ಕರುಳು ಸಂಬಂಧಿತ ಸಮಸ್ಯೆಗಳಿಗೆ ರಾಮಬಾಣ; ಹೊಟ್ಟೆಯ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ನೈಸರ್ಗಿಕ ಔಷಧಿ!

ಹೆಸರೇ ಸೂಚಿಸುವಂತೆ ತ್ರಿಫಲವು ತ್ರಿದೋಷ ಮತ್ತು ದೇಹದಲ್ಲಿನ ಎಲ್ಲಾ ದೋಷಗಳ ಮೇಲೆ ಅದ್ಭುತಗಳನ್ನೇ ಮಾಡುತ್ತದೆ. ಇದು ದೀರ್ಘಾಯುಷ್ಯ, ಪುನರ್ಯೌವನಗೊಳಿಸುವಿಕೆ ಮತ್ತು ಪುನರ್‌ನಿರ್ಮಾಣಕ್ಕಾಗಿ ಸಹಾಯಕ ಎನ್ನುತ್ತದೆ ಆಯುರ್ವೇದ.
ತ್ರಿಫಲ
ತ್ರಿಫಲ

ನಮ್ಮ ನಡುವೆ ಕರುಳು ಸಂಬಂಧಿತ ಸಮಸ್ಯೆಗಳಿಂದ ಬಳಲುತ್ತಿರುವ ಅದೆಷ್ಟೋ ಜನರಿದ್ದಾರೆ. ಕರುಳು ಸಂಬಂಧಿತ ಸಮಸ್ಯೆಗಳಿಗೆ ಇದೊಂದು ರಾಮಬಾಣ ಎಂದರೆ ತಪ್ಪಾಗಲಾರದು. ಇದು ಕೆಲವರಿಗೆ ಸರಿಹೊಂದಬಹುದು ಅಥವಾ ಇನ್ನೂ ಕೆಲವರಿಗೆ ಸರಿಹೊಂದದಿರಬಹುದು. ಆದರೆ, ಇದೊಂದು ನೈಸರ್ಗಿಕ ಔಷಧಿ. ಮತ್ತು ಇದು ನಿಮ್ಮ ದೇಹದಲ್ಲಿ ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ತಿಳಿದುಕೊಳ್ಳಲು ನೀವಿದನ್ನು ಸೇವಿಸಬೇಕು. ನಾವು ಹೇಳುತ್ತಿರುವುದು ತ್ರಿಫಲದ ಆರೋಗ್ಯ ಪ್ರಯೋಜನಗಳ ಬಗ್ಗೆ. ತ್ರಿಫಲಾವನ್ನು ಮೂರು ಗಿಡಮೂಲಿಕೆಗಳಿಂದ ತಯಾರಿಸಲಾಗುತ್ತದೆ. ಅವುಗಳೆಂದರೆ, ಅಳಲೆ ಕಾಯಿ, ತಾರೇಕಾಯಿ ಮತ್ತು ನೆಲ್ಲಿಕಾಯಿ.

ಹೆಸರೇ ಸೂಚಿಸುವಂತೆ ತ್ರಿಫಲವು ತ್ರಿದೋಷ ಮತ್ತು ದೇಹದಲ್ಲಿನ ಎಲ್ಲಾ ದೋಷಗಳ ಮೇಲೆ ಅದ್ಭುತಗಳನ್ನೇ ಮಾಡುತ್ತದೆ. ಇದು ದೀರ್ಘಾಯುಷ್ಯ, ಪುನರ್ಯೌವನಗೊಳಿಸುವಿಕೆ ಮತ್ತು ಪುನರ್‌ನಿರ್ಮಾಣಕ್ಕಾಗಿ ಸಹಾಯಕ ಎನ್ನುತ್ತದೆ ಆಯುರ್ವೇದ. ತ್ರಿಫಲವು ಆ್ಯಂಟಿ ಆಕ್ಸಿಡೆಂಟ್ಸ್‌ಗಳ ಉತ್ತಮ ಮೂಲವಾಗಿದೆ. ಜೊತೆಗೆ ಇದರಲ್ಲಿರುವ ಟ್ರಿಬುಲಾನಿಕ್ ಆಮ್ಲವು ಕೀಮೋಪ್ರೊಟೆಕ್ಷನ್‌ನಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಮತ್ತು ಕ್ಯಾನ್ಸರ್ ನಿರೋಧಕವಾಗಿ ಕೆಲಸ ಮಾಡುತ್ತದೆ.

ತ್ರಿಫಲದಲ್ಲಿರುವ ಕ್ವೆರ್ಸೆಟಿನ್, ಕಣ್ಣುಗಳ ಆರೋಗ್ಯ, ಅಧಿಕ ರಕ್ತದೊತ್ತಡ, ಕೂದಲು, ಚರ್ಮ, ಮಧುಮೇಹಿಗಳಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಲ್ಲದೆ, ತ್ರಿಫಲದ ಲುಟಿಯೋಲಿನ್, ದೃಷ್ಟಿ, ಕಣ್ಣಿನ ಪೊರೆ, ಗ್ಲುಕೋಮಾ ಇತ್ಯಾದಿಗಳಿಗೆ ಒಳ್ಳೆಯದು.

* ಇದು ಕರುಳಿನ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ಹೆಚ್ಚಿಸಲು, ಲಿವರ್ ಅನ್ನು ರಕ್ಷಿಸಲು, ಕ್ಯಾನ್ಸರ್ ವಿರೋಧಿ ಗುಣಲಕ್ಷಣಗಳು ಮತ್ತು ಕೀಮೋ ಮತ್ತು ವಿಕಿರಣದಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಇದು ಕೆಲವೊಮ್ಮೆ, ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ತೀವ್ರವಾಗಿ ಕಡಿಮೆ ಮಾಡಬಹುದು. ಇದರಿಂದಾಗಿ ಹೈಪೊಗ್ಲಿಸಿಮಿಯಾ ಉಂಟಾಗಬಹುದು. ಹೀಗಾಗಿಯೇ ಇದನ್ನು ವೈದ್ಯರ ಮಾರ್ಗದರ್ಶನದಲ್ಲಿಯೇ ತೆಗೆದುಕೊಳ್ಳಬೇಕಾಗುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ಜೀವಕೋಶಗಳು ಹೀರಿಕೊಳ್ಳುವುದನ್ನು ಕಡಿಮೆ ಮಾಡುವ ಅಂಶವನ್ನು ಹೊಂದಿರುತ್ತದೆ. ಹೀಗಾಗಿ ಮಧುಮೇಹ ರೋಗಿಗಳು ಊಟದ 15-20 ನಿಮಿಷಗಳ ನಂತರ ಒಂದು ಚಿಟಿಕೆ ತ್ರಿಫಲವನ್ನು ಸೇವಿಸಬಹುದು.

* ಪಿತ್ತಕೋಶದ ಕಲ್ಲು (ಅಥವಾ ಪಿತ್ತಗಲ್ಲು) ಇರುವವರಿಗೆ ತ್ರಿಫಲ ಪ್ರಯೋಜನಕಾರಿ. ಇದರ ಬಳಕೆಯು ಪಿತ್ತರಸ ನಾಳದ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದ ಯಾವುದೇ ಹೊಟ್ಟೆಗೆ ಸಂಬಂಧಿತ ಸಮಸ್ಯೆಗಳು ದೂರಾಗುತ್ತವೆ. ವೈದ್ಯರ ಸಲಹೆಯನ್ನು ಪಡೆಯುವುದು ಸೂಕ್ತ.

* ತ್ರಿಫಲವು ಕರುಳನ್ನು ಪುನರುಜ್ಜೀವನಗೊಳಿಸುತ್ತದೆ, ಉರಿಯೂತವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ, ಶಸ್ತ್ರಚಿಕಿತ್ಸೆ ಅಥವಾ ಕೊಲೊರೆಕ್ಟಲ್ ಕ್ಯಾನ್ಸರ್‌ ನಂತರದ ಚೇತರಿಕೆಗೆ ಸಹಾಯ ಮಾಡುತ್ತದೆ. ಅಸಿಡಿಟಿ, ಹೊಟ್ಟೆಯುಬ್ಬರ, ಮಲಬದ್ಧತೆ, ಐಬಿಎಸ್ ಅಥವಾ ಇತರ ಯಾವುದೇ ಕರುಳು ಸಂಬಂಧಿತ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ.

* ಇದು ಪ್ರೋಬಯಾಟಿಕ್ ಆಗಿ ಕೆಲಸ ಮಾಡುತ್ತದೆ. ಏಕೆಂದರೆ, ಇದು ಮಿದುಳಿನ ಆರೋಗ್ಯ ಹೆಚ್ಚಳ, ಹಾರ್ಮೋನುಗಳ, ತೂಕ, ಇನ್ಸುಲಿನ್ ನಿಯಂತ್ರಣಕ್ಕೆ ಅಗತ್ಯವಾದ ಕರುಳಿನ ಉತ್ತಮ ಸೂಕ್ಷ್ಮಜೀವಿಗಳ ಸಂಖ್ಯೆಯನ್ನು ಹೆಚ್ಚಿಸುತ್ತದೆ. ಜೊತೆಗೆ, ಸಕ್ಕರೆ, ಪ್ರಚೋದಕಗಳು ಮತ್ತು ಕಾರ್ಬೋಹೈಡ್ರೇಟ್‌ಗಳ ಸೇವನೆಯ ಕಡುಬಯಕೆಗಳನ್ನು ಉಂಟುಮಾಡುವ ಕರುಳಿನಲ್ಲಿನ ಕೆಟ್ಟ ಬ್ಯಾಕ್ಟೀರಿಯಾಗಳನ್ನು ನಿಯಂತ್ರಿಸುತ್ತದೆ.

* ತ್ರಿಫಲವು ಯಕೃತ್ತನ್ನು ರಕ್ಷಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಔಷಧಿಗಳು, ತ್ಯಾಜ್ಯಗಳು ಮತ್ತು ಮಾಲಿನ್ಯ, ಪ್ರಿಸರ್ವೇಟಿವ್ಸ್‌ಗಳು, ಜಂಕ್ ಫುಡ್, ಕಲುಷಿತ ಗಾಳಿ ಇತ್ಯಾದಿಗಳನ್ನು ಸಂಸ್ಕರಿಸುವ ಮೂಲಕ ಯಕೃತ್ತು ಬಹಳಷ್ಟು ಒತ್ತಡಕ್ಕೆ ಒಳಗಾಗುತ್ತದೆ. ಇದು ಥೈರಾಯ್ಡ್, ಮಧುಮೇಹ, ಮೇದೋಜೀರಕ ಗ್ರಂಥಿಯ ಸಮಸ್ಯೆಗಳು ಮತ್ತು ದೇಹದ ಕೊಬ್ಬನ್ನು ಕಳೆದುಕೊಳ್ಳುವಲ್ಲಿ ತೊಂದರೆಗೆ ಕಾರಣವಾಗುತ್ತದೆ. ಹೀಗಾಗಿ ಪಿತ್ತಜನಕಾಂಗದ ಶುದ್ಧೀಕರಣವೂ ಮುಖ್ಯವಾಗಿರುತ್ತದೆ. ಹೀಗಾಗಿ, ಲಿವರ್ ಆರೋಗ್ಯಕರವಾಗಿರಲು ಮತ್ತು ದೇಹದಲ್ಲಿನ 500 ಕ್ಕೂ ಅಧಿಕ ಕಾರ್ಯಗಳು ಸುಗಮವಾಗಿ ಸಾಗಲು ತ್ರಿಫಲ ನೆರವಾಗುತ್ತದೆ.

* ತ್ರಿಫಲ ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುತ್ತದೆ. ಆದರೆ, ತ್ರಿಫಲವನ್ನು ಸೇವಿಸುವುದರ ಜೊತೆಗೆ ಆರೋಗ್ಯಕರ ದಿನಚರಿ ಮತ್ತು ಜೀವನಶೈಲಿಯನ್ನು ಅನುಸರಿಸುವುದು ಕೂಡ ಮುಖ್ಯವಾಗಿರುತ್ತದೆ.

- ದೀಪಿಕಾ ರಾಥೋಡ್, ಲ್ಯೂಕ್ ಕೌಟಿನ್ಹೋ ಹೋಲಿಸ್ಟಿಕ್ ಆಸ್ಪತ್ರೆಯ ಮುಖ್ಯ ಪೋಷಣೆ ಅಧಿಕಾರಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com