ಜೀವನದ ಸಂಧ್ಯಾಕಾಲದಲ್ಲಿ ಗಟ್ಟಿಮುಟ್ಟಾಗಿರಲು ಪೌಷ್ಟಿಕಾಂಶದ ಆಹಾರ ತಿನ್ನಿ!

ಪ್ರತಿನಿತ್ಯ ಪೌಷ್ಟಿಕಾಂಶ ಸಹಿತ ಊಟ ಮಾಡಿದರೆ ಜೀವನದ ಸಂಧ್ಯಾಕಾಲದಲ್ಲಿ ಗಟ್ಟಿಮುಟ್ಟಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಪ್ರತಿನಿತ್ಯ ಪೌಷ್ಟಿಕಾಂಶ ಸಹಿತ ಊಟ ಮಾಡಿದರೆ ಜೀವನದ ಸಂಧ್ಯಾಕಾಲದಲ್ಲಿ ಗಟ್ಟಿ ಮುಟ್ಟಾಗಿರಬಹುದು ಎಂದು ತಜ್ಞರು ಹೇಳಿದ್ದಾರೆ.

ಹೌದು..ನಾವು ತಿನ್ನುವ ಪ್ರತೀ ಆಹಾರದಲ್ಲೂ ಪೌಷ್ಟಿಕಾಂಶ ಸಹಿತ ಆಹಾರವನ್ನು ತಿಂದರೆ ಜೀವನದ ಸಂಧ್ಯಾಕಾಲದಲ್ಲೂ ನಾವು ಹೆಚ್ಚು ಚಟುವಟಿಕೆಯಿಂದ ಕ್ರೀಯಾಶೀಲ ಜೀವನ ನಡೆಸಬಹುದು ಎಂದು ಆಹಾರತಜ್ಞರು ಹೇಳಿದ್ದಾರೆ.  ನಮ್ಮ ಪ್ರತಿನಿತ್ಯದ ಆಹಾರದಲ್ಲಿ ಯಥೇಚ್ಛ ಪೌಷ್ಟಿಕಾಂಶಗಳು ಇದ್ದರೆ ನಮ್ಮ ದೇಹದ ಮಾಂಸಖಂಡಗಳು ಬಲಗೊಳ್ಳುತ್ತವೆ. ಇದರಿಂದ ನಮಗೆ ವಯಸ್ಸಾದಾಗ ದೇಹದ ಮಾಂಸಖಂಡಗಳು ಶಕ್ತಿಗುಂದುವ ಅಪಾಯ ಕಡಿಮೆಯಾಗಿ  ವಯಸ್ಸಾದಾಗಲೂ ನಾವು ಹೆಚ್ಚೆಚ್ಚು ಕ್ರಿಯಾಶೀಲರಾಗಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರತೀ ಊಟದಲ್ಲೂ ಮೊಟ್ಟೆ ಅಥವಾ ಕಡಲೆಕಾಯಿ ತಿನ್ನಿ
ನಿಸರ್ಗದತ್ತ ಪೌಷ್ಟಿಕಾಂಶಗಳ ಆಗರವಾಗಿರುವ ಮೊಟ್ಟೆ ಮತ್ತು ಕಡಲೆಕಾಯಿಯಲ್ಲಿ ಅತೀ ಹೆಚ್ಚಿನ ಪ್ರಮಾಣದ ಪೌಷ್ಟಿಕಾಂಶಗಳಿದ್ದು, ನಾವು ಪ್ರತೀ ನಿತ್ಯ ಆಹಾರದಲ್ಲಿ ಇವುಗಳನ್ನು ಸೇರಿಸಿಕೊಂಡರೆ ದೇಹಕ್ಕೆ ಅಗತ್ಯವಾದ  ಪೌಷ್ಠಿಕಾಂಶಗಳು ದೊರೆಯುತ್ತವೆ. ಇದರಿಂದ ದೇಹದ ಮಾಂಸಖಂಡಗಳು ಕ್ರಮೇಣ ಪುನಶ್ಚೇತನ ಪಡೆಯುತ್ತವೆ ಎಂದು ಸಂಶೋದಕರು ಹೇಳಿದ್ದಾರೆ.

