ನಿಮ್ಮ ಜೀರ್ಣಾಂಗ ವ್ಯೂಹ ಎಷ್ಟು ಆರೋಗ್ಯಕರವಾಗಿದೆ ಎಂದು ನಿಮಗೆ ಗೊತ್ತೇ...?

ಜೀರ್ಣಾಂಗ ವ್ಯೂಹ ಎಂಬುದು ಮಾನವನ ದೇಹದಲ್ಲಿ ಬಹುಮುಖ್ಯವಾದ ಅಂಗವಾಗಿದ್ದು, ಇದು ದೇಹದಲ್ಲಿ ಆಹಾರವನ್ನು ಜೀರ್ಣಗೊಳಿಸುವ ಕ್ರಿಯೆಯನ್ನು ಮಾಡುತ್ತದೆ. ದೇಹಕ್ಕೆ ಬೇಕಾದ ಗ್ಲೂಕೋಸ್, ಕೊಬ್ಬು, ಪ್ರೊಟೀನ್ ಗಳನ್ನು ಸಂಗ್ರಹಿಸುವ ಮತ್ತು ದೇಹದಲ್ಲಿರುವ ವಿಷ ಪದಾರ್ಥಗಳನ್ನು ಹೊರಹಾಕುವ ಕ್ರಿಯೆಯನ್ನೂ ನಿರ್ವಹಿಸುತ್ತದೆ. 
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಜೀರ್ಣಾಂಗ ವ್ಯೂಹ ಎಂಬುದು ಮಾನವನ ದೇಹದಲ್ಲಿ ಬಹುಮುಖ್ಯವಾದ ಅಂಗವಾಗಿದ್ದು, ಇದು ದೇಹದಲ್ಲಿ ಆಹಾರವನ್ನು ಜೀರ್ಣಗೊಳಿಸುವ ಕ್ರಿಯೆಯನ್ನು ಮಾಡುತ್ತದೆ. ದೇಹಕ್ಕೆ ಬೇಕಾದ ಗ್ಲೂಕೋಸ್, ಕೊಬ್ಬು, ಪ್ರೊಟೀನ್ ಗಳನ್ನು ಸಂಗ್ರಹಿಸುವ ಮತ್ತು ದೇಹದಲ್ಲಿರುವ ವಿಷ ಪದಾರ್ಥಗಳನ್ನು ಹೊರಹಾಕುವ ಕ್ರಿಯೆಯನ್ನೂ ನಿರ್ವಹಿಸುತ್ತದೆ. 

ಈ ಜೀರ್ಣಾಂಗ ವ್ಯವಸ್ಥೆಯಲ್ಲಿ ಸ್ವಲ್ಪ ಸಮಸ್ಯೆಗಳು ಎದುರಾದರೂ ಮನುಷ್ಯ ಅನಾರೋಗ್ಯದಿಂದ ಒದ್ದಾಡುವಂತಹ ಪರಿಸ್ಥಿತಿಗಳು ಎದುರಾಗುತ್ತವೆ. ಹೀಗಾಗಿ ಜೀರ್ಣಕ್ರಿಯೆ ಸರಿಯಾಗಿ ನಡೆಯುವಂತೆ ನೋಡಿಕೊಳ್ಳುವುದು ಮುಖ್ಯವಾಗುತ್ತದೆ. 

ಇದ್ದಕ್ಕಿದ್ದಂತೆಯ ದೇಹದ ತೂಕ ಇಳಿಯುವುದು, ಹೊಟ್ಟೆನೋವು, ಹೊಟ್ಟೆ ಉಬ್ಬರ, ಆಹಾರ ಸೇವನೆ ಮಾಡಲು ಸಾಧ್ಯವಾಗದೆ ಇರುವ ಲಕ್ಷಣಗಳು ಕಂಡು ಬಂದರೆ ನಿಮ್ಮ ಜೀರ್ಣಾಂಗ ವ್ಯೂಹದಲ್ಲಿ ಸಮಸ್ಯೆಯಿದೆ ಎಂದು ತಿಳಿಯಬೇಕು. 

ಜೀರ್ಣಾಂಗವ್ಯೂಹದಲ್ಲಿ ಸಮಸ್ಯೆ ಎದುರಿಸುತ್ತಿರುವವರು ಏನನ್ನು ಮಾಡಬೇಕು ಹಾಗೂ ಏನನ್ನು ಮಾಡಬಾರದು?... ಈ ಬಗ್ಗೆ ಇಲ್ಲಿದೆ ಮಾಹಿತಿ...

