ಒತ್ತಡ ರಹಿತ ಜೀವನಕ್ಕಾಗಿ ಕಚೇರಿಗೆ ಸೈಕಲ್ ತುಳಿಯಿರಿ!

ಪ್ರತಿನಿತ್ಯ ಸೈಕ್ಲಿಂಗ್ ಮಾಡುವುದರಿಂದ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ವೈದ್ಯರ ಅಭಿಮತ, ಆದರೆ ಇದೇ ಸೈಕ್ಲಿಂಗ್ ನಿಂದ ನಮ್ಮ ಮಾನಸಿಕ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಎಂಬ ವಿಚಾರವನ್ನು ಸಂಶೋಧಕರು ಸಾಬೀತು ಪಡಿಸಿದ್ದಾರೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ನವದೆಹಲಿ: ಪ್ರತಿನಿತ್ಯ ಸೈಕ್ಲಿಂಗ್ ಮಾಡುವುದರಿಂದ ದೈಹಿಕ ಆರೋಗ್ಯ ವೃದ್ಧಿಯಾಗುತ್ತದೆ ಎಂಬುದು ವೈದ್ಯರ ಅಭಿಮತ, ಆದರೆ ಇದೇ ಸೈಕ್ಲಿಂಗ್ ನಿಂದ ನಮ್ಮ ಮಾನಸಿಕ ಆರೋಗ್ಯ ಕೂಡ ವೃದ್ಧಿಯಾಗುತ್ತದೆ ಎಂಬ ವಿಚಾರವನ್ನು ಸಂಶೋಧಕರು ಸಾಬೀತು ಪಡಿಸಿದ್ದಾರೆ.

ಹೌದು.. ಪ್ರತಿನಿತ್ಯ ಕಚೇರಿಗೆ ಸೈಕ್ಲಿಂಗ್ ಮಾಡುವುದರಿಂದ ನಮ್ಮ ಮಾನಸಿಕ ಮತ್ತು ಬೌದ್ದಿಕ ಒತ್ತಡ ಮಾಯವಾಗುತ್ತದೆ ಎಂದು ಸಂಶೋಧಕರ ವರದಿಯೊಂದು ಹೇಳಿದೆ. ಅಂತೆಯೇ ನಮ್ಮ ಕೆಲಸದ ಮೇಲೂ ಸಕಾರಾತ್ಮಕ  ಪರಿಣಾಮ ಬೀರುತ್ತದೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಖ್ಯಾತ ಸಂಶೋಧಕರಾದ ಸ್ಟೀಫನ್ ಬ್ರೂಟಸ್, ರೋಶನ್ ಜಾವಡಿಯನ್ ಮತ್ತು ಅಲೆಕ್ಸಾಂಡ್ರಾ ಪಾನಾಸಿಯೋ ಅವರು ವಿವಿಧ ಸಾರಿಗೆ ವ್ಯವಸ್ಥೆ ಅಂದರೆ  ಸೈಕ್ಲಿಂಗ್, ಕಾರು ಮತ್ತು ಸಾರ್ವಜನಿಕ ಸಾರಿಗೆ ಗಳಲ್ಲಿ ಪ್ರಯಾಣಿಸುವ ಸಿಬ್ಬಂದಿಗಳ ಮನಸಿನ ಸ್ಥಿತಿ ಅವಲೋಕನ ಮಾಡಿದ್ದು, ಅದರ ಅನ್ವಯ ವರದಿ ತಯಾರಿಸಿದ್ದಾರೆ.

ಈ ವರದಿಯನ್ವ ಕಾರು ಮತ್ತು ಸಾರ್ವಜನಿಕ ಸಾರಿಗೆ ಮೂಲಕ ಕಚೇರಿಗೆ ಆಗಮಿಸುವ ಸಿಬ್ಬಂದಿಗಳಿಗಿಂತ ಸೈಕ್ಲಿಂಗ್ ನಲ್ಲಿ ಕಚೇರಿಗೆ ಆಗಮಿಸುವ ಸಿಬ್ಬಂದಿಗಳು ಹೆಚ್ಚು ಕ್ರಿಯಾಶೀಲರಾಗಿರುತ್ತಾರಂತೆ. ಅಂತೆಯೇ ಇತರೆ  ಸಿಬ್ಬಂದಿಗಳಿಗೆ ಹೋಲಿಕೆ ಮಾಡಿದರೆ ಸೈಕ್ಲಿಂಗ್ ನಲ್ಲಿ ಆಗಮಿಸುವ ಸಿಬ್ಬಂದಿಗಳು ಕಡಿಮೆ ಮಾನಸಿಕ ಮತ್ತು ಬೌದ್ಧಿಕ ಒತ್ತಡಗಳನ್ನು ಎದುರಿಸುತ್ತಾರೆ ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.

