ಮಕ್ಕಳಿಗೆ ಸಮತೋಲಿತ ಆಹಾರದ ಪೋಷಣೆ ನೀಡುವುದು ಹೇಗೆ? ಇಲ್ಲಿದೆ ಮಾಹಿತಿ

ಮಕ್ಕಳಿಗೆ ಅಗತ್ಯವಿರುವ ಪೌಷ್ಠಿಕಯುಕ್ತ  ಆಹಾರವನ್ನು ಸಮತೋಲಿತ ಪ್ರಮಾಣದಲ್ಲಿ ನೀಡುವುದು ಪೋಷಕರಿಗೆ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ಪೌಷ್ಠಿಕಾಂಶ ಆಹಾರ ಎಂದರೆ ಅದು ಎಂದಿಗೂ ಪರಿಮಾಣಾತ್ಮಕವಾಗಿರುವುದಿಲ್ಲ, ಅದು  ಗುಣಾತ್ಮಕ ಆಹಾರವಾಗಿರುತ್ತದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಹೈದ್ರಾಬಾದ್ : ಮಕ್ಕಳಿಗೆ ಅಗತ್ಯವಿರುವ ಪೌಷ್ಠಿಕಯುಕ್ತ  ಆಹಾರವನ್ನು ಸಮತೋಲಿತ ಪ್ರಮಾಣದಲ್ಲಿ ನೀಡುವುದು ಪೋಷಕರಿಗೆ ಯಾವಾಗಲೂ ಸವಾಲಿನಿಂದ ಕೂಡಿರುತ್ತದೆ. ಪೌಷ್ಠಿಕಾಂಶ ಆಹಾರ ಎಂದರೆ ಅದು ಎಂದಿಗೂ ಪರಿಮಾಣಾತ್ಮಕವಾಗಿರುವುದಿಲ್ಲ, ಅದು  ಗುಣಾತ್ಮಕ ಆಹಾರವಾಗಿರುತ್ತದೆ.

1 ರಿಂದ 10 ನೇ ವಯಸ್ಸಿನವರೆಗೂ ಪೌಷ್ಠಿಕ ಆಹಾರ ಅಗತ್ಯ

1 ರಿಂದ 10ನೇ ವಯಸ್ಸು ಬೆಳವಣಿಗೆಯ ಹಂತವಾಗಿರುತ್ತದೆ. ಈ ಹಂತದಲ್ಲಿ ಉತ್ತಮ ಜೀರ್ಣಕಾರಿ ವ್ಯವಸ್ಥೆಯನ್ನು ರೂಪಿಸಲು ಸಂಸ್ಕರಿಸಿದ ತಾಜಾ ಆಹಾರವನ್ನು ನೀಡಬೇಕಾಗುತ್ತದೆ. ಇದರಿಂದಾಗಿ ರೋಗ ನಿರೋಧಕ ಶಕ್ತಿಯು ವೃದ್ದಿಸುತ್ತದೆ.  ವಿಭಿನ್ನ ಆಹಾರದ ಅಭಿರುಚಿ ಹಾಗೂ ಕುತೂಹಲಗಳು ಕೂಡಾ ಅವರ ಮೂಲಭೂತ ಅಗತ್ಯತೆಯನ್ನು ನಿರ್ಧರಿಸುತ್ತದೆ.

ಈ ಕೆಳಗಿನ ಆಹಾರಗಳನ್ನು ಆದ್ಯತೆ ಮೇರೆಗೆ ನೀಡಬಹುದು

ಕಾಲಕ್ಕೆ ತಕ್ಕಂತೆ ತರಕಾರಿಗಳು ( ತಾಜಾ ಮತ್ತು ಬೇಯಿಸಿದ) , ಮೊಸರು, ಮಜ್ಜಿಗೆ,  ಅನ್ನ, ರೊಟ್ಟಿ, ಉಪ್ಪಿಟ್ಟು, ಇಡ್ಲಿ, ದೋಸೆ, ಪೋಹಾ, ತುಪ್ಪು, ಬೆಣ್ಣೆ, ಮೊಟ್ಟೆ, ಚಿಕ್ಕನ್, ಮೀನು, ಪನ್ನೀರ್, ಮತ್ತಿತರ ಪೌಷ್ಟಿಕಯುಕ್ತ ಆಹಾರವನ್ನು ನೀಡಬೇಕು. ಆದರೆ, ಇವುಗಳನ್ನು ಹೆಚ್ಚಾಗಿ ಕೊಡಬಾರದು. ಹಿತ ಮಿತವಾಗಿ ಸಾಧ್ಯವಾದಷ್ಟು ಎಲ್ಲ ಆಹಾರಗಳನ್ನು ಪೂರೈಸಬೇಕು.

ಬೆಳಗಿನ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟವನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು.  ಜೊತೆಗೆ ಐದು ಗ್ರಾಮ್ ತುಪ್ಪ ನೀಡಬೇಕು. ಇದರಿಂದಾಗಿ ದೇಹದಲ್ಲಿ ಉತ್ತಮ ಕೊಬ್ಬಿನ ಆಮ್ಲ ಹಾಗೂ ವಿಟಮಿನ್ ಡಿ ಸಿಗುತ್ತದೆ. ಹಣ್ಣಿನ ಸ್ನ್ಯಾಕ್ಸ್ , ಸಾಲಾಡ್ಸ್,  ಒಣದ್ರಾಕ್ಷಿ ಹಾಗೂ ಕಡ್ಲೆಕಾಯಿ ನೀಡಬಹುದು,  ಆಟಕ್ಕೂ ಮುನ್ನ ಒಂದು ಗ್ಲಾಸ್  ಪೂರ್ತಿ ಹಾಲನ್ನು ಕುಡಿಸಬೇಕು. ಹೀಗೆ ಮಾಡುವುದರಿಂದ ಮಕ್ಕಳಲ್ಲಿ ಜೀರ್ಣಕ್ರಿಯೆ ವ್ಯವಸ್ಥೆಯನ್ನು ಸಮತೋಲಿತ ಪ್ರಮಾಣದಲ್ಲಿ ಇಡಬಹುದಾಗಿದೆ. 

