ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಇಲ್ಲಿದೆ ಮನೆಮದ್ದು

ತಾವು ಸುಂದರಿಯಾಗಿ ಕಾಣಬೇಕೆಂದು ಯಾರು ತಾನೆ ಬಯಸುವುದಿಲ್ಲ?... ಪ್ರತೀಯೊಬ್ಬರಿಗೂ ತಾವು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಆದರೆ, ಸೌಂದರ್ಯ ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಸುಂದರಿಯಾಗಿ ಕಾಣಬೇಕೆಂದು ರಾಸಾಯನಿಕ ವಸ್ತುಗಳ ಮೊರೆ ಹೋಗುವವರೇ ಹೆಚ್ಚು...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ತಾವು ಸುಂದರಿಯಾಗಿ ಕಾಣಬೇಕೆಂದು ಯಾರು ತಾನೆ ಬಯಸುವುದಿಲ್ಲ?... ಪ್ರತೀಯೊಬ್ಬರಿಗೂ ತಾವು ಸುಂದರವಾಗಿ ಕಾಣಬೇಕೆಂದು ಬಯಸುತ್ತಾರೆ. ಆದರೆ, ಸೌಂದರ್ಯ ಕಾಪಾಡಿಕೊಳ್ಳುವುದು ಅಷ್ಟು ಸುಲಭವಲ್ಲ. ಸುಂದರಿಯಾಗಿ ಕಾಣಬೇಕೆಂದು ರಾಸಾಯನಿಕ ವಸ್ತುಗಳ ಮೊರೆ ಹೋಗುವವರೇ ಹೆಚ್ಚು. ಆದರೆ, ಸೌಂದರ್ಯ ದೀರ್ಘಕಾಲಿಕವಾಗಿ ಉಳಿಯಬೇಕೆಂದರೆ ಮನೆಮದ್ದುಗಳನ್ನು ಬಳಕೆ ಮಾಡುವುದು ಅತ್ಯಂತ ಉಪಯೋಗಕಾರಿ. 
ಮುಖದ ಸೌಂದರ್ಯ ಹೆಚ್ಚಿಸಿಕೊಳ್ಳಲು ಕೆಲ ಮನೆಮದ್ದುಗಳಿ ಇಲ್ಲಿವೆ...
  • ಕರಿಬೇವಿನ ಏಳೆಂಟು ಎಲೆಗಳನ್ನು ನೀರಿನಲ್ಲಿ ಕುದಿಸಿ, ಆ ನೀರು ಬೆಚ್ಚಗಾದ ಬಳಿಕ ಮುಖವನ್ನು ತೊಳೆಯುತ್ತಾ ಬಂದರೆ ಸೌಂದರ್ಯ ವೃದ್ಧಿಸುತ್ತದೆ ಹಾಗೂ ಮುಖದ ಮೇಲಿನ ಕಲೆಗಳೂ ಕೂಡ ಮಾಯವಾಗುತ್ತವೆ. 
  • ಹಸಿ ಹಾಲನ್ನು ಕೈ, ಕಾಲು ಹಾಗೂ ಮುಖಕ್ಕೆ ಹಚ್ಚಿಕೊಂಡು ಅರ್ಧ ಗಂಟೆ ಬಳಿಕ ಸ್ನಾನ ಮಾಡಿದರೆ ಚರ್ಮದ ಕಾಂತಿ ಹೆಚ್ಚುತ್ತದೆ. 
  • ಅಡುಗೆಗೆ ಬಳಸುವ ಚಕ್ಕೆ (ದಾಲ್ಚಿನ್ನಿ)ಯನ್ನು ಪುಡಿ ಮಾಡಿ ಅದಕ್ಕೆ ನಿಂಬೆರಸವನ್ನು ಸೇರಿಸಿ ಮೊಡವೆ ಇರುವ ಭಾಗಕ್ಕೆ ಹಚ್ಚಿ 5 ನಿಮಿಷಗಳ ಬಳಿಕ ತೊಳೆದರೆ ಮೊಡವೆಗಳು ಮಾಯವಾಗುತ್ತವೆ. 
  • ಕಡಲೇ ಹಿಟ್ಟಿನೊಂದಿಗೆ ಸ್ವಲ್ಪ ಅರಿಶಿನ ಬೆರೆಸಿ ಮುಖ ಹಾಗೂ ಕತ್ತಿಗೆ ಹಚ್ಚಿಕೊಂಡು 10-15 ನಿಮಿಷಗಳ ಬಳಿಕ ತೊಳೆದರೆ, ತ್ವಚೆ ಕೋಮಲದಂತಿರುತ್ತದೆ. 
  • ಸೌತೆಕಾಯಿಯನ್ನು ತೆಳುವಾಗಿ ಕತ್ತರಿಸಿ 10 ನಿಮಿಷಗಳ ಕಾರ ಕಣ್ಣಿನ ರೆಪ್ಪೆಗಳ ಮೇಲಿಟ್ಟುಕೊಂಡರೆ, ಕಣ್ಣಿನ ಸುತ್ತಲೂ ಇರುವ ಕಪ್ಪುವರ್ತುಲ ಮಾಯವಾಗುತ್ತದೆ. 
  • ಗಟ್ಟಿ ಮೊಸರಿನಲ್ಲಿರುವ ನೀರನ್ನು ತೆಗೆದು ಅದನ್ನು ಮುಖಕ್ಕೆ 10-15 ನಿಮಿಷ ಮಸಾಜ್ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ. 
  • ಮುಖವನ್ನು ತಣ್ಣಗಿನ ನೀರಿನಿಂದ ತೊಳೆದು, ಸೌತೆಕಾಯಿ ಬಿಲ್ಲೆಗಳಿಂದ ಮುಖವನ್ನು ನಯವಾಗಿ ಉಜ್ಜಿ 10-15 ನಿಮಿಷ ಮಸಾಜ್ ಮಾಡಿದರೆ, ಬಿಸಿಲಿನಿಂದ ಮುಖ ಕಪ್ಪಗಾಗುವುದು ನಿವಾರಣೆಯಾಗುತ್ತದೆ. 
  • ನಿಂಬೆ, ಕಿತ್ತಳೆ ಹಾಗೂ ಮೂಸಂಬಿ ಹಣ್ಣುಗಳ ಸಿಪ್ಪೆಯನ್ನು ಒಣಗಿಸಿ ಪುಡಿ ಮಾಡಿಟ್ಟುಕೊಂಡು ಹಾಲಿನೊಂದಿಗೆ ಬೆರೆಸಿ ಮುಖಕ್ಕೆ ಹೆಚ್ಚಿ 15-20 ನಿಮಿಷ ಬಿಟ್ಟು ತೊಳೆಯುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ. 
  • ಅರಿಶಿನ ಹಾಗೂ ಹಾಲಿನ ಕೆನೆ ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುವುದಲ್ಲದೆ, ಕಲೆಗಳೂ ಮಾಯವಾಗುತ್ತವೆ. 
  • ಪಪ್ಪಾಯಿ ಕಾಯಿಯ ಸಿಪ್ಪೆಯಿಂದ ಮುಖಕ್ಕೆ ಮಸಾಜ್ ಮಾಡುವುದರಿಂದ ಕಲೆಗಳು ಮಾಯವಾಗುತ್ತವೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com