ಒಳ್ಳೆಯ ಆಹಾರ, ಧ್ಯಾನ, ಜೀವನಶೈಲಿ, ಇವು ಉತ್ತಮ ಆರೋಗ್ಯದ ಗುಟ್ಟು!

ಇತ್ತೀಚಿನ ದಿನಗಳಲ್ಲಿನ ಆಹಾರ ಪದ್ಧತಿ ಹಾಗೂ ಆಧುನಿಕ ಶೈಲಿಗಳು ಜನರು ಅತೀ ವೇಗವಾಗಿ ರೋಗಗಳಿಗೆ ತುತ್ತಾಗುವಂತೆ ಮಾಡುತ್ತಿವೆ. ಪ್ರತಿನಿತ್ಯ ನಾವು ಸೇವನೆ ಮಾಡುವ ಆಹಾರಗಳು ತಾಜಾವಾಗಿರುವುದಿಲ್ಲ. ಬಹುತೇಕ ಮಂದಿ ಫಾಸ್ಟ್ ಫುಡ್ ಗಳ ಮೊರೆ ಹೋಗುತ್ತಾರೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on
ಇತ್ತೀಚಿನ ದಿನಗಳಲ್ಲಿನ ಆಹಾರ ಪದ್ಧತಿ ಹಾಗೂ ಆಧುನಿಕ ಶೈಲಿಗಳು ಜನರು ಅತೀ ವೇಗವಾಗಿ ರೋಗಗಳಿಗೆ ತುತ್ತಾಗುವಂತೆ ಮಾಡುತ್ತಿವೆ. ಪ್ರತಿನಿತ್ಯ ನಾವು ಸೇವನೆ ಮಾಡುವ ಆಹಾರಗಳು ತಾಜಾವಾಗಿರುವುದಿಲ್ಲ. ಬಹುತೇಕ ಮಂದಿ ಫಾಸ್ಟ್ ಫುಡ್ ಗಳ ಮೊರೆ ಹೋಗುತ್ತಾರೆ. ಇದರಿಂದ ರೋಗಗಳ ಸಂಖ್ಯೆ ಕೂಡ ಬೆಳೆಯುತ್ತಾ ಹೋಗುತ್ತದೆ. 
ನಮ್ಮ ದೇಹದಲ್ಲಿ ಸೃಷ್ಟಿಯಾಗುವ ಖಾಯಿಲೆಗಳಿಗೆ ನಾವೇ ಜವಾಬ್ದಾರರಾಗಿರುತ್ತೇವೆ. ದಿನನಿತ್ಯ ಒಳ್ಳೆಯ ಆಹಾರ ಧ್ಯಾನ ಹಾಗೂ ಜೀವನಶೈಲಿಗಳು ಉತ್ತಮ ಆರೋಗ್ಯದ ಗುಟ್ಟಾಗಿರುತ್ತದೆ. ದೇಹದಲ್ಲಿ ಎದುರಾಗುವ ರೋಗಗಳಿಗೆ ಕಾರಣವಾಗುವ ಜೀವನ ಶೈಲಿಗಳು ಇಂತಿವೆ...
ದೈಹಿಕ ಚಟುವಟಿಕೆಗಳು ಇಲ್ಲದೇ ಇರುವುದು
ದೈಹಿಕ ಚಟುವಟಿಕೆಗಳಿಲ್ಲದೆ, ಕೆಲಸಗಳನ್ನು ಮಾಡದೆಯೇ ಸದಾಕಾಲ ಆರಾವಾಗಿರುವುದು ದೇಹದಲ್ಲಿರುವ ಕೊಬ್ಬನ್ನು ಕರಗಿಸುವುದಿಲ್ಲ. ದೈಹಿಕ ಚಟುವಟಿಕೆಯಿಲ್ಲದೇ ಇರುವುದು ಹಾಗೂ ಸ್ಥೂಲಕಾಯತೆ ಎರಡೂ ಒಂದಕ್ಕೊಂದು ಸಂಬಂಧಪಟ್ಟಿರುತ್ತದೆ. ಇಂತಹ ಬೆಳವಣಿಗೆಗಳು ಸುದೀರ್ಘ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. 