  • ಆಹಾರ ಸೇವಿಸಿದ ಕೂಡಲೇ ಉರಿಯುತ್ತಿರುವ ಸಂವೇದನೆ ಹಾಗೂ ಅಸ್ವಸ್ಥತೆ ಇದೆ ಎಂದೆನಿಸಿದರೆ, ನಿಮ್ಮ ಜೀರ್ಣಾಂಗ ವ್ಯೂಹದಲ್ಲಿ ಆ್ಯಸಿಡ್ ರಿಫ್ರುಕ್ಸ್ ಹೆಚ್ಚಾಗಿದೆ ಎಂದು ಅರ್ಥ. ಇದು ನಿಮ್ಮ ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ತೋರಿಸುತ್ತದೆ. ಇಂತಹ ಸಮಸ್ಯೆ ಎದುರಿಸುತ್ತಿರುವವರು ಸಾಮಾನ್ಯವಾಗಿ ಹುಳಿಯಿರುವಂತಹ ಆಹಾರ ಪದಾರ್ಥಗಳಾದ ಟೊಮೆಟೋ, ಈರುಳ್ಳಿ, ನಿಂಬೆಹಣ್ಣು, ಆರೆಂಜ್ ಗಳ ಸೇವನೆ ನಿಯಂತ್ರಿಸಬೇಕು. ಈ ಆಹಾರ ಪದಾರ್ಥಗಳ ಸೇವನೆ ಆ್ಯಸಿಡ್'ನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರಿಂದ ಆರೋಗ್ಯ ಸಮಸ್ಯೆ ಮತ್ತಷ್ಟು ಉಲ್ಪಣಗೊಳ್ಳಬಹುದು. ಬೇಯಿಸಿದ ಕಚ್ಚಾ ಆಹಾರ ಪದಾರ್ಥಗಳನ್ನು ಇಂತಹವರು ಸೇವನೆ ಮಾಡಬಾರದು. ಚೆನ್ನಾಗಿ ಬೇಯಿಸಿದ ತರಕಾರಿಗಳನ್ನು ಸೇವನೆ ಮಾಡಬೇಕು. ಸಲಾಡ್ ಆದರೂ ಇದೇ ರೀತಿ ಮಾಡಬೇಕು. 
  • ಕೆಲವರಿಗೆ ಹಾಲು ಕುಡಿದ ಕೂಡಲೇ ಅಲರ್ಜಿಯಾಗುವುದುಂಟು. ಹಾಲು ಕುಡಿಯುತ್ತಿದ್ದಂತೆಯೇ ಕೆಲವರಿಗೆ ಗ್ಯಾಸ್ಟ್ರಿಕ್ ಸಮಸ್ಯೆ ಹಾಗೂ ಜೀರ್ಣವಾಗದ ಸಮಸ್ಯೆಗಳು ಎದುರಾಗುತ್ತದೆ. ಅಂತಹವರು ಹಾಲನ್ನು ಕುಡಿಯಬಾರದು. ಕ್ಯಾಲ್ಶಿಯಂಗಾಗಿ ಇಂತಹವರು ಮೊಸರು, ಮಜ್ಜಿಗೆಯನ್ನು ಸೇವನೆ ಮಾಡಬಹುದು. 
  • ಜೀರ್ಣಾಂಗ ವ್ಯೂಹದ ಆರೋಗ್ಯವು ಆತಂಕ, ಖಿನ್ನತೆ, ಭಾವನಾತ್ಮಕ ಸಮಸ್ಯೆಗಳು ಮತ್ತು ಭಯಕ್ಕೂ ಸಂಬಂಧಿಸಿರುತ್ತದೆ. ಲಾಕ್'ಡೌನ್ ಸಂದರ್ಭದಲ್ಲಿ ಸಾಕಷ್ಟು ಜನರ ಜೀವನ ಶೈಲಿ, ಕಾರ್ಯನಿರ್ವಹಿಸುತ್ತಿದ್ದ ವಾತಾವರಣಗಳ ಬದಲಾವಣೆಗಳಾಗಿದ್ದು, ಇದು ಒತ್ತಡವನ್ನು ಹೆಚ್ಚಾಗುವಂತೆ ಮಾಡಿದೆ. ಇದರಿಂದಾಗಿ ಹೆಚ್ಚು ಜನರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಎದುರಾಗುತ್ತವೆ. 
  • ಜೀರ್ಣಾಂಗ ವ್ಯೂಹ ಆರೋಗ್ಯವಾಗಿರಬೇಕೆಂದರೆ, ಕಾರ್ಬೊಹೈಡ್ರೇಟ್, ಪ್ರೊಟೀನ್ ಹಾಗೂ ಕೊಬ್ಬು ಇರುವಂತಹ ಆಹಾರಗಳನ್ನು ಸರಿ ಪ್ರಮಾಣದಲ್ಲಿ ಸೇವನೆ ಮಾಡುವುದು ಅತ್ಯಂತ ಮುಖ್ಯವಾಗುತ್ತದೆ. 