ಸಂಶೋಧಕರು ಖ್ಯಾತ ತಂತ್ರಾಂಶ ಅಭಿವೃದ್ಧಿ ಸಂಸ್ಥೆ ಆಟೋಡೆಸ್ಕ್ ನ ಸುಮಾರು 123 ಸಿಬ್ಬಂದಿಗಳ ದತ್ತಾಂಶ ಸಂಗ್ರಹ ಮಾಡಿದ್ದು, ಈ 123 ಸಿಬ್ಬಂದಿಗಳನ್ನು 3 ವಿಭಾಗಗಳಾಗಿ ವಿಂಗಡಿಸಲಾಗಿದೆ. ಸೈಕ್ಲಿಂಗ್ ಮೂಲಕ ಕಚೇರಿಗೆ  ಆಗಮಿಸುವವರು, ಕಾರಿನ ಮೂಲಕ ಮತ್ತು ಸಾರ್ವಜನಿಕ ಸಾರಿಗೆ ವ್ಯವಸ್ಛೆ ಮೂಲಕ ಕಚೇರಿಗೆ ಆಗಮಿಸುವ ಸಿಬ್ಬಂದಿಗಳಾಗಿ ವಿಗಡಿಸಲಾಗಿದೆ. ಈ ಸಿಬ್ಬಂದಿಗಳಿಗೆ ಆನ್ ಲೈನ್ ಮೂಲಕ ಹಲವು ಪ್ರಶ್ನೆಗಳನ್ನು ಸಂಶೋಧಕರು  ಕೇಳಿದ್ದು, ಅವರು ನೀಡಿರುವ ಉತ್ತರಗಳ ಆಧಾರದ ಮೇಲೆ ವರದಿ ತಯಾರಿಸಲಾಗಿದೆ.

ಮೂರು ವಿಭಾಗಗಳ ಸಿಬ್ಬಂದಿಗಳ ಮನಃಸ್ಥಿತಿ ವಿಭಿನ್ನವಾಗಿದ್ದು, ಕಾರು ಮತ್ತು ಸಾರ್ವಜನಿಕ ಸಂಪರ್ಕ ಸಾರಿಗೆ ವ್ಯವಸ್ಛೆ ಮೂಲಕ ಕಚೇರಿಗೆ ಆಗಮಿಸುವವರಿಗಿಂತಲೂ ಸೈಕ್ಲಿಂಗ್ ಮೂಲಕ ಕಚೇರಿಗೆ ಆಗಮಿಸುವ ಸಿಬ್ಬಂದಿಗಳು ಹೆಚ್ಚು  ಕ್ರಿಯಾಶೀಲರಾಗಿರುತ್ತಾರೆ ಮತ್ತು ಅತಿ ಕಡಿಮೆ ಒತ್ತಡ ಎದುರಿಸುತ್ತಾರೆ ಎಂದು ಸಂಶೋಧಕರು ತಮ್ಮ ವರದಿಯಲ್ಲಿ ಹೇಳಿದ್ದಾರೆ.

ಬೆಳ್ಳಂ ಬೆಳಗ್ಗೆ ಮಾನವನ ಮಾನಸಿಕ ಒತ್ತಡ ಆತನ ಇಡೀ ದಿನದ ಕಾರ್ಯಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ಬೆಳಗಿನ ನಮ್ಮ ಕಾರ್ಯಚಟುವಟಿಕೆಗಳು ಅಹ್ಲಾದಕರವಾಗಿರಬೇಕು ಎಂದು ಸಂಶೋಧಕ ಸ್ಟೀಫನ್  ಬ್ರೂಟಸ್ ಅಭಿಪ್ರಾಯಪಟ್ಟಿದ್ದಾರೆ. ಒಂದು ವೇಳೆ ಬೆಳಗ್ಗೆಯೇ ನಮ್ಮ ಮನಃಸ್ಥಿತಿ ಕೆಟ್ಟದಾಗಿದ್ದರೆ, ಅದು ಇಡೀ ದಿನದ ಕಾರ್ಯಚಟುವಟಿಕೆಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

20015ರಲ್ಲಿ ಬಿಡುಗಡೆಯಾಗಿದ್ದ ಒಂದು ಅಧ್ಯಯನ ಹೆಚ್ಚಿನ ಸೈಕ್ಲಿಂಗ್ ನಿಂದಾಗಿ ವಾಹನಗಳ ಬಳಕೆ ಕಡಿಮೆಯಾಗುತ್ತದೆ. ಆಗ ವಾತವರಣದಲ್ಲಿ ಸಿಒ2 ಹೊಗೆಯ ಪ್ರಮಾಣ ತಗ್ಗುತ್ತದೆ. ಇದರಿಂದ ವಾತಾವರಣ ಶುದ್ಧಿಯಾಗುತ್ತದೆ  ಎಂದು ಹೇಳಿತ್ತು.

ಒಟ್ಟಾರೆ ಸೈಕ್ಲಿಂಗ್ ಕೇವಲ ದೈಹಿಕ ಆರೋಗ್ಯಕ್ಕೆ ಅಷ್ಟೇ ಅಲ್ಲ ನಮ್ಮ ಮಾನಸಿಕ ಮತ್ತು ಬೌದ್ಧಿಕ ಆರೋಗ್ಯದ ಮೇಲೂ ಸಕಾರಾತ್ಮಕ ಪರಿಣಾಮ ಬೀರುತ್ತದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com