ಸೇವನೆ ಮಾಡುವ ಆಹಾರ
ಕೆಟ್ಟ ರಾಸಾಯನಿಕ ಪದಾರ್ಥಗಳಿಂದ ಮಾಡಿದ ಆಹಾರಗಳು ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ಇವು ನೇರವಾಗಿ ಜೀರ್ಣಕ್ರಿಯೆ ವ್ಯವಸ್ಥೆ ಮೇಲೆ ಪರಿಣಾಮ ಬೀರಲಿವೆ. 
ನಿದ್ರಾ ಕೊರತೆ
ಕೆಲಸದ ಒತ್ತಡಗಳಿಂದಾಗಿ ಜನರು ಇತ್ತೀಚಿನ ದಿನಗಳಲ್ಲಿ ನಿದ್ರೆ ಮಾಡುವ ಸಮಯ ಕೂಡ ಕಡಿಮೆಯಾಗುತ್ತಿದೆ. ಅನಿಯಮಿತವಾಗಿ ಮಲಗುವುದು ವ್ಯಕ್ತಿಯಲ್ಲಿ ಸ್ಥೂಲಕಾಯ ಹಾಗೂ ಮಧುಮೇಹದಂತಹ ರೋಗಗಳನ್ನುಂಟು ಮಾಡುತ್ತವೆ. 
ಒತ್ತಡ ಹೆಚ್ಚುವಿಕೆ
ಒತ್ತಡ ಎಂಬುದು ವ್ಯಕ್ತಿಯ ದೇಹದ ಮೇಲೆ ಗಂಭೀರ ಪರಿಣಾಮ ಬೀರುತ್ತವೆ. ದೇಹದಲ್ಲಿ ಕಾಣಿಸಿಕೊಳ್ಳುವ ಬಹುತೇಕ ಕಾಯಿಲೆಗಳು ಈ ಒತ್ತಡದಿಂದಲೇ ಕಾಣಿಸಿಕೊಳ್ಳುತ್ತೇವೆ. ಸ್ಥೂಲಕಾಯ, ಮಧುಮೇಹ, ಸಂಧಿವಾತಗಳಿಗೆ ಅನುವಂಶೀಯತೆ ಕೂಡ ಕಾರಣವಾಗಬಹುದು. ಆದರೆ, ಅವುಗಳ ಸಂಭವನೀಯತೆಗಳು ಬಹಳ ಕಡಿಮೆ. 
ನಮ್ಮಲ್ಲಿರುವ ಜೀವನಶೈಲಿ ನಮ್ಮ ದೇಹದಲ್ಲಿ ಉತ್ಪತ್ತಿಯಾಗುವ ಕಾಯಿಲೆಗಳಿಗೆ ಬಹುತೇಕ ಕಾರಣವಾಗಿರುತ್ತವೆ. ಇವುಗಳನ್ನು ನಿಯಂತ್ರಿಸಬೇಕಾದರೆ, ಆರೋಗ್ಯಕರವಾದ ಆಹಾರ ಸೇವನೆ ಅತ್ಯಗತ್ಯ. ಸೂಕ್ತ ಸಮಯಕ್ಕೆ ಸೂಕ್ತ ರೀತಿಯಲ್ಲಿ ಆಹಾರ ಸೇವನೆ ಮಾಡುವುದರಿಂದ ಬಹುತೇಕ ಕಾಯಿಲೆಗಳೂ ಕೂಡ ಗುಣವಾಗುತ್ತವೆ. 
ಆರೋಗ್ಯಕರವಾಗಿರಲು ಏನು ಮಾಡಬೇಕು? 
  • ಆರೋಗ್ಯಕರವಾದ ಜೀವನ ನಡೆಸಲು ಮೊದಲು ಆರೋಗ್ಯಕವಾದ ಆಹಾರ, ವಿಟಮಿನ್ಸ್ ಮತ್ತು ಐರನ್ ಇರುವಂತಹ ಆಹಾರಗಳನ್ನು ಸೇವನೆ ಮಾಡಬೇಕು. ಹೆಚ್ಚು ನೀರನ್ನು ಕುಡಿಯಬೇಕು. ತರಕಾರಿ, ಸೊಪ್ಪನ್ನು ಹೆಚ್ಚು ಸೇವನೆ ಮಾಡಬೇಕು. 
