ಮಳೆಗಾಲ ಬಂತು: ರೋಗ ನಿರೋಧಕ ಶಕ್ತಿ ಹೆಚ್ಚಿಸಿ ಸೂಪರ್ ಪವರ್ ನೀಡುವ ಆಹಾರ ಪದಾರ್ಥಗಳ ಬಗ್ಗೆ ತಿಳಿದುಕೊಳ್ಳಿ

ಮಳೆಗಾಲ ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ತಲೆನೋವಿನ ವಿಚಾರವಾಗಿದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಜನರು ಹೆಚ್ಚು ಅನಾರೋಗ್ಯಕ್ಕೀಡಾಗುತ್ತಾರೆ. ಏಕೆಂದರೆ ಗಾಳಿಯಲ್ಲಿನ ತೇವಾಂಶವು ಅನೇಕ ರೀತಿಯ ಹಾನಿಕಾರಕ ಸೂಕ್ಷ್ಮ ಜೀವಿಗಳ ಬೆಳವಣಿಗೆಗಳನ್ನು ಪ್ರಚೋದಿಸುತ್ತದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on

ಮಳೆಗಾಲ ಆರಂಭವಾಗುತ್ತಿದ್ದು, ಈ ಸಂದರ್ಭದಲ್ಲಿ ಆರೋಗ್ಯ ಕಾಪಾಡಿಕೊಳ್ಳುವುದೇ ದೊಡ್ಡ ತಲೆನೋವಿನ ವಿಚಾರವಾಗಿದೆ. ಮಳೆಗಾಲದಲ್ಲಿ ಸಾಮಾನ್ಯವಾಗಿ ಜನರು ಹೆಚ್ಚು ಅನಾರೋಗ್ಯಕ್ಕೀಡಾಗುತ್ತಾರೆ. ಏಕೆಂದರೆ ಗಾಳಿಯಲ್ಲಿನ ತೇವಾಂಶವು ಅನೇಕ ರೀತಿಯ ಹಾನಿಕಾರಕ ಸೂಕ್ಷ್ಮ ಜೀವಿಗಳ ಬೆಳವಣಿಗೆಗಳನ್ನು ಪ್ರಚೋದಿಸುತ್ತದೆ. ಹೀಗಾಗಿ ಮಳೆಗಾಲದಲ್ಲಿ ನಾವು ಸೇವಿಸುವ ಆಹಾರದಲ್ಲಿ ಸಾಕಷ್ಟು ಜಾಗರೂಕವಾಗಿರಬೇಕು. ಪ್ರಮುಖವಾಗಿ ಮಕ್ಕಳ ಆಹಾರದಲ್ಲಿ ಸಾಧ್ಯವಾದಷ್ಟು ಎಚ್ಚರವಹಿಸಬೇಕು. 

ಮಳೆಗಾಲದಲ್ಲಿ ಸಾಮಾನ್ಯವಾಗಿ ಬಾಯಿ ರುಚಿ ಕೇಳುವುದೇ ಹೆಚ್ಚು. ಹೀಗಾಗಿ ಸಾಕಷ್ಟು ಜನರು ಮಳೆಗಾಲದಲ್ಲಿ ಸಂಜೆಯಾಗುತ್ತಿದ್ದಂತೆಯೇ ಚಾಟ್ ಹಾಗೂ ಪಕೋಡಾವನ್ನು ಹೆಚ್ಚು ಸೇವನೆ ಮಾಡುತ್ತಾರೆ. ಇಂತಹ ಸಂದರ್ಭದಲ್ಲಿ ಈ ಆಹಾರ ಸೇವನೆ ಮಾಡವುದು ಉತ್ತಮವಲ್ಲ, ಸೂಪ್ ಸೇವನೆ ಮಾಡುವುದು ಉತ್ತಮವಾಗಿರುತ್ತದೆ. ಸೂಪ್ ಗಳು ಪೌಷ್ಠಿಕಾಂಶಗಳಿಂದ ತುಂಬಿದ್ದು, ಬಾಯಿಗೂ ರುಚಿ ನೀಡುವುದಲ್ಲದೆ, ಜೀರ್ಣ ಕ್ರಿಯೆಯನ್ನು ಹೆಚ್ಚಿಸುತ್ತದೆ. ಶುಂಠಿ, ಬೆಳ್ಳುಳ್ಳಿ ಹಾಗೂ ಕಾಳು ಮೆಣಸಿನೊಂದಿಗೆ ಸಿದ್ಧಪಡಿಸಿದ ಸೂಪ್ ಕುಡಿದರೆ ಒಳ್ಳೆಯದು. 