  • ಹೆಚ್ಚೆಚ್ಚು ನೀರು ಕುಡಿಯಿರಿ. ಪ್ರತೀನಿತ್ಯ 2-3 ಲೀಟರ್ ನೀರನ್ನಾದರೂ ಕುಡಿಯಲೇಬೇಕು. ಪ್ರತಿನಿತ್ಯ ವಾಕಿಂಗ್ ಮಾಡುವುದು, ವ್ಯಾಯಾಮ ಮಾಡುವುದರಿಂದ ಹೊಟ್ಟೆ ಸಂಬಂಧಿಸಿದ ಸಮಸ್ಯೆಗಳು ಕಡಿಮೆಯಾಗುತ್ತವೆ. ನಾರಿನ ಪದಾರ್ಥ ಇರುವ ತರಕಾರಿ ಸೇವನೆ, ಫ್ರೆಶ್ ಜ್ಯೂಸ್ ಕುಡಿಯುವುದನ್ನು ರೂಢಿಸಿಕೊಳ್ಳಿ. 
  • ನೀವು ತಿನ್ನುವ ಆಹಾರ ನಿಮ್ಮ ಜೀರ್ಣಾಂಗ ವ್ಯೂಹದ ಆರೋಗ್ಯವನ್ನು ನಿರ್ಧರಿಸುತ್ತದೆ. ಹಾಗಾಗಿ ಪ್ರತಿನಿತ್ಯ ಆರೋಗ್ಯಕರವಾದ ಆಹಾರವನ್ನೇ ಸೇವನೆ ಮಾಡಿ. ವಯಸ್ಸಾದವರು ಪ್ರತಿನಿತ್ಯ ಮೊಸರನ್ನು ಸೇವನೆ ಮಾಡಲೇಬೇಕು. ಇದರಿಂದ ಅವರ ಜೀರ್ಣಕ್ರಿಯೆ ಸೂಕ್ತವಾಗಿ ಕಾರ್ಯನಿರ್ವಹಿಸುತ್ತದೆ. 
  • ಒಂದು ವೇಳೆ 14 ದಿನಗಳಿಂದ ಸುದೀರ್ಘವಾಗಿ ಹೊಟ್ಟೆ ಸಂಬಂಧಿಸಿದ ಸಮಸ್ಯೆಗಳಿಂದ ಬಳಲುತ್ತಿರುವುದೇ ಆದರೆ, ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಚಿಕಿತ್ಸೆ ಪಡೆದುಕೊಳ್ಳಿ. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ತೋರದಿರಿ. ಪ್ರಸ್ತುತ ಕೊರೋನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಆಗಾಗ ಸ್ಯಾನಿಟೈಸ್ ಬಳಕೆ ಮಾಡುತ್ತಿರಿ. 
  • 50 ವರ್ಷಕ್ಕಿಂತ ಮೇಲ್ಪಟ್ಟವರು ಆಗಾಗ ಹೊಟ್ಟೆ ಸಂಬಂಧಿಸಿದ ಸಮಸ್ಯೆಗಳನ್ನು ಎದುರಿಸುವುದುಂಟು. ಅಂತಹವರು ಆಗಾಗ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು. ಸಾಮಾನ್ಯವಾಗಿ ಇಂತಹವರಲ್ಲಿ ವಾಂತಿ ಅಥವಾ ಮಲದಲ್ಲಿ ರಕ್ತ ಬರುವುದುಂಟು. ಆಹಾರ ನುಂಗಲು ಸಮಸ್ಯೆ ಎದುರಾಗುತ್ತದೆ. ಪ್ರಮುಖವಾಗಿ ಕುಟುಂಬ ಸದಸ್ಯರಲ್ಲಿ ಯಾರಿಗಾದರೂ ಹೊಟ್ಟೆ ಅಥವಾ ಕರುಳಿನ ಕ್ಯಾನ್ಸರ್ ಹೊಂದಿರುವವರಿದ್ದರೆ, ಇತರರು ಹೆಚ್ಚು ಎಚ್ಚರಿಕೆಯಿಂದಿರಬೇಕಾಗುತ್ತದೆ. 
  • ಜಂಕ್ ಫುಡ್ ಗಳನ್ನು ನಿಯಂತ್ರಿಸಿ. ಹೆಚ್ಚೆಚ್ಚು ನೀರು ಕುಡಿಯುವುದು, ತರಕಾರಿ ಹಣ್ಣುಗಳನ್ನು ಹೆಚ್ಚು ಸೇವನೆ ಮಾಡುವುದು. ದೇಹವನ್ನು ಸ್ವಚ್ಛಗೊಳಿಸಲು, ಆರೋಗ್ಯಕರವಾಗಿರುವಂತೆ ಮಾಡಲು ಈ ಲಾಕ್'ಡೌನ್ ಅತ್ಯುತ್ತಮ ಸಮಯವಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com