  • ದೇಹಕ್ಕೆ ವ್ಯಾಯಾಮ ಮಾಡುವುದರೊಂದಿಗೆ ಆಗಾಗ ಎಣ್ಣೆ ಸ್ನಾನ, ಎಣ್ಣೆಯಿಂದ ಮಸಾಜ್ ಮಾಡಿಕೊಳ್ಳಬೇಕು. 
  • ಮಧುಮೇಹ ನಿಯಂತ್ರಣಕ್ಕೆ ಮೆಂತ್ಯಕಾಳು ಅತ್ಯಂತ ಸಹಾಯಕವಾಗಿರುತ್ತದೆ. ಕುದಿಯುವ ನೀರಿನೊಂದಿಗೆ ಮೆಂತ್ಯೆಕಾಳುಗಳನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಅದು ತಣ್ಣಗಾದ ಬಳಿಕ ಕುಡಿಯುವುದರಿಂದ ಮಧುಮೇಹ ಬಹುತೇಕ ನಿಯಂತ್ರಣಕ್ಕೆ ಬಹುತ್ತದೆ. ಹಾಗಲಕಾಯಿ ರಸ ಕೂಡ ಮಧುಮೇಹವನ್ನು ನಿಯಂತ್ರಿಸುತ್ತದೆ. 
  • ದೇಹದಲ್ಲಿರುವ ಕೊಬ್ಬು ಹಾಗೂ ಕಾರ್ಬೊಹೈಡ್ರೇಟ್ಸ್ ಗಳನ್ನು ಆಗಾಗ ಪರಿಶೀಲನೆ ಮಾಡಿಕೊಳ್ಳುತ್ತಿರಬೇಕು. 
  • ಜೀರ್ಣಕ್ರಿಯೆ ಸರಿಯಾಗಬೇಕೆಂದರೆ ವಜ್ರಾಸನ ಮಾಡಬೇಕು. 
  • ಸ್ಥೂಲಕಾಯ ಕಡಿಮೆ ಮಾಡಿಕೊಳ್ಳಬೇಕೆಂದರೆ, ಬೆಚ್ಚಗಿನ ನೀರಿಗೆ ನಿಂಬೆ ಹಣ್ಣಿನ ರಸ, ಜೇನುತುಪ್ಪ ಸೇರಿಸಿ ಪ್ರತೀನಿತ್ಯ ಬೆಳಿಗ್ಗೆ ಕುಡಿಯಬೇಕು. 
  • ದೇಹದ ತೂಕ ಕಡಿಮೆ ಮಾಡಿಕೊಳ್ಳಲು ಏಲಕ್ಕಿ ಬೀಜಗಳನ್ನು ಕುದಿಯುವ ನೀರಿನಲ್ಲಿ ಹಾಕಿ ನಂತರ ಆ ನೀರನ್ನು ಕುಡಿಯುವುದರಿಂದ ದೇಹದ ತೂಕ ಕಡಿಮೆಯಾಗುತ್ತದೆ. ಪ್ರತೀನಿತ್ಯ 10,000 ಹೆಜ್ಜೆಗಳನ್ನಾದಲೂ ಹಾಕಬೇಕು. 
  • ಆಹಾರವನ್ನು ಪದಾರ್ಥಗಳನ್ನು ಚೆನ್ನಾಗಿ ಅಗೆದು ತಿನ್ನಿ, ಸಾಕಷ್ಟು ಪ್ರೋಟೀನ್ ಗಳನ್ನು ನಿಮ್ಮ ಆಹಾರ ಪಥ್ಯದಲ್ಲಿ ಸೇರಿಸಿ. ಎಣ್ಣೆ ಪದಾರ್ಥ, ಸಿಹಿ ಹಾಗೂ ತಂಪು ಪಾನೀಯಗಳಿಂದ ದೂರವಿರಿ. ಸಾಧ್ಯವಾದಷ್ಟು ಮನೆಯಲ್ಲಿಯೇ ತಯಾರಿಸಿದ ಆಹಾರವನ್ನು ಸೇವನೆ ಮಾಡಿದ. ನಿಮ್ಮ ಆಹಾರದ ಮೇಲೆ ನಿಮಗೆ ಗಮನವಿರಲಿ. ಬೆಳಗಿನ ಉಪಹಾರ ಸೇವಿಸುವುದನ್ನು ಮರೆಯದಿರಿ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com