ಮಾಂಟ್ರಿಯಲ್ ನ ಮೆಕ್ ಗಿಲ್ ವಿಶ್ವವಿದ್ಯಾಲಯದ ಸಂಶೋಧಕರು ಸುಮಾರು 67ರಿಂದ 84 ವರ್ಷ ವಯಸ್ಸಿನೊಳಗಿನ 827 ಪುರುಷರು ಮತ್ತು 914 ಮಹಿಳೆಯರ ಮೇಲೆ ಈ ಸಂಶೋಧನೆ ನಡೆಸಿದ್ದು, ಸತತ ಮೂರು ವರ್ಷಗಳ  ಹಿರಿಯ ವಯಸ್ಕರ ಮಾಂಸಖಂಡ ಸಾಮರ್ಥ್ಯ ಪರೀಕ್ಷೆ ಮಾಡಿದ್ದಾರೆ. ಈ ಮೂರು ವರ್ಷಗಳಲ್ಲಿ ನಿತ್ಯ ತಮ್ಮ ಆಹಾರದಲ್ಲಿ ಮೊಟ್ಟೆ ಅಥವಾ ಕಡಲೆಕಾಯಿ ಸೇವಿಸುತ್ತಿದ್ದ ಹಿರಿಯ ವಯಸ್ಕರು ಹೆಚ್ಚೆಚ್ಚು ಕ್ರಿಯಾಶೀಲರಾಗಿದ್ದು, ಅವರ ಕೈ  ಮತ್ತು ಕಾಲುಗಳ ಮಾಂಸಖಂಡಗಳು ಹೆಚ್ಚು ಬಲದಿಂದ ಕೂಡಿತ್ತು. ಮೊಟ್ಟೆ ಅಥವಾ ಕಡಲೇಕಾಯಿ ಹೊರತು ಪಡಿಸಿದ ಆಹಾರ ತಿನ್ನುತ್ತಿದ್ದ ವಯಸ್ಕರು ಬಳಲುತ್ತಿದ್ದರಂತೆ. ಅವರ ಕೈ ಮತ್ತು ಕಾಲುಗಳ ಮಾಂಸಖಂಡಗಳು ತಮ್ಮ ಬಲ  ಕಳೆದುಕೊಂಡು, ಸಣ್ಣ ಪುಟ್ಟ ಕೆಲಸ ಮಾಡಲೂ ಕೂಡ ಹೆಚ್ಚು ಆಯಾಸ ಪಟ್ಟುಕೊಳ್ಳುತ್ತಿದ್ದರು ಎಂದು ಸಂಶೋಧಕರು ಹೇಳಿದ್ದಾರೆ.

ಪ್ರಮುಖವಾಗಿ ಹಿರಿಯ ವಯಸ್ಕರ ಮುಷ್ಟಿ ಹಿಡಿತ, ಕಾಲುಗಳಲ್ಲಿ ನಿಲ್ಲುವ, ಕುಳಿತಿದ್ದಾಗ ಏಳುವ ಸಾಮರ್ಥ್ಯ ಮತ್ತು ನಡೆದಾಡುವ ಸಾಮರ್ಥ್ಯ ಮತ್ತು ಭಾರದ ವಸ್ತುಗಳ ಎತ್ತುತ್ತಿದ್ದ ಸಾಮರ್ಥ್ಯಗಳಲ್ಲಿ ಭಿನ್ನತೆ ಕಂಡುಬಂದಿತು ಎಂದು  ಸಂಶೋಧಕರು ಹೇಳಿದ್ದಾರೆ.

ಇನ್ನು ಈ ಬಗ್ಗೆ ಮಾತನಾಡಿರುವ ವರದಿಯ ಲೇಖಕ ಮತ್ತು ಸಂಶೋಧಕ ಸ್ಟೆಫನೀ ಚೆವಾಲಿಯರ್ ಅವರು, ನಾವು ನಿತ್ಯ ಮಾಡುವ 3 ಊಟಗಳಲ್ಲಿ ಸಾಕಷ್ಟು ಪೌಷ್ಟಿಕಾಂಶಗಳು ಇರುವಂತೆ ನೋಡಿಕೊಂಡರೆ ಸಾಕು.  ಆರೋಗ್ಯವಾಗಿರುತ್ತೇವೆ. ದೇಹಾರೋಗ್ಯ, ದೇಹದ ಸಾಮರ್ಥ್ಯ ಹಾಗೂ ಮಾಂಸಖಂಡಗಳ ಬಲವರ್ಧನೆಗೆ ಇವು ನೆರವಾಗುತ್ತವೆ. ಮುಪ್ಪಿನಲ್ಲಿ ಮಾಂಸಖಂಡಗಳ ಸಾಮರ್ಥ್ಯ ಕಡಿಮೆಯಾಗುವುದನ್ನು ಮೊಟ್ಟೆ ಮತ್ತು ಕಡಲೆ  ಕಾಯಿಯಂತಹ ಆಹಾರಗಳಲ್ಲಿರುವ ಅಧಿಕ ಪೌಷ್ಠಿಕಾಂಶಗಳು ತಡೆಯುತ್ತವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com