10ರಿಂದ 18 ವರ್ಷದ ಮಕ್ಕಳಿಗೆ

ಸಾಮಾನ್ಯವಾಗಿ 10 ರಿಂದ 18 ವರ್ಷದ ಮಕ್ಕಳಲ್ಲಿ ಹಾರ್ಮೋನುಗಳಲ್ಲಿ ಬದಲಾವಣೆ ಕಾಣಬಹುದಾಗಿದೆ. ಮಾನಸಿಕ ಹಾಗೂ ದೈಹಿಕವಾಗಿ ಬೆಳವಣಿಗೆಯ ಈ ಹಂತದಲ್ಲಿ ಸಕ್ಕರೆಯಿಂದ ಸಂಸ್ಕರಿಸಿದ ಆಹಾರಕ್ಕಾಗಿ ಹಂಬಲಿಸಬಹುದು. ಇಂತಹ ಸಂದರ್ಭದಲ್ಲಿ  ನಿಂಬೆ ರಸ ಅಥವಾ ಮಿಂಟ್  ಕುಡಿಯಬೇಕು. ಇದರಿಂದಾಗಿ ಜೀರ್ಣಕ್ರಿಯೆ ಚೆನ್ನಾಗಿ ಆಗುವುದರ ಜೊತೆಗೆ ಸ್ನ್ಯಾಕ್ ಕಡೆಗಿನ ಮನಸ್ಸನ್ನು  ತಡೆಯುತ್ತದೆ. ಸಕ್ಕರೆಯಿಂದ ಸಂಸ್ಕರಿಸಿದ ಆಹಾರ ತಿನ್ನುವ ಬದಲು ಸಿಹಿ ಹಾಗೂ ಹುಳಿಯಾದ ಹಣ್ಣುಗಳನ್ನು ತಿನ್ನಬೇಕು, 

ಕ್ರೀಡಾ ಚಟುವಟಿಕೆಗೆ ಪೌಷ್ಟಿಕಾಂಶ ಆಹಾರ ಅತ್ಯಗತ್ಯ

ದೈಹಿಕವಾಗಿ ಸಕ್ರಿಯವಾಗಿರುವ ಮಕ್ಕಳು ತಮ್ಮ ದೈನಂದಿನ ಶಕ್ತಿಯ ಅಗತ್ಯಗಳನ್ನು ಕಾರ್ಬೋಹೈಡ್ರೆಟ್  ಮೂಲಗಳಿಂದ ಪಡೆಯಬೇಕು. ಗೋಧಿ, ಬಜ್ರಾ, ಜೋಳದ ರೀತಿಯ ಧಾನ್ಯಗಳಿಂದ ಮಾಡಿದ  ಅನ್ನ, ರೊಟ್ಟಿ ಅಥವಾ ದೋಸೆಯನ್ನು ಸೇವಿಸಬೇಕು ಇದರಿಂದಾಗಿ ಮಕ್ಕಳು ದೈಹಿಕವಾಗಿ ಉತ್ತಮ ರೀತಿಯಲ್ಲಿ ಬೆಳೆವಣಿಗೆಯಾಗುತ್ತಾರೆ. ಇವುಗಳೊಂದಿಗೆ ಚಿಕ್ಕನ್, ತರಕಾರಿಗಳು ಹಾಗೂ ಮಜ್ಜಿಗೆ ನೀಡಬೇಕು. ಒಣದ್ರಾಕ್ಷಿ, ಗೋಡಂಬಿ, ತುಪ್ಪ ಮತ್ತಿತರ ಡ್ರೈಪ್ರೋಟ್ಸ್ ತಿನ್ನುವುದರಿಂದ ದೇಹಕ್ಕೆ ಶಕ್ತಿ ವೃದ್ದಿಸುತ್ತದೆ. 

ಬೆಳೆಯುತ್ತಿರುವ ಮಕ್ಕಳಿಗೆ ಅಗತ್ಯವಾಗಿ  ನೀಡಬೇಕಾದ ಆಹಾರಗಳು, ಸಿಹಿಯಾದ,  ಹುಳಿ, ಉಪ್ಪು, ಕರ ಮಸಾಲೆಯುಕ್ತ ಪದಾರ್ಥಗಳು, ಪ್ಯಾಕೇಜ್ ಮಾಡಿದ ಆಹಾರವನ್ನು ತಪ್ಪಿಸಿಬೇಕು. ಮಕ್ಕಳ ಅಭಿರುಚಿ ಹಾಗೂ ಹಸಿವನ್ನು ಗುರುತಿಸಬೇಕು. ಮಕ್ಕಳನ್ನು ಆಹಾರ ತಿನ್ನುವಂತೆ ಒತ್ತಾಯಿಸಬಾರದು. ಹೆಚ್ಚು ಹೆಚ್ಚು ತಿನ್ನಿಸಿ ಬುದ್ದಿಹೀನರನ್ನಾಗಿ ಮಾಡಬೇಡಿ, ಹಣ್ಣುಗಳನ್ನು ರಸ ಮಾಡಿ ಮಕ್ಕಳಿಗೆ ನೀಡುವುದನ್ನು ತಪ್ಪಿಸಬೇಕು.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com