ಅಡುಗೆ ಮನೆಯಲ್ಲಿ ನೀವು ಬಳಸುವ ನಾನ್ ಸ್ಟಿಕ್ ಪ್ಯಾನ್‌ಗಳು ಸುರಕ್ಷಿತವೇ? ಏನಿದು 'ಟೆಫ್ಲಾನ್ ಫ್ಲೂ'?

ನಾನ್-ಸ್ಟಿಕ್ ಕುಕ್‌ವೇರ್ ಅನ್ನು ವ್ಯಾಪಕವಾಗಿ ಬಳಸಲಾಗುವ ಭಾರತದಲ್ಲಿ, ಇತರ ಜ್ವರದ ರೋಗಲಕ್ಷಣಗಳಿರುವ ಕಾರಣ ಈ ಟೆಫ್ಲಾನ್ ಜ್ವರದ ಬಗ್ಗೆ ಅರಿವಿನ ಕೊರತೆಯಿದೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ನಾನ್ ಸ್ಟಿಕ್ ಪ್ಯಾನ್‌ ಗಳನ್ನು ಅತಿಯಾಗಿ ಬಿಸಿ ಮಾಡಿದಾಗ ಟೆಫ್ಲಾನ್ ಲೇಪಿತ ಕುಕ್ ವೇರ್ ನಿಂದ ಬರುವ ವಿಷಕಾರಿ ಹೊಗೆಯು ದೇಹ ಸೇರಿದಾಗ ಜ್ವರದ ಜೊತೆಗೆ ಅನೇಕ ಅಪಾಯಗಳನ್ನು ತಂದೊಡ್ಡುವ ಸಾಧ್ಯತೆಯಿದೆ.

ನಾನ್-ಸ್ಟಿಕ್ ಕುಕ್‌ವೇರ್ ಅನ್ನು ವ್ಯಾಪಕವಾಗಿ ಬಳಸಲಾಗುವ ಭಾರತದಲ್ಲಿ, ಇತರ ಜ್ವರದ ರೋಗಲಕ್ಷಣಗಳಿರುವ ಕಾರಣ ಈ ಟೆಫ್ಲಾನ್ ಜ್ವರದ ಬಗ್ಗೆ ಅರಿವಿನ ಕೊರತೆಯಿದೆ. ತಪ್ಪಾದ ರೋಗನಿರ್ಣಯದಿಂದಾಗಿ ಟೆಫ್ಲಾನ್ ಫ್ಲೂ ಬಗ್ಗೆ ಗಮನಾರ್ಹವಾಗಿ ಕಡಿಮೆ ವರದಿಯಾಗುತ್ತಿರಬಹುದು ಎಂದು ತಜ್ಞರು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ತಿಳಿಸಿದರು. ಈ ವಿಷಕಾರಿ ಹೊಗೆಗೆ ಒಡ್ಡಿಕೊಳ್ಳುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು, ಹಾಗಾಗಿ 'ಸ್ಟೇನ್‌ಲೆಸ್ ಸ್ಟೀಲ್' ಅಥವಾ ' ಕಬ್ಬಿಣ'ದಿಂದ ತಯಾರಿಸಿದ ಕುಕ್‌ವೇರ