ಉತ್ತಮ ನಿದ್ದೆ, ಒಂದು ಕಪ್ ಕಾಫಿ ನೋವು ನಿವಾರಣೆಗೆ ಸಹಕಾರಿ

ನೋವು ನಿವಾರಣೆಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಉತ್ತಮ ನಿದ್ದೆ ಹಾಗೂ ಒಂದು ಕಪ್ ಕಾಫಿ ನೋವು ನಿವಾರಣೆಗೆ ಸಹಕಾರಿಯಾಗಬಲ್ಲದು.
ಉತ್ತಮ ನಿದ್ದೆ, ಒಂದು ಕಪ್ ಕಾಫಿ ನೋವು ನಿವಾರಣೆಗೆ ಸಹಕಾರಿ
ಉತ್ತಮ ನಿದ್ದೆ, ಒಂದು ಕಪ್ ಕಾಫಿ ನೋವು ನಿವಾರಣೆಗೆ ಸಹಕಾರಿ
Updated on
ನೋವು ನಿವಾರಣೆಗೆ ನೋವು ನಿವಾರಕ ಮಾತ್ರೆಗಳನ್ನು ತೆಗೆದುಕೊಳ್ಳುವ ಬದಲು ಉತ್ತಮ ನಿದ್ದೆ ಹಾಗೂ ಒಂದು ಕಪ್ ಕಾಫಿ ನೋವು ನಿವಾರಣೆಗೆ ಸಹಕಾರಿಯಾಗಬಲ್ಲದು. 
ಇಲಿಗಳ ಮೇಲೆ ಈ ಬಗ್ಗೆ ಸಂಶೋಧನೆ ನಡೆಸಲಾಗಿದ್ದು, ಸತತ 5 ದಿನಗಳು ಸರಿಯಾಗಿ ನಿದ್ದೆ ಮಾಡದೇ ಇದ್ದರೆ ಆರೋಗ್ಯವಂತ ವ್ಯಕ್ತಿಯಲ್ಲಿ ನೋವುಗಳನ್ನು ಉಲ್ಬಣಗೊಳಿಸಬಹುದು, ಸಾಮಾನ್ಯ ನೋವು ನಿವಾರಕದಿಂದ ನೋವು ನಿವಾರಣೆ ಸಾಧ್ಯವಿಲ್ಲ. ನಿದ್ದೆಯಿಂದ ಎಚ್ಚರಗೊಳಿಸಲು ಬಳಕೆ ಮಾಡಲಾಗುವ ಕೆಫೀನ್ ಮತ್ತು ಮೊಡಫಿನಿಲ್ ಔಷಧ ನಿದ್ರಾಭಂಗದಿಂದ ಉಂಟಾಗುವ ನೋವು ನಿವಾರಣೆ ಮಾಡಿದೆ ಎಂದು ಸಂಶೋಧನೆಯ ಮೂಲಕ ತಿಳಿದುಬಂದಿದೆ. 
ಇದು ಹಿಂದೆಂದೂ ಪರಿಗಣಿಸದೇ ಇರುವ ನೋವು ನಿವಾರಕವನ್ನು ಪ್ರತಿನಿಧಿಸುತ್ತದೆ. ಈ ರೀತಿಯ ಔಷಧಗಳು ಅತಿಯಾದ ನೋವನ್ನು ಕಡಿಮೆ ಮಾಡುತ್ತದೆ ಎಂದು ಬಾಸ್ಟನ್ ಮಕ್ಕಳ ಆಸ್ಪತ್ರೆಯ ಕ್ಲಿಫರ್ಡ್ ವೂಲ್ಫ್ ಹೇಳಿದ್ದಾರೆ. 
ಈ ಸಂಶೋಧನೆಯ ವರದಿ ನೇಚರ್ ಮೆಡಿಸನ್ ಎಂಬ ಜರ್ನಲ್ ನಲ್ಲಿ ಪ್ರಕಟವಾಗಿದ್ದು, ಸಂಶೋಧಕರು ಸಣ್ಣ ಪ್ರಮಾಣದ ನಿದ್ರಾ ಭಂಗ, ನಿದ್ರಾ ಹೀನತೆ ಹಾಗೂ ಅದರಿಂದ ಉಂಟಾಗುವ ನೋವಿನ ಪರಿಣಾಮಗಳನ್ನು ಅಧ್ಯಯನ ಮಾಡಿದ್ದು ಉತ್ತಮ ನಿದ್ದೆ, ಒಂದು ಕಪ್ ಕಾಫಿ ನೋವು ನಿವಾರಣೆಗೆ ಸಹಕಾರಿ ಎಂಬುದನ್ನು ಕಂಡುಕೊಂಡಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com