ಔಷಧಿ ಇಲ್ಲದೆ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸೇವಿಸಬೇಕಾದ ಅತ್ಯುತ್ತಮ ಆಹಾರಗಳು ಇಲ್ಲಿವೆ...
ಪ್ರಪಂಚದಾದ್ಯಂತ 1 ಶತಕೋಟಿಗೂ ಹೆಚ್ಚು ಜನರು ಅಧಿಕ ರಕ್ತದೊತ್ತಡವನ್ನು ಹೊಂದಿದ್ದಾರೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡದ ಆರೋಗ್ಯಕರ ಮಟ್ಟವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರವು ಮುಖ್ಯವಾಗಿದೆ.
Published: 08th November 2022 05:07 PM | Last Updated: 08th November 2022 05:31 PM | A+A A-

ಪ್ರಾತಿನಿಧಿಕ ಚಿತ್ರ
ಪ್ರಪಂಚದಾದ್ಯಂತ 1 ಶತಕೋಟಿಗೂ ಹೆಚ್ಚು ಜನರು ಅಧಿಕ ರಕ್ತದೊತ್ತಡವನ್ನು ಹೊಂದಿದ್ದಾರೆ. ರಕ್ತದೊತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತದೊತ್ತಡದ ಆರೋಗ್ಯಕರ ಮಟ್ಟವನ್ನು ಕಾಪಾಡಿಕೊಳ್ಳಲು ಆರೋಗ್ಯಕರ ಆಹಾರವು ಮುಖ್ಯವಾಗಿದೆ. ನಿಮ್ಮ ಆಹಾರದಲ್ಲಿ ಪೊಟ್ಯಾಸಿಯಂ ಮತ್ತು ಮೆಗ್ನೀಸಿಯಂನಂತಹ ನಿರ್ಧಿಷ್ಟ ಪೋಷಕಾಂಶಗಳನ್ನು ಸೇರಿಸುವುದರಿಂದ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತದೆ ಎಂದು ಸಂಶೋಧನೆಯೊಂದು ತೋರಿಸಿದೆ.
ಹಾಗಿದ್ದರೆ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಅಗತ್ಯವಿರುವದ ಅತ್ಯುತ್ತಮ ಆಹಾರಗಳು ಇಲ್ಲಿವೆ ನೋಡಿ.
ಸಿಟ್ರಸ್ ಹಣ್ಣುಗಳು
ದ್ರಾಕ್ಷಿ, ಕಿತ್ತಳೆ ಮತ್ತು ನಿಂಬೆಹಣ್ಣು ಸೇರಿದಂತೆ ಸಿಟ್ರಸ್ ಹಣ್ಣುಗಳು ರಕ್ತದೊತ್ತಡ ಕಡಿಮೆಗೊಳಿಸುವ ಶಕ್ತಿಯನ್ನು ಹೊಂದಿವೆ. ಇವು ವಿಟಮಿನ್‌ಗಳು, ಖನಿಜಗಳು ಮತ್ತು ಸಸ್ಯ ಸಂಯುಕ್ತಗಳಿಂದ ತುಂಬಿವೆ. ಹೀಗಾಗಿ ಇವು ಅಧಿಕ ರಕ್ತದೊತ್ತಡದಂತಹ ಹೃದ್ರೋಗದ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುವ ಮೂಲಕ ನಿಮ್ಮ ಹೃದಯವನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ.
ಸಾಲ್ಮನ್ ಮತ್ತು ಇತರ ಫ್ಯಾಟಿ ಮೀನು
ಫ್ಯಾಟಿ ಮೀನುಗಳು ಒಮೆಗಾ-3 ಕೊಬ್ಬಿನ ಅತ್ಯುತ್ತಮ ಮೂಲವಾಗಿದೆ. ಇದು ಹೃದಯದ ಆರೋಗ್ಯಕ್ಕೆ ನೆರವಾಗುವ ಹಲವು ಪ್ರಯೋಜನಗಳನ್ನು ಹೊಂದಿದೆ. ಇವುಗಳು ಉರಿಯೂತ ಕಡಿಮೆ ಮಾಡುವ ಮೂಲಕ ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಸಂಶೋಧನೆಯು ಒಮೆಗಾ-3-ಸಮೃದ್ಧ ಫ್ಯಾಟಿ ಮೀನುಗಳ ಹೆಚ್ಚಿನ ಸೇವನೆಯು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡುತ್ತವೆ ಎಂಬುದನ್ನು ಕಂಡುಕೊಂಡಿದೆ.
ಕುಂಬಳಕಾಯಿ ಬೀಜಗಳು
ಮೆಗ್ನೀಸಿಯಂ, ಪೊಟ್ಯಾಸಿಯಂ ಮತ್ತು ಅರ್ಜಿನೈನ್ ಸೇರಿದಂತೆ ರಕ್ತದೊತ್ತಡ ನಿಯಂತ್ರಣಕ್ಕೆ ಮುಖ್ಯವಾದ ಪೋಷಕಾಂಶಗಳ ಕೇಂದ್ರೀಕೃತ ಮೂಲ ಇದಾಗಿದೆ. ನೈಟ್ರಿಕ್ ಆಕ್ಸೈಡ್ ಉತ್ಪಾದನೆಗೆ ಅಗತ್ಯವಾದ ಅಮೈನೋ ಆಮ್ಲವು, ರಕ್ತನಾಳಗಳ ವಿಶ್ರಾಂತಿ ಮತ್ತು ರಕ್ತದೊತ್ತಡವನ್ನು ಕಡಿಮೆ ಮಾಡಲು ಅವಶ್ಯಕವಾಗಿದೆ.
ಬೆರ್ರಿ ಹಣ್ಣುಗಳು
ಅಧಿಕ ರಕ್ತದೊತ್ತಡದಂತಹ ಹೃದ್ರೋಗದ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡುವ ಸಾಮರ್ಥ್ಯವನ್ನು ಒಳಗೊಂಡಿರುವ ಬೆರ್ರಿಗಳು, ವಿವಿಧ ಪ್ರಭಾವಶಾಲಿ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಬ್ಲೂಬೆರ್ರಿ, ರಾಸ್‌ಬೆರ್ರಿ, ಚೋಕ್‌ಬೆರ್ರಿ, ಕ್ಲೌಡ್‌ಬೆರ್ರಿ ಮತ್ತು ಸ್ಟ್ರಾಬೆರಿಗಳು ರಕ್ತದೊತ್ತಡವನ್ನು ಕಡಿಮೆ ಮಾಡುವ ಗುಣಗಳನ್ನು ಹೊಂದಿವೆ.
ಕ್ಯಾರೆಟ್‌ಗಳು
ಕ್ಯಾರೆಟ್‌ಗಳು ಅನೇಕ ಜನರ ಆಹಾರದಲ್ಲಿ ದಿನನಿತ್ಯದ ಸಸ್ಯಾಹಾರಿ ಆಹಾರವಾಗಿದೆ. ಕ್ಲೋರೊಜೆನಿಕ್, ಪಿ-ಕೌಮರಿಕ್ ಮತ್ತು ಕೆಫೀಕ್ ಆಮ್ಲಗಳಂತಹ ಫೀನಾಲಿಕ್ ಸಂಯುಕ್ತಗಳಿಂದ ಅಧಿಕವಾಗಿರುವ ಕ್ಯಾರೆಟ್, ರಕ್ತನಾಳಗಳಿಗೆ ವಿಶ್ರಾಂತಿ ನೀಡಲು ಮತ್ತು ಉರಿಯೂತವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದು ರಕ್ತದೊತ್ತಡದ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಟೊಮೇಟೊ ಮತ್ತು ಟೊಮೇಟೊ ಉತ್ಪನ್ನಗಳು
ಟೊಮೇಟೊಗಳು ಮತ್ತು ಟೊಮೇಟೊ ಉತ್ಪನ್ನಗಳು ಪೊಟ್ಯಾಸಿಯಂ ಮತ್ತು ಕ್ಯಾರೊಟಿನಾಯ್ಡ್ ಪಿಗ್ಮೆಂಟ್ ಲೈಕೋಪೀನ್ ಸೇರಿದಂತೆ ಅನೇಕ ಪೋಷಕಾಂಶಗಳಿಂದ ಸಮೃದ್ಧವಾಗಿವೆ. ಲೈಕೋಪೀನ್ ಹೃದಯದ ಆರೋಗ್ಯದ ಮೇಲೆ ಪ್ರಯೋಜನಕಾರಿ ಪರಿಣಾಮ ಬೀರುತ್ತದೆ. ಈ ಪೋಷಕಾಂಶವಿರುವ ಟೊಮೆಟೊ ಉತ್ಪನ್ನಗಳನ್ನು ಸೇವಿಸುವುದರಿಂದ ಅಧಿಕ ರಕ್ತದೊತ್ತಡದಂತಹ ಹೃದಯ ಕಾಯಿಲೆಯ ಅಪಾಯಕಾರಿ ಅಂಶಗಳನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಪಾಲಕ್ ಸೊಪ್ಪು
ಪಾಲಕ್ ಸೊಪ್ಪಿನಲ್ಲಿ ನೈಟ್ರೇಟ್ ಅಧಿಕವಾಗಿರುತ್ತದೆ. ಇದು ಉತ್ಕರ್ಷಣ ನಿರೋಧಕಗಳು, ಪೊಟ್ಯಾಸಿಯಂ, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂಗಳಿಂದ ಕೂಡಿದೆ. ಇದು ಅಧಿಕ ರಕ್ತದೊತ್ತಡ ಹೊಂದಿರುವ ಜನರಿಗೆ ಅತ್ಯುತ್ತಮ ಆಯ್ಕೆಯಾಗಿದೆ.