ತೂಕ ಏಕೆ ಕಡಿಮೆಯಾಗುತ್ತಿಲ್ಲ ಎಂಬ ಚಿಂತೆಯೇ? ಅದಕ್ಕೆ ಕಾರಣ ಹೀಗಿರಬಹುದು

ದೇಹದ ತೂಕ ದಪ್ಪವಾದರೆ ಎಲ್ಲರಲ್ಲಿಯೂ ಚಿಂತೆ ಕಾಡುತ್ತದೆ. ತೂಕ ಇಳಿಸಿಕೊಳ್ಳಲು ಕೆಲವರು ಹರಸಾಹಸ ...

Published: 02nd March 2019 12:00 PM  |   Last Updated: 02nd March 2019 01:53 AM   |  A+A-


Representational image

ಸಾಂದರ್ಭಿಕ ಚಿತ್ರ

Posted By : SUD SUD
Source : The New Indian Express
ದೇಹದ ತೂಕ ದಪ್ಪವಾದರೆ ಎಲ್ಲರಲ್ಲಿಯೂ ಚಿಂತೆ ಕಾಡುತ್ತದೆ. ತೂಕ ಇಳಿಸಿಕೊಳ್ಳಲು ಕೆಲವರು ಹರಸಾಹಸ ಪಡುತ್ತಾರೆ. ಕೆಲವರು ತೂಕ ಕಡಿಮೆ ಮಾಡಿಕೊಳ್ಳಲು ಏನೇನೋ ಕಸರತ್ತುಗಳನ್ನು ಮಾಡಿದರೂ ತೂಕ ಕಡಿಮೆಯಾಗುವುದಿಲ್ಲ.

ಇದಕ್ಕೆ ಕಾರಣವೇನು? ಎಷ್ಟು ಪ್ರಯತ್ನಿಸಿದರೂ ಕೆಲವರ ತೂಕ ಕಡಿಮೆಯಾಗದಿರಲು ಇಲ್ಲಿವೆ ಕೆಲವು ಕಾರಣಗಳು:

ಗುರಿ ಸ್ಪಷ್ಟವಾಗಿಲ್ಲದಿರುವುದು; ತೂಕ ಕಡಿಮೆ ಮಾಡಿಕೊಳ್ಳಬೇಕು ಎಂದು ನಿರ್ಧರಿಸಿದೆ ಅದರಲ್ಲಿ ನಿರ್ದಿಷ್ಟ ಗುರಿಯಿರಬೇಕು. ಇದು ನಮ್ಮ ಕೈಯಿಂದ ಆಗುವ ಕೆಲಸವಲ್ಲ ಎಂದು ಅರ್ಧದಲ್ಲಿ ಕೈ ಚೆಲ್ಲುವವರೇ ಹೆಚ್ಚು ಮಂದಿ. ದೇಹ ತೂಕವನ್ನು ಸಹಜವಾಗಿ ಯಾವುದೇ ಔಷಧ ಮತ್ತು ರಾಸಾಯನಿಕ ವಿಧಾನಗಳ ಮೊರೆ ಹೋಗದೆ ಕಡಿಮೆ ಮಾಡಿಕೊಳ್ಳಲು ಸಮಯ ಮತ್ತು ತಾಳ್ಮೆ ಅತಿ ಮುಖ್ಯ. ಇಷ್ಟು ಅವಧಿಯಲ್ಲಿ ಇಷ್ಟು ತೂಕವನ್ನು ಕಳೆದುಕೊಳ್ಳಲೇಬೇಕು ಎಂದು ಗುರಿಯಿಟ್ಟುಕೊಳ್ಳಬೇಕು.