ಮಳೆಗಾಲದಲ್ಲಿ ರೋಗಗಳಿಂದ ದೂರವಿರಲು ನಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಹೀಗಾಗಿ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಆಹಾರಗಳನ್ನು ಸೇವನೆ ಮಾಡುವುದು ಅತ್ಯವಶ್ಯಕವಾಗಿದೆ. ಹಾಗಾದರೆ ರೋಗ ನಿರೋಧಕ ಶಕ್ತಿ ಹೆಚ್ಚಿಸಬಲ್ಲ ಆಹಾರವಾದರೂ ಯಾವುದು...? ಇಲ್ಲಿದೆ ಮಾಹಿತಿ...

ಗ್ರೀನ್ ಟೀ 
ಹಸಿರು ಟೀ ಅಥವಾ ಗ್ರೀನ್ ಟೀ ಕುಡಿಯುವುದರಿಂದ ಸಾಕಷ್ಟು ಪ್ರಯೋಜನೆಗಳಿವೆ. ಮಳೆಗಾಲದಲ್ಲಿ ಸಂಜೆಯಾಗುತ್ತಿದ್ದಂತೆಯೇ ಸಾಮಾನ್ಯವಾಗಿ ಜನರು ಟೀ, ಕಾಫಿ ಕುಡಿಯಲು ಇಚ್ಛಿಸುತ್ತಾರೆ. ಇಂತಹ ಸಂದರ್ಭದಲ್ಲಿ ಗ್ರೀನ್ ಟೀ ಕುಡಿಯುವುದನ್ನು ರೂಢಿಸಿಕೊಳ್ಳುವುದು ಅತ್ಯುತ್ತಮವಾಗಿರುತ್ತದೆ.

ಗ್ರೀನ್ ಟೀ ಯಲ್ಲಿ ವಿವಿಧ ರೀತಿಯ ಖನಿಜಗಳು, ವಿಟಮಿನ್ ಗಳು, ಸಮೃದ್ಧವಾಗಿದ್ದು, ದೇಹಕ್ಕೆ ರೋಗ ನಿರೋಧಕ ಶಕ್ತಿಯನ್ನು ನೀಡುತ್ತದೆ. ಇದರ ಸೇವನೆಯಿಂದ ಹೃದಯರೋಗಗಳ ಸಾಧ್ಯತೆ ಕಡಿಮೆಯಾಗುವ ಜೊತೆಗೇ ಹಲವಾರು ಬಗೆಯ ಕ್ಯಾನ್ಸರ್ ಗಳಿಂದಲೂ ರಕ್ಷಣೆ ಒದಗಿಸುತ್ತದೆ. 

ಜೇನುತುಪ್ಪ
ಹಲವಾರು ಶತಮಾನಗಳಿಂದ ಹಲವು ಕಾಯಿಲೆಗಳನ್ನು ಗುಣಪಡಿಸಲು ಬಳಸಲಾಗುತ್ತಿರುವ ಜೇನುತುಪ್ಪ ಅನೇಕ ಪ್ರಯೋಜನಗಳನ್ನು ಹೊಂದಿದೆ. ಪ್ರತೀನಿತ್ಯ ಜೇನುತುಪ್ಪ ಸೇವನೆ ಮಾಡುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಮನುಷ್ಯನದ ದೇಹದಲ್ಲಿರುವ ಹಾನಿಕಾರಕ ಸೂಕ್ಷ್ಮ ಜೀವಿಗಳ ಚಟುವಟಿಕೆಯನ್ನು ಪ್ರತಿರೋಧಿಸುತ್ತದೆ.  

ಸಾಂಪ್ರದಾಯಿಕ ಔಷಧ ಪದ್ಧತಿಯಲ್ಲಿ ಉಸಿರಾಟ ಸಮಸ್ಯೆಯ ಚಿಕಿತ್ಸೆಗೆ ಜೇನುತುಪ್ಪ ಬಳಕೆ ಮಾಡುವುದನ್ನು ಇನ್ನು ನೆನೆಯಬಹುದಾಗಿದೆ. ಕಫ, ಅಸ್ತಮಾ, ಕೆಮ್ಮು ಸಮಸ್ಯೆಗಳನ್ನು ಎದುರಿಸಲು ಪ್ರತೀನಿತ್ಯ ಜೇನುತುಪ್ಪ ಸೇನೆ ಮಾಡುವಂತೆ ಸೂಚಿಸಲಾಗುತ್ತದೆ. 

