ಕಳೆಯುವುದು. ಬಹಳ ಸಮಯದವರೆಗೆ ರಮೇಶ್ ಪತ್ನಿ ಕುಟುಂಬದ ಆದಾಯ ಮೂಲವಾಗಿದ್ದರು. ಹಾಗಾಗಿ ಮಗುವಿಗೆ ತಾಯಿಗಿಂತ ತಂದೆ ಮೇಲೆ ಹೆಚ್ಚು ಹೊಂದಿಕೊಳ್ಳುತ್ತಿತ್ತು. ಕೊನೆಗೆ ರಮೇಶ್ ಪತ್ನಿ ತಂದೆ ಮಗುವನ್ನು ಚಟ ಬಿಡಿಸುವ ಕೇಂದ್ರಕ್ಕೆ ಕರೆದೊಯ್ದರು.

ಇನ್ನೊಂದು ಕೇಸಲ್ಲಿ ಸರಿತಾ ಎಂಬುವವರು ಇಂಟರ್ ನೆಟ್ ಗೀಳನ್ನು ಮಗುವಿನಿಂದ ಬಿಡಿಸಲು ಮಗುವಿಗೆ ಹೆಚ್ಚು ಸಮಯ ಕೊಡಲು ತಮ್ಮ ಉದ್ಯೋಗವನ್ನು ಬಿಟ್ಟು ಬಿಟ್ಟರು. ಮಗು ಮತ್ತು ಗಂಡ ಶಾಲೆ, ಆಫೀಸಿಗೆ ಹೋದ ನಂತರ ಒಂಟಿತನ ಕಾಡುತ್ತಿದ್ದ ಸರಿತಾ ಸ್ಮಾರ್ಟ್ ಫೋನ್ ನಲ್ಲಿ ಹೆಚ್ಚು ಸಮಯ ಕಳೆಯಲಾರಂಭಿಸಿದರು. ನಂತರ ಅವರಲ್ಲಿಯೂ ಗೀಳು ಹತ್ತಿಕೊಂಡು ಅವರಿಗೆ ಚಿಕಿತ್ಸೆ ನೀಡಲಾಯಿತು.

ಇಂಟರ್ನೆಟ್, ಸ್ಮಾರ್ಟ್ ಫೋನ್ ಗೀಳಿನ ಲಕ್ಷಣಗಳೆಂದರೆ ವಿಪರೀತ ಆಹಾರ ಸೇವನೆ, ನಿಯಂತ್ರಣ ಕಳೆದುಕೊಳ್ಳುವುದು, ವಿಡಿಯೋ ಗೇಮ್ ಆಡುವ ಹುಚ್ಚು, ಆನ್ ಲೈನ್ ಶಾಪಿಂಗ್, ಸಾಮಾಜಿಕ ತಾಣದಲ್ಲಿ ಬಹಳ ಸಮಯ ಕಳೆಯುವುದು, ಯೂಟ್ಯೂಬ್ ವಿಡಿಯೋ ಗಳನ್ನು ಬಹಳ ಸಮಯದವರೆಗೆ ನೋಡುತ್ತಾ ಕುಳಿತುಕೊಳ್ಳುವುದು ಇತ್ಯಾದಿ ಲಕ್ಷಣಗಳು ಇಂಟರ್ನೆಟ್ ಗೀಳಿನ ಸೂಚಕಗಳು.

ಇ-ಕಾಮರ್ಸ್ ಪೋರ್ಟಲ್ ನಲ್ಲಿ ಬಹಳ ಸಮಯದವರೆಗೆ ಕಳೆಯುವುದರಿಂದ ಹಣಕಾಸು ಸಮಸ್ಯೆಗಳು ಕೂಡ ತಲೆದೋರಬಹುದು ಎನ್ನುತ್ತಾರೆ ಮನಃಶಾಸ್ತ್ರಜ್ಞರು.
ಕೆಲವು ಪೋಷಕರಿಗೆ ತಾವು ಮತ್ತು ಮಕ್ಕಳು ಇಂಟರ್ ನೆಟ್ ಗೀಳಿಗೆ ಸಿಲುಕಿ ಹಾಕಿಕೊಂಡಿದ್ದೇವೆ ಎಂದು ಗೊತ್ತಿದ್ದರೂ ಅದರಿಂದ ಹೊರಬರುವುದು ಹೇಗೆ ಎಂದು ಗೊತ್ತಾಗುವುದಿಲ್ಲ.

ಆನ್ ಲೈನ್, ಇಂಟರ್ನೆಟ್ ಗೀಳಿನಿಂದ ಹೊರಬರಲು ಕೆಲವು ಟಿಪ್ಸ್:
1. ಇಂಟರ್ನೆಟ್ ಗೀಳಿನಿಂದ ಹೊರಬರಲು ಮೂರು ಮುಖ್ಯ ಅಂಶಗಳನ್ನು ಪಾಲಿಸಬೇಕು ಅವು ಪ್ರಸ್ತುತತೆ, ನಿರ್ಬಂಧ ಮತ್ತು ಉಡುಗೊರೆ.
2. ಮೊದಲಿಗೆ ನೀವು ಇಂಟರ್ನೆಟ್ ಗೀಳಿಗೆ ಯಾಕೆ ಬಲಿಯಾಗಿದ್ದೀರಿ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ನಾಲ್ಕು ಗೋಡೆ ಮಧ್ಯೆ ಬಹಳ ಸಮಯದವರೆಗೆ ಇರುವ ಗೃಹಿಣಿಯರಿಗೆ ಏಕತಾನತೆ, ಉದಾಸೀನ ಸಾಮಾನ್ಯ ಕಾರಣಗಳಾಗಿವೆ.
3. ಇದರಿಂದ ಹೊರಬರಲು ಮೊದಲು ನೀವು ದೃಢ ನಿರ್ಧಾರ ಮಾಡಿಕೊಳ್ಳಬೇಕು. ಮೊದಲಿಗೆ ಗುರಿಯೊಂದನ್ನು ನಿಗದಿಪಡಿಸಿ, ನಿಮ್ಮ ದಿನವನ್ನು ಬ್ಯುಸಿಯಾಗಿರುವಂತೆ ನೋಡಿಕೊಳ್ಳಿ. ಮನೆಯಲ್ಲಿ ಬೇರೆ ಕೆಲಸಗಳತ್ತ ಗಮನ ಹರಿಸಿ.
4. ಹೊಸ ಹವ್ಯಾಸಗಳನ್ನು ರೂಢಿಸಿಕೊಳ್ಳಿ. ಮನೆಯ ಹತ್ತಿರದ ಪಾರ್ಕ್ ಗೆ ಹೋಗಿ. ಅಲ್ಲಿ ಯಾರಾದರು ಸ್ನೇಹಿತರನ್ನು ಮಾಡಿಕೊಳ್ಳಿ. ಅವರ ಜೊತೆ ಹರಟಿ. ಸಾಧ್ಯವಾದಷ್ಟು ಗ್ಯಾಜೆಟ್ ಗಳಿಂದ ದೂರವಿರಿ.
5. ಇಂಟರ್ನೆಟ್ ಗೀಳು ಸೋಮಾರಿತನವನ್ನು ಹುಟ್ಟುಹಾಕುತ್ತದೆ.ಡ್ಯಾನ್ಸ್ ಕ್ಲಾಸ್ ಅಥವಾ ನಗೆಕೂಟ, ಫಿಟ್ನೆಸ್ ಕ್ಲಬ್ ಗೆ ಸೇರಿ ಮೈ ದಂಡಿಸಿಕೊಳ್ಳಿ.
6. ಇಂಟರ್ನೆಟ್ ನೋಡಬೇಕೆಂದರೆ ನಿರ್ದಿಷ್ಟ ಸಮಯಗಳಲ್ಲಿ ಮಾತ್ರ ನೋಡಿ. ನಿಮ್ಮ ಮಕ್ಕಳಿಗೂ ಅದನ್ನೇ ಅಭ್ಯಾಸ ಮಾಡಿ.
7. ಎಲ್ಲಿಯವರೆಗೆ ನೀವು ಗುರಿ ನಿಗದಿಪಡಿಸಿದ್ದೀರೋ, ಅಲ್ಲಿಯವರೆಗೆ ನಿಮ್ಮ ಗುರಿ ತಲುಪಿದೆಯೇ ಎಂದು ನೋಡಿಕೊಳ್ಳಿ. ನಿಮ್ಮ ಗುರಿ ತಲುಪಿದ್ದರೆ ಬಹುಮಾನ ಕೊ
ಟ್ಟುಕೊಳ್ಳಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com