ತಿನ್ನುವ ಆಹಾರ ನಿಯಮಿತ: ನಾವು ಸೇವಿಸುವ ಆಹಾರ ನಮ್ಮ ದೇಹ ಮತ್ತು ಮನಸ್ಸಿಗೆ ಖುಷಿ ನೀಡಬೇಕು. ಮನುಷ್ಯ ದುಃಖದಲ್ಲಿದ್ದಾಗ ಅಥವಾ ಒತ್ತಡದಲ್ಲಿದ್ದಾಗ ಸಿಕ್ಕಿದ್ದನ್ನು ಸಿಕ್ಕಾಪಟ್ಟೆ ತಿಂದುಬಿಡುತ್ತಾರೆ. ಇದು ಅನಾರೋಗ್ಯಕ್ಕೆ ಎಡೆಮಾಡಿಕೊಡುವುದಲ್ಲದೆ ಪದೇ ಪದೇ ತಿನ್ನುವ ಅಭ್ಯಾಸ ಹುಟ್ಟಿಕೊಳ್ಳುತ್ತದೆ. ಇಂಗ್ಲಿಷಿನಲ್ಲಿ ಎಮೋಶನಲ್ ಈಟಿಂಗ್ ಎಂದು ನಾವೇನು ಕರೆಯುತ್ತಾವೆ ಅದು ನಮ್ಮ ಅಭ್ಯಾಸವಾಗಬಾರದು. ನಿಮ್ಮ ದೇಹಕ್ಕೆ ಏನು ಬೇಕು ಮತ್ತು ಎಷ್ಟು ಬೇಕು ಎಂಬುದನ್ನು ನಿರ್ಧಾರ ಮಾಡಿಕೊಳ್ಳಿ.

ಡಯಟ್ ನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು: ದೇಹದ ತೂಕ ಇಳಿಸಿಕೊಳ್ಳುವುದು ಎಂದರೆ ಏನೂ ತಿನ್ನದಿರುವುದು, ಕೆಲವು ಆಹಾರ ಪದಾರ್ಥಗಳನ್ನು ಮಾತ್ರ ತಿನ್ನುವುದು ಎಂದರ್ಥವಲ್ಲ. ಮನುಷ್ಯನ ದೇಹಕ್ಕೆ ಎಲ್ಲಾ ರೀತಿಯ ಆಹಾರಗಳು ಕೂಡ ನಿಯಮಿತ ಪ್ರಮಾಣದಲ್ಲಿ ಸಿಗಬೇಕಾಗುತ್ತದೆ. ಆಹಾರಗಳ ಏರುಪೇರುಗಳಿಂದ ಕೂಡ ದೇಹದ ತೂಕದಲ್ಲಿ ವ್ಯತ್ಯಾಸವಾಗುತ್ತದೆ.

ಶಾರೀರಿಕ ಸಮಸ್ಯೆಗಳು: ಎಲ್ಲವೂ ಸರಿಯಾಗಿ ಹೋಗುತ್ತಿದೆಯಾದರೂ ತೂಕ ಕಡಿಮೆಯಾಗುತ್ತಿಲ್ಲವಲ್ಲ ಎಂಬ ಚಿಂತೆ ಕೆಲವೊಮ್ಮೆ ಕಾಡಬಹುದು. ಕರುಳಿನ ಸಮಸ್ಯೆಗಳು, ಹಾರ್ಮೋನುಗಳ ಅಸಮತೋಲನ, ಥೈರಾಯಿಡ್ ಸಮಸ್ಯೆಗಳಿದ್ದರೆ ತೂಕ ಕಡಿಮೆಯಾಗುವುದಿಲ್ಲ, ಮೊದಲು ಇವುಗಳಿಗೆ ಚಿಕಿತ್ಸೆ ಪಡೆದುಕೊಳ್ಳಬೇಕು.

ತೂಕ ಕಳೆದುಕೊಳ್ಳುವುದೇ ಅಂತಿಮ ಗುರಿಯಲ್ಲ: ತೂಕ ಕಡಿಮೆ ಮಾಡಿಕೊಳ್ಳುವುದು ಕೊನೆಯ ಗುರಿ ಎಂದು ಎಂದಿಗೂ ಭಾವಿಸಬಾರದು. ಅದು ಅವಸರದ ತೀರ್ಮಾನವಾಗಿಬಿಡುತ್ತದೆ. ಆರೋಗ್ಯಕರವಾಗಿ ಮನುಷ್ಯ ತೂಕ ಕಳೆದುಕೊಳ್ಳಬೇಕು. ಒತ್ತಡ, ಅನಾರೋಗ್ಯಕರ ಜೀವನ ಶೈಲಿಯಿಂದ ತೂಕ ಕಳೆದುಕೊಳ್ಳಲು ಸಾಧ್ಯವಿಲ್ಲ.
ತೂಕ ಕಳೆದುಕೊಳ್ಳುವುದರ ಬದಲು ಆರೋಗ್ಯ ಪಡೆದುಕೊಳ್ಳುವುದು ಜೀವನದ ಅಂತಿಮ ಗುರಿಯಾಗಬೇಕು.
Stay up to date on all the latest ಆರೋಗ್ಯ news with The Kannadaprabha App. Download now
facebook twitter whatsapp