ಬೇವಿನ ಸೊಪ್ಪು


ಬೇವಿನ ಸೊಪ್ಪು ಎಂದಾಕ್ಷಣ ಕಹಿ ನೆನಪಾಗಿ ಮೂಗು ಮುರಿಯುವವರೇ ಹೆಚ್ಚು. ಆದರೆ, ಬೇವಿನ ಸೊಪ್ಪು ಎಷ್ಟು ಕಹಿಯಾಗಿರುತ್ತದೆಯೋ ಅಷ್ಟೇ ಲಾಭವನ್ನು ನೀಡುತ್ತದೆ. ಪ್ರತೀನಿತ್ಯ ಬೇವಿನ ಸೊಪ್ಪನ್ನು ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಎದುರಾಗುವ ಸಮಸ್ಯೆಗಳು ದೂರಾಗುತ್ತವೆ. ದೇಹದ ರಕ್ತವನ್ನು ಶುದ್ಧೀಕರಿಸುವ ಶಕ್ತಿ ಈ ಬೇವು ಹೊಂದಿದೆ. ಅಲ್ಲದೆ ಜೀರ್ಣಕ್ರಿಯೆಯನ್ನು ಹೆಚ್ಚಿಸುತ್ತದೆ. 

ಲೋಳೆಸರ


ಅಲೋವೆರಾ (ಲೋಳೆಸರ) ಆರೋಗ್ಯ ಕಾಪಾಡಿಕೊಳ್ಳಲು ಅತ್ಯುತ್ತಮ ಪದಾರ್ಥವಾಗಿದೆ. 20 ಕ್ಕೂ ಹೆಚ್ಚು ಅಮೈನೋ ಆಮ್ಲಗಳು, ಕ್ಯಾಲ್ಸಿಯಂ, ಮೆಗ್ನೀಸಿಯಮ್ ಮತ್ತು ಸೋಡಿಂಯಂ ಜೊತೆಗೆ ಕಿಣ್ವಗಳು, ಜೀವಸತ್ವಗಳು, ಸಾರಜನಕ ಮತ್ತು ಉತರೆ ಪ್ರಮುಖ ಪೋಷಕಾಂಶಗಳನ್ನು ಇದು ಒಳಗೊಂಡಿದೆ. ಕೂದಲು ಹಾಗೂ ಚರ್ಮದ ಸಮಸ್ಯೆಯನ್ನು ದೂರಾಗಿರುವುದಲ್ಲದೆ, ಕಾಂತಿಯುತವಾಗಿರುವಂತೆ ನೋಡಿಕೊಳ್ಳುತ್ತದೆ. ಮಲಬದ್ಧತೆಯಂತಹ ಸಮಸ್ಯೆಯನ್ನು ದೂರಾಗಿಸುವುದಲ್ಲದೆ, ಜೀರ್ಣಶಕ್ತಿಯನ್ನು ವೃದ್ಧಿಸುತ್ತದೆ. 

ಆಲಿವ್ ಆಯಿಲ್
ಆಲಿವ್ ಎಣ್ಣೆಯು ಒಮೆಗಾ-6 ಕೊಬ್ಬಿನಾಮ್ಲಗಳ ಉತ್ತಮ ಮೂಲವಾಗಿದೆ. ಹೃದಯ, ಯಕೃತ್ತು ಮತ್ತು ಮೂತ್ರಪಿಂಡದ ಕಾರ್ಯವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಪ್ರತೀನಿತ್ಯ ಇದನ್ನು ಸೇವನೆ ಮಾಡುವುದರಿಂದ ದೇಹದಲ್ಲಿರುವ ಕೊಬ್ಬನಾಂಶವನ್ನು ಕಡಿಮೆ ಮಾಡಿ, ಹೃದಯ ಆರೋಗ್ಯಕರವಾಗಿರುವಂತೆ ನೋಡಿಕೊಳ್ಳುತ್ತದೆ.

ಈ ಎಣ್ಣೆಯಲ್ಲಿ ಶೇ.70ಕ್ಕಿಂತಲೂ ಹೆಚ್ಚು ಮೋನೋಸ್ಯಾಚುರೇಟೆಡ್ ಫ್ಯಾಟಿ ಆ್ಯಸಿಡ್ ಇರುವುದರಿಂದ ದೇಹದಲ್ಲಿರುವ ಕೊಬ್ಬಿನಾಂಶವನ್ನು ಕಡಿಮೆ ಮಾಡಿ, ಹೃದಯಕ್ಕೆ ಆಗಬಹುದಾದ ತೊಂದರೆಗಳನ್ನು ತಪ್ಪಿಸುತ್ತದೆ. ಅಲ್ಲದೆ ಸ್ಟ್ರೋಕ್ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. 

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com