ಜಗತ್ತಿನ ನಿದ್ದೆಗೆಡಿಸಿರುವ ಕೊರೋನಾ ವೈರಸ್ ನಿಂದ ಮಕ್ಕಳ ರಕ್ಷಣೆ ಹೇಗೆ?

ಚೀನಾದಲ್ಲಿ ರಾಷ್ಟ್ರದಲ್ಲಿ ಕೊರೋನಾವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ವೈರಸ್ ನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೇವಲ ಚೀನಾ ರಾಷ್ಟ್ರದಲ್ಲಷ್ಟೇ ಅಲ್ಲದೆ, ವಿಶ್ವದಾದ್ಯಂತ ಈ ವೈರಸ್ ಭೀತಿ ಹುಟ್ಟಿಸಿದೆ. ಇಷ್ಟಕ್ಕೂ ಏನಿದು ಕೊರೋನಾ ವೈರಸ್? ವೈರಸ್ ನಿಂದ ಪುಟ್ಟ ಮಕ್ಕಳ ರಕ್ಷಣೆ ಹೇಗೆ? ಎಂಬುದರ ಮಾಹಿತಿ ಇಲ್ಲಿದೆ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಚೀನಾದಲ್ಲಿ ರಾಷ್ಟ್ರದಲ್ಲಿ ಕೊರೋನಾವೈರಸ್ ಅಟ್ಟಹಾಸ ಹೆಚ್ಚಾಗುತ್ತಿದ್ದು, ದಿನದಿಂದ ದಿನಕ್ಕೆ ವೈರಸ್ ನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಲೇ ಇದೆ. ಕೇವಲ ಚೀನಾ ರಾಷ್ಟ್ರದಲ್ಲಷ್ಟೇ ಅಲ್ಲದೆ, ವಿಶ್ವದಾದ್ಯಂತ ಈ ವೈರಸ್ ಭೀತಿ ಹುಟ್ಟಿಸಿದೆ. ಇಷ್ಟಕ್ಕೂ ಏನಿದು ಕೊರೋನಾ ವೈರಸ್? ವೈರಸ್ ನಿಂದ ಪುಟ್ಟ ಮಕ್ಕಳ ರಕ್ಷಣೆ ಹೇಗೆ? ಎಂಬುದರ ಮಾಹಿತಿ ಇಲ್ಲಿದೆ...

ಕೊರೋನಾ ವೈರಸ್ ವೊದು ಜಾತಿಯ ವೈರಸ್ ಆಗಿದೆ. ಸೂಕ್ಷ್ಮ ದರ್ಶಕದಲ್ಲಿ ಇದು ಕಿರೀಟ ರೀತಿ ಕಾಣಿಸುತ್ತದೆ. ಲ್ಯಾಟಿನ್ ಭಾಷೆಯಲ್ಲಿ ಕೊರೋನಾ ಎಂದರೆ ಕಿರೀಟ ಎಂದರ್ಥ. ಹೀಗಾಗಿ ವೈರಸ್'ಗೆ ಕೊರೋನಾ ಹೆಸರು. ಚೀನಾದ ವುಹಾನ್ ನಗರದಲ್ಲಿನ ಅಕ್ರಮ ವನ್ಯ ಜೀವಿ ಮಾಂಸ ಕೇಂದ್ರದ ಮೂಲಕ ಮಾನವರಿಗೆ ವೈರಸ್ ತಗುಲಿದೆ.

ವಿಶ್ವ ಆರೋಗ್ಯ ಸಂಸ್ಥೆ ಅನ್ವಯ ಕೊರೋನಾ ವೈರಸ್ ಸೀ-ಫುಡ್ ಗೆ ಸಂಬಂಧಿಸಿದ್ದಾಗಿದೆ ಎಂದು ಹೇಳಲಾಗುತ್ತಿದೆ. ವಿಷಾಣುಗಳ ವರ್ಗಕ್ಕೆ ಸೇರಿದ ಈ ಕೊರೋನಾ ವೈರಸ್ ನಿಂದ ಜನರು ರೋಗಕ್ಕೀಡಾಗುತ್ತಿದ್ದು, ಜೀವ ಕಳೆದುಕೊಳ್ಳುತ್ತಿದ್ದಾರೆ. 

ವೈರಸ್ ಒಂಟೆ, ಬೆಕ್ಕು, ಬಾವಲಿ ಸೇರಿದಂತೆ ಹಲವಾರು ಪ್ರಾಣಿಗಳಲ್ಲೂ ಪ್ರವೈಶಿಸುತ್ತಿದೆ. ಪ್ರಾಣಿಗಳ ದೇಹ ಸೇರಿದ ಈ ವೈರಸ್ ಅಪರೂಪ ಎಂಬಂತೆ ಮನುಷ್ಯರ ದೇಹವನ್ನೂ ಸೇರುತ್ತಿದೆ. 

ಸೋಂಕು ತಗುಲಿದವರಿಗೆ ತೀವ್ರ ಶೀತ, ಕೆಮ್ಮು, ಗಂಟಲು ಕಟ್ಟುವಿಕೆ, ಉಸಿರಾಟದ ತೊಂದರೆ, ತಲೆನೋವು, ಜ್ವರದ ಸಮಸ್ಯೆಗಳು ಉಂಟಾಗುತ್ತವೆ. ಬಳಿಕ ಇದು ನ್ಯೂಮೋನಿಯಾ ಹಾಗೂ ಕಿಡ್ನಿಗಳಿಗೆ ಹಾನಿಯುಂಟು ಮಾಡುತ್ತದೆ. ಕೊರೋನಾ ವೈರಸ್ ಸೋಂಕು ಒಬ್ಬರಿಂದ ಮತ್ತೊಬ್ಬರಿಗೆ ಹರಡುವ ಸಾಂಕ್ರಾಮಿಕ ರೋಗ ಕೂಡ ಆಗಿದ್ದು, ವೈರಸ್ ಹರಡದಂತೆ ಅದನ್ನು ನಿಯಂತ್ರಣದಲ್ಲಿಡಲು ಹಾಗೂ ತಡೆಗಟ್ಟಲು ಇಡೀ ವಿಶ್ವವೇ ಹರಸಾಹಸ ಪಡುತ್ತಿದೆ. ಈ ವೈರಸ್ ಮಕ್ಕಳ ಮೇಲೆ ಅತಿ ಶೀಘ್ರದಲ್ಲಿ ಹರಡುವ ಸಾಧ್ಯತೆಗಳಿದ್ದು, ಮಕ್ಕಳ ರಕ್ಷಣೆ ಹೇಗೆ ಎಂಬುದನ್ನು ಈ ಕೆಳಕಂಡಂತೆ ವಿವರಿಸಲಾಗಿದೆ...

  1. ಸೋಂಕು ವ್ಯಕ್ತಿಯಿಂದ ವ್ಯಕ್ತಿಗೆ ಹರಡುವ ಸಾಧ್ಯತೆಗಳಿದ್ದು, ವ್ಯಕ್ತಿಗೆ ಕೆಮ್ಮುವಾಗ ಮತ್ತು ಸೀನುವಾಗ ಬೀಳುವ ಹನಿಗಳ ಮೂಲಕ ಹರಡುತ್ತವೆ. ಈ ಹನಿಗಳು ನಾಲ್ಕರಿಂದ 5 ದಿನಗಳ ಕಾಲ ಬಿದ್ದ ಸ್ಥಳದಲ್ಲಿಯೇ ಇರಲಿದ್ದು, ಇದನ್ನು ಮುಟ್ಟಿದ ವ್ಯಕ್ತಿಗೂ ಸೋಂಕು ಹರಡುತ್ತವೆ. ಸೋಂಕು ಹರಡುವುದನ್ನು ತಡೆಯಲು ವೈದ್ಯಕೀಯ ದರ್ಜೆಯ ಮಾಸ್ಕ್ ಗಳನ್ನು ಬಳಸುವುದು ಮುಖ್ಯವಾಗುತ್ತದೆ. ಪ್ರಮುಖವಾಗಿ ಜನದಟ್ಟಣೆ ಸ್ಥಳಗಳಲ್ಲಿ ಸೋಂಕು ಹರಡುವ ಅಪಾಯ ಹೆಚ್ಚಾಗಿರುತ್ತದೆ. ರಸ್ತೆಗಳಲ್ಲಿ ತೆರಳುವ ವೇಳೆ ಅಪರಿಚ ವ್ಯಕ್ತಿಗಳೊಂದಿಗೆ ಮಾತನಾಡುವ ಎಚ್ಚರಿಕೆಯಿಂದಿರಬೇಕು. ಜ್ವರ ಹಾಗೂ ಶೀತ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿಗಳಿಂದ ಅಂತರ ಕಾಯ್ದುಕೊಳ್ಳಬೇಕು. 
  2. ವೈದ್ಯರ ಸಲಹೆಗಳಿಲ್ಲದೆ ಔಷಧಿಗಳನ್ನು ತೆಗೆದುಕೊಳ್ಳಬಾರದು. ವೈದ್ಯರ ಸಲಹೆ ಪಡೆಯದೆಯೇ ಔಷಧಿ ಸೇವನೆ ಮಾಡುವುದು ಅತ್ಯಂತ ಅಪಾಯಕಾರಿ ಅಭ್ಯಾಸ. ಇಂತಹ ಅಭ್ಯಾಸ ನಿಮ್ಮ ದೇಹದ ಇಡೀ ಆರೋಗ್ಯವನ್ನೇ ಹಾಳು ಮಾಡುವ ಸಾಧ್ಯತೆಗಳಿವೆ. ಮಕ್ಕಳಿಗೆ ಯಾವುದೇ ಸಮಸ್ಯೆಗಳು ಬಂದಲೂ ಮೊದಲು ಸೂಕ್ತ ವೈದ್ಯರ ಬಳಿ ತೆರಳಿ ಚಿಕಿತ್ಸೆ ಪಡೆಯುವುದು ಉತ್ತಮ. 
  3. ಅನಗತ್ಯ ಪ್ರಯಾಣಗಳನ್ನು ನಿಯಂತ್ರಿಸಿ. ಯಾವುದೇ ದೇಶಕ್ಕೆ ಪ್ರವಾಸಕ್ಕೆ ತೆರಳುವುದು ಅನಗತ್ಯವಾಗಿದ್ದಲ್ಲಿ ಅದನ್ನು ನಿಯಂತ್ರಿಸಿ. ಈಗಾಗಲೇ ಕೊರೋನಾ ವೈರಸ್ ಭೀತಿ ಎಲ್ಲೆಡೆ ಹರಡುತ್ತಿದ್ದು, ಜನರು ಭೀತಿಗೊಳಲಾಗಿದ್ದಾರೆ. ಪ್ರಯಾಣ ಮಾಡುವುದು ಹಾಗೂ ಅಪರಿಚ ವ್ಯಕ್ತಿಗಳೊಂದಿಗೆ ಮಾತುನಾಡುವುದನ್ನು ನಿಯಂತ್ರಿಸಿ. ಈಗಾಗಲೇ ಚೀನಾ ಕೂಡ ವಿದೇಶಿ ಪ್ರಜೆಗಳು ಪ್ರವಾಸವನ್ನು ನಿಷೇಧಿಸಿದೆ. 
  4. ಜನನಿಬಿಡ ಪ್ರದೇಶಗಳಿಗೆ ಭೇಟಿ ನೀಡುವುದನ್ನು ನಿಲ್ಲಿಸಿ. ಮಕ್ಕಳನ್ನು ಹೆಚ್ಚೆಚ್ಚು ಜನರಿರುವ ಪ್ರದೇಶಗಳಿಗೆ ಕರೆದೊಯ್ಯುವುದನ್ನು ನಿಯಂತ್ರಿಸಿ. ಸ್ಥಳೀಯ ಮಾರುಕಟ್ಟೆ, ಶಾಪಿಂಗ್ ಮಾಲ್ ಗಳು, ಆಟದ ಮೈದಾನ, ಮೆಟ್ರೋ ರೈಲು, ಬಸ್ ಗಳಲ್ಲಿ ಪ್ರಯಾಣಿಸುವುದನ್ನು ಅಥವಾ ತೆರಳುವುದನ್ನು ನಿಲ್ಲಿಸಿ. ಇಂತಹ ಪ್ರದೇಶಗಳಲ್ಲಿ ಮಕ್ಕಳಿಗೆ ಅತ್ಯಂತ ಶೀಘ್ರಗತಿಯಲ್ಲಿ ಸೋಂಕು ತಗುಲುತ್ತದೆ. 
  5. ಮಕ್ಕಳಿಗೆ ಹೆಚ್ಚೆಚ್ಚು ನೀರು ಹಾಗೂ ದ್ರವ ಪದಾರ್ಥಗಳನ್ನು ನೀಡಿ. ಹೆಚ್ಚೆಚ್ಚು ನೀರು ಕುಡಿಯುವುದರಿಂದ ವೈರಸ್ ದೇಹವನ್ನು ಅಷ್ಟು ಸುಲಭವಾಗಿ ಪ್ರವೇಶಿಸಲು ಸಾಧ್ಯವಾಗುವುದಿಲ್ಲ. ಗಂಟಲು ಒಣಗಿದ್ದರೆ, ವೈರಸ್ ನೇರವಾಗಿ ದೇಹವನ್ನು ಪ್ರವೇಶಿಸುತ್ತದೆ. 
  6. ಬೇಸಿಸದ ಅಥವಾ ಹಸಿ ಮಾಂಸ ಸೇವನೆಯನ್ನು ನಿಯಂತ್ರಿಸಿ. ಹಸಿ ಮಾಂಸ ಸೇವನೆ ದೇಹದ ಅನಾರೋಗ್ಯವನ್ನು ಹೆಚ್ಚಿಸುತ್ತದೆ. ಮಾಂಸಾಹಾರ ಸೇವನೆ ಮಾಡುವುದಕ್ಕೂ ಮುನ್ನ ಮಾಂಸ ಚೆನ್ನಾಗಿ ಬೆಂದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.
  7. ಸ್ವಚ್ಛತೆ ಕಾಪಾಡಿಕೊಳ್ಳುವುದೂ ಕೂಡ ಅತ್ಯಂತ ಮುಖ್ಯವಾಗುತ್ತದೆ. ಆಗಾಗ ಕೈಗಳನ್ನು ತೊಳೆದುಕೊಳ್ಳುವುದು, ಹೊರಗಿನಿಂದ ಬಂದ ಕೂಡಲೇ ಸ್ನಾನ ಮಾಡುವುದು ಉತ್ತಮವಾಗಿರುತ್ತದೆ. ಹೊರಗಿಂದ ಬಂದ ಕೂಡಲೇ ಕೈತೊಳೆಯದ ಹೊರತು ಮುಖಗಳನ್ನು ಮುಟ್ಟಿಕೊಳ್ಳಬೇಡಿ. ಇತರೆ ವ್ಯಕ್ತಿಗಳನ್ನು ಆಲಂಗಿಸುವುದು, ಮುತ್ತುಕೊಡುವುದನ್ನು ನಿಯಂತ್ರಿಸುವುದು ಉತ್ತಮ. 

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com