ಲೈಂಗಿಕ ದೌರ್ಬಲ್ಯ ಸಮಸ್ಯೆ ಹೆಚ್ಚಳ: ವ್ಯಕ್ತಿಯ ಮಾನಸಿಕ, ಆರ್ಥಿಕ ಒತ್ತಡ ಮುಖ್ಯ ಕಾರಣ!

ಕೋವಿಡ್ ಸಾಂಕ್ರಾಮಿಕ ಲಾಕ್ ಡೌನ್ ಸಮಯದಲ್ಲಿ ಜನರು, ವಿಶೇಷವಾಗಿ ಪುರುಷರು ಎದುರಿಸಿದ ಮಾನಸಿಕ ಮತ್ತು ಆರ್ಥಿಕ ಒತ್ತಡಗಳು ಅವರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮೇಲೂ ಪರಿಣಾಮ ಬೀರಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಕೋವಿಡ್ ಸಾಂಕ್ರಾಮಿಕ ಲಾಕ್ ಡೌನ್ ಸಮಯದಲ್ಲಿ ಜನರು, ವಿಶೇಷವಾಗಿ ಪುರುಷರು ಎದುರಿಸಿದ ಮಾನಸಿಕ ಮತ್ತು ಆರ್ಥಿಕ ಒತ್ತಡಗಳು ಅವರ ಲೈಂಗಿಕ ಮತ್ತು ಸಂತಾನೋತ್ಪತ್ತಿ ಆರೋಗ್ಯದ ಮೇಲೂ ಪರಿಣಾಮ ಬೀರಿದೆ. ನೆಫ್ರೋ-ಮೂತ್ರಶಾಸ್ತ್ರಜ್ಞರು ಹೇಳುವ ಪ್ರಕಾರ, ಪುರುಷರಲ್ಲಿ ಲೈಂಗಿಕ ಕ್ರಿಯೆಯ ಸಾಮರ್ಥ್ಯ ಕುಗ್ಗುವಿಕೆ, ಅಪಸಾಮಾನ್ಯ ಕ್ರಿಯೆ ಮತ್ತು ದುರ್ಬಲತೆಯ ಪ್ರಕರಣಗಳು ಹೆಚ್ಚಿವೆ, ಈ ಸಮಸ್ಯೆಗಳಿಗೆ ಇತ್ತೀಚೆಗೆ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ಳುವವವರ ಸಂಖ್ಯೆ ಹೆಚ್ಚಾಗಿದೆ. 

ಕೋವಿಡ್ ಸಾಂಕ್ರಾಮಿಕ ಬಂದ ನಂತರ 18ರಿಂದ 45 ವಯೋಮಾನದವರಲ್ಲಿ ದುರ್ಬಲತೆ ಪ್ರಕರಣಗಳು ಅದರಲ್ಲೂ ಪುರುಷರಲ್ಲಿ ಹೆಚ್ಚಾಗಿವೆ ಎಂದು ಕಂಡುಹಿಡಿದಿದ್ದಾರೆ. ಇದು ಭಾವನಾತ್ಮಕ ಯಾತನೆ, ಉದ್ಯೋಗ ನಷ್ಟ, ಪ್ರತ್ಯೇಕತೆ ಮತ್ತು ಕೋವಿಡ್‌ಗೆ ಚಿಕಿತ್ಸೆ ನೀಡಲು ಸ್ಟೀರಾಯ್ಡ್‌ಗಳ ಅತಿಯಾದ ಸೇವನೆ, ಧೂಮಪಾನ ಮತ್ತು ಮದ್ಯಪಾನದಂತಹ ಅಭ್ಯಾಸಗಳು ಕಾರಣವಾಗಿವೆ. 

ಫೋರ್ಟಿಸ್ ಆಸ್ಪತ್ರೆಗಳ ಮೂತ್ರಶಾಸ್ತ್ರದ ಹಿರಿಯ ನಿರ್ದೇಶಕ ಮತ್ತು ಮೂತ್ರಪಿಂಡ ವಿಜ್ಞಾನದ ವಿಶೇಷ ಮಂಡಳಿಯ ಅಧ್ಯಕ್ಷ ಡಾ ಮೋಹನ್ ಕೇಶವಮೂರ್ತಿ ಅವರು 2020 ಕ್ಕಿಂತ ಮೊದಲು ಸುಮಾರು 30-40 ರೋಗಿಗಳು ಲೈಂಗಿಕ ಕ್ರಿಯೆ ಸಾಮರ್ಥ್ಯ ಅಪಸಾಮಾನ್ಯ ಕ್ರಿಯೆ ನಿಮಿರುವಿಕೆ ಸಮಸ್ಯೆ (ED) ಅಥವಾ ಪುರುಷರ ಲೈಂಗಿಕ ಕ್ರಿಯೆ ಸಾಮರ್ಥ್ಯ ದುರ್ಬಲತೆ (MI) ಬಗ್ಗೆ ಅನೇಕ ಸಮಸ್ಯೆಗಳು ಬಂದಿವೆ. ಈಗ ಈ ಪ್ರಕರಣಗಳು ದುಪ್ಪಟ್ಟಾಗಿವೆ. ಶಸ್ತ್ರಚಿಕಿತ್ಸೆಯ ಅಗತ್ಯವಿರುವ ಕಾರ್ಯವಿಧಾನಗಳ ಸಂಖ್ಯೆಯೂ ದ್ವಿಗುಣಗೊಂಡಿದೆ ಎಂದು ಹೇಳುತ್ತಾರೆ. 

ಕೋವಿಡ್ ಮತ್ತು ಕೋವಿಡ್ ನಂತರದ ಸಮಯಗಳಲ್ಲಿ ವೈದ್ಯರೊಂದಿಗಿನ ಸಮಾಲೋಚನೆಯಿಂದ ತಿಳಿದುಬಂದಿರುವ ಅಂಶವೆಂದರೆ ಹೆಚ್ಚಿನ ಇಡಿ ಪ್ರಕರಣಗಳು ತೀವ್ರವಾದ ಆರ್ಥಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿರುವ ಪುರುಷರಿಗೆ ಸಂಬಂಧಿಸಿವೆ. ಸಾಂಕ್ರಾಮಿಕ ಸಮಯದಲ್ಲಿ ಒತ್ತಡ ಮತ್ತು ಆತಂಕಗಳನ್ನು ಉಂಟುಮಾಡಿದ್ದು ಇದು ವ್ಯಕ್ತಿಯ ಲೈಂಗಿಕ ಕ್ರಿಯೆ ಚಟುವಟಿಕೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ ಎನ್ನುತ್ತಿದ್ದಾರೆ. 

ಒತ್ತಡದಿಂದ ರಕ್ತನಾಳಗಳು ಕಿರಿದಾಗುವುದರಿಂದ ನಿಮಿರುವಿಕೆಯ ಸಮಸ್ಯೆ: ಕೋವಿಡ್ ಸಮಯದಲ್ಲಿ ಪುರುಷರಲ್ಲಿ ಹೆಚ್ಚಾಗಿರುವ ಈ ನಿಮಿರುವಿಕೆ ಸಮಸ್ಯೆಗೆ ಮುಖ್ಯ ಕಾರಣವೆಂದರೆ ಎಂಡೋಥೀಲಿಯಲ್ ಅಪಸಾಮಾನ್ಯ ಕ್ರಿಯೆ (ರಕ್ತನಾಳಗಳ ಕಿರಿದಾಗುವಿಕೆ) ಮತ್ತು ಕೋವಿಡ್ ಸಮಯದಲ್ಲಿ ಮಾನಸಿಕ ಯಾತನೆಯ ನಡುವಿನ ಸಂಬಂಧಗಳು ಎಂದು ತಜ್ಞರು ಹೇಳಿದ್ದಾರೆ. ಸ್ಪರ್ಶ್ ಆಸ್ಪತ್ರೆಯ ಸಮಾಲೋಚಕ ಮೂತ್ರಶಾಸ್ತ್ರಜ್ಞ ಡಾ ಅವಿನಾಶ್ ಟಿಎಸ್ ಅವರು, ಸಾಂಕ್ರಾಮಿಕ ರೋಗದ ನಂತರ ಇಡಿ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ಕಂಡುಬರುತ್ತಿವೆ ಎನ್ನುತ್ತಾರೆ. 

ಒಬ್ಬ ವ್ಯಕ್ತಿಯು ಸಾಮಾನ್ಯ ನಿಮಿರುವಿಕೆ ಹೊಂದಲು, ಉತ್ತಮ ರಕ್ತದ ಹರಿವು ಅಗತ್ಯವಿದೆ ಎಂದು ಅವರು ವಿವರಿಸಿದರು. ಒಬ್ಬ ವ್ಯಕ್ತಿಯು ಒತ್ತಡದಲ್ಲಿದ್ದಾಗ ರಕ್ತನಾಳಗಳು ಕಿರಿದಾಗುತ್ತವೆ, ಇದು ಶಿಶ್ನದ ನಿಮಿರುವಿಕೆ ಸಮಸ್ಯೆಗೆ ಕಾರಣವಾಗುತ್ತದೆ. ಸಣ್ಣ ಸಮಸ್ಯೆಗಳಿಗೆ ಸಮಾಲೋಚನೆ ಮತ್ತು ಔಷಧಿಗಳೊಂದಿಗೆ ಚಿಕಿತ್ಸೆ ನೀಡಲಾಗುತ್ತದೆ. ಸಾಮಾನ್ಯವಾಗಿ ವಯಸ್ಸಾದ ರೋಗಿಗಳಿಗೆ ಶಿಶ್ನ ಕಸಿ ಅಗತ್ಯವಿರುವ ಆಕ್ರಮಣಕಾರಿ ಶಸ್ತ್ರಚಿಕಿತ್ಸೆಗಳ ಅಗತ್ಯವಿರುತ್ತದೆ. ಹೆಚ್ಚಿನ ED ಮತ್ತು MI ಪ್ರಕರಣಗಳನ್ನು ಸಮಾಲೋಚನೆ ಮತ್ತು ಮುಖತಃ ಭೇಟಿ ಮಾಡಿ ಸಮಸ್ಯೆ ಹೇಳಿಕೊಂಡು ಔಷಧಿಗಳ ಸಂಯೋಜನೆ ಮತ್ತು ಪರಸ್ಪರ ಸಂಬಂಧದಲ್ಲಿನ ಬದಲಾವಣೆಯಿಂದ ಚಿಕಿತ್ಸೆ ನೀಡಬಹುದು ಎಂದು ವೈದ್ಯರು ಹೇಳುತ್ತಾರೆ. 

ಆದರೆ ಇತರ ಸಂದರ್ಭಗಳಲ್ಲಿ, ಆಧುನಿಕ ಶಸ್ತ್ರಚಿಕಿತ್ಸಾ ತಂತ್ರಗಳು ಅಗತ್ಯವಿದೆ. ವಯಸ್ಸು, ಮಧುಮೇಹ, ಹೆಚ್ಚಿದ ತಂಬಾಕು ಮತ್ತು ಆಲ್ಕೋಹಾಲ್ ಸೇವನೆ, ಅಧಿಕ ರಕ್ತದೊತ್ತಡ, ಹೃದಯರಕ್ತನಾಳದ ಕಾಯಿಲೆ ಮತ್ತು ಸ್ಥೂಲಕಾಯತೆಯಂತಹ ವಿವಿಧ ಕಾರಣಗಳು ಪುರುಷರಲ್ಲಿ ಲೈಂಗಿಕ ಕ್ರಿಯೆ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತವೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com