ನವದೆಹಲಿ: ಹೊಸ ಅಧ್ಯಯನದ ಪ್ರಕಾರ, ಖಿನ್ನತೆಯ ಲಕ್ಷಣಗಳನ್ನು ಹೊಂದಿರುವ ಜನರು ಪಾರ್ಶ್ವವಾಯುವನ್ನು ಹೊಂದುವ ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ. ಪಾರ್ಶ್ವವಾಯುವಿನ ನಂತರ ಅಂತಹ ಜನರು ಕಡಿಮೆ ಚೇತರಿಕೆಯನ್ನು ಕಾಣುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
ಖಿನ್ನತೆಯು ಪ್ರಪಂಚದಾದ್ಯಂತ ಇರುವ ಪ್ರತಿಯೊಬ್ಬ ಜನರ ಮೇಲೆ ಪರಿಣಾಮ ಬೀರುತ್ತದೆ ಮತ್ತು ವ್ಯಕ್ತಿಯ ಜೀವನದಲ್ಲಿ ವ್ಯಾಪಕವಾದ ಪರಿಣಾಮಗಳನ್ನು ಬೀರುತ್ತದೆ ಎಂದು ಐರ್ಲೆಂಡ್‌ನ ಗಾಲ್ವೇ ವಿಶ್ವವಿದ್ಯಾಲಯದ ಅಧ್ಯಯನ ಲೇಖಕ ರಾಬರ್ಟ್ ಪಿ ಮರ್ಫಿ ಹೇಳಿದ್ದಾರೆ.
'ಅಧ್ಯಯನದಲ್ಲಿ ಭಾಗವಹಿಸುವವರ ರೋಗಲಕ್ಷಣಗಳು, ಜೀವನ ಆಯ್ಕೆಗಳು ಮತ್ತು ಖಿನ್ನತೆ-ಶಮನಕಾರಿ ಔಷದಗಳ ಬಳಕೆ ಸೇರಿದಂತೆ ಹಲವಾರು ಅಂಶಗಳನ್ನು ಒಳಗೊಂಡಂತೆ ನಮ್ಮ ಅಧ್ಯಯನವು ಖಿನ್ನತೆಯ ವಿಶಾಲ ಚಿತ್ರಣವನ್ನು ಮತ್ತು ಪಾರ್ಶ್ವವಾಯು ಅಪಾಯಕ್ಕೆ ಅದರ ಸಂಪರ್ಕವನ್ನು ಒದಗಿಸುತ್ತದೆ. ಹೀಗಾಗಿ, ನಮ್ಮ ಫಲಿತಾಂಶಗಳು ಖಿನ್ನತೆಯ ರೋಗಲಕ್ಷಣಗಳು ಹೆಚ್ಚಿದ ಸ್ಟ್ರೋಕ್ ಅಪಾಯಕ್ಕೆ ಸಂಬಂಧಿಸಿವೆ ಎಂದು ತೋರಿಸುತ್ತವೆ. ಈ ಅಪಾಯವು ವಿವಿಧ ವಯಸ್ಸಿನ ಗುಂಪುಗಳಲ್ಲಿ ಮತ್ತು ಪ್ರಪಂಚದಾದ್ಯಂತ ಒಂದೇ ರೀತಿಯದ್ದಾಗಿದೆ' ಎಂದು ಮರ್ಫಿ ಹೇಳಿದರು.
ಈ ಅಧ್ಯಯನದ ಫಲಿತಾಂಶಗಳನ್ನು ನ್ಯೂರಾಲಜಿ ಜರ್ನಲ್‌ನಲ್ಲಿ ಪ್ರಕಟಿಸಲಾಗಿದೆ.
ಈ ಅಧ್ಯಯನವು ಇಂಟರ್‌ಸ್ಟ್ರೋಕ್ ಅಧ್ಯಯನದಿಂದ 26,877 ವಯಸ್ಕರನ್ನು ಒಳಗೊಂಡಿತ್ತು ಮತ್ತು ಯುರೋಪ್, ಏಷ್ಯಾ, ಉತ್ತರ ಮತ್ತು ದಕ್ಷಿಣ ಅಮೆರಿಕ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದಾದ್ಯಂತ 32 ದೇಶಗಳ ಜನರನ್ನು ಒಳಗೊಂಡಿದೆ ಎಂದು ಅದು ಹೇಳಿದೆ.
ಅಧ್ಯಯನದಲ್ಲಿ ಭಾಗವಹಿಸಿದವರಲ್ಲಿ, ಪಾರ್ಶ್ವವಾಯು ಹೊಂದಿರದ ಶೇ 14ರಷ್ಟು ಮಂದಿಗೆ ಹೋಲಿಸಿದರೆ, ಪಾರ್ಶ್ವವಾಯುವಿಗೆ ಒಳಗಾದವರಲ್ಲಿ ಶೇ 18 ರಷ್ಟು ಮಂದಿ ಖಿನ್ನತೆಯ ಲಕ್ಷಣಗಳನ್ನು ಹೊಂದಿದ್ದಾರೆ ಎಂದು ಅಧ್ಯಯನವು ಕಂಡುಹಿಡಿದಿದೆ.
ವಯಸ್ಸು, ಲಿಂಗ, ಶಿಕ್ಷಣ, ದೈಹಿಕ ಚಟುವಟಿಕೆ ಮತ್ತು ಇತರ ಜೀವನಶೈಲಿಯ ಅಂಶಗಳಿಗೆ ಸರಿಹೊಂದಿಸಿದ ನಂತರ ಖಿನ್ನತೆಯ ಯಾವುದೇ ಲಕ್ಷಣಗಳಿಲ್ಲದವರಿಗೆ ಹೋಲಿಸಿದರೆ, ಸ್ಟ್ರೋಕ್‌ಗೆ ಮೊದಲು ಖಿನ್ನತೆಯ ಲಕ್ಷಣಗಳನ್ನು ಹೊಂದಿರುವ ಜನರು ಶೇ 46ರಷ್ಟು ಹೆಚ್ಚಿನ ಪಾರ್ಶ್ವವಾಯು ಅಪಾಯವನ್ನು ಹೊಂದಿದ್ದಾರೆ ಎಂದು ಅಧ್ಯಯನವು ಹೇಳಿದೆ.
ಖಿನ್ನತೆಯ ಹೆಚ್ಚಿನ ರೋಗಲಕ್ಷಣಗಳನ್ನು ಹೊಂದಿದ್ದರೆ, ಅವರ ಪಾರ್ಶ್ವವಾಯು ಅಪಾಯವನ್ನು ಹೆಚ್ಚಿಸುತ್ತದೆ. ಖಿನ್ನತೆಯ ಐದು ಅಥವಾ ಹೆಚ್ಚಿನ ರೋಗಲಕ್ಷಣಗಳನ್ನು ವರದಿ ಮಾಡಿದವರು ಯಾವುದೇ ರೋಗಲಕ್ಷಣಗಳಿಲ್ಲದವರಿಗಿಂತ ಶೇ 54ರಷ್ಟು ಹೆಚ್ಚಿನ ಪಾರ್ಶ್ವವಾಯು ಅಪಾಯವನ್ನು ಹೊಂದಿದ್ದರು ಎಂದು ಅಧ್ಯಯನ ತಿಳಿಸಿದೆ.
ಖಿನ್ನತೆಯ ಮೂರರಿಂದ ನಾಲ್ಕು ರೋಗಲಕ್ಷಣಗಳನ್ನು ಹೊಂದಿದವರು ಮತ್ತು ಖಿನ್ನತೆಯ ಒಂದು ಅಥವಾ ಎರಡು ರೋಗಲಕ್ಷಣಗಳನ್ನು ಹೊಂದಿದವರು ಕ್ರಮವಾಗಿ ಶೇ 58 ಮತ್ತು ಶೇ 35ರಷ್ಟು ಹೆಚ್ಚಿನ ಅಪಾಯವನ್ನು ಹೊಂದಿರುತ್ತಾರೆ ಎಂದು ಅಧ್ಯಯನವು ಕಂಡುಹಿಡಿದಿದೆ.
ಖಿನ್ನತೆಯ ಲಕ್ಷಣಗಳನ್ನು ಹೊಂದಿರುವ ಜನರು ಹೆಚ್ಚು ತೀವ್ರವಾದ ಪಾರ್ಶ್ವವಾಯುವಿಗೆ ತುತ್ತಾಗುವ ಸಾಧ್ಯತೆಯಿಲ್ಲದಿದ್ದರೂ, ಅವರು ಖಿನ್ನತೆಯ ಯಾವುದೇ ಲಕ್ಷಣಗಳಿಲ್ಲದವರಿಗಿಂತ ಪಾರ್ಶ್ವವಾಯುವಿಗೆ ತುತ್ತಾದ ಒಂದು ತಿಂಗಳ ನಂತರ ಕೆಟ್ಟ ಫಲಿತಾಂಶ ಪಡೆಯುವ ಸಾಧ್ಯತೆಯಿದೆ ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಭಾಗವಹಿಸಿದ್ದ 26,877 ಮಂದಿಯಲ್ಲಿ, 13,000ಕ್ಕೂ ಹೆಚ್ಚು ಜನರು ಪಾರ್ಶ್ವವಾಯುವಿಗೆ ಒಳಗಾಗಿದ್ದರು. ಅಧ್ಯಯನವು, ಪಾರ್ಶ್ವವಾಯು ಹೊಂದಿರದ 13,000ಕ್ಕೂ ಹೆಚ್ಚು ಜನರೊಂದಿಗೆ ಹೋಲಿಕೆ ಮಾಡಿದೆ. ಆದರೆ, ಅವರ ವಯಸ್ಸು, ಲಿಂಗ, ಜನಾಂಗೀಯ ಗುರುತನ್ನು ಹೋಲುತ್ತದೆ. ಭಾಗವಹಿಸಿದ್ದವರ ಸರಾಸರಿ ವಯಸ್ಸು 62 ಎಂದು ವರದಿಯಾಗಿದೆ.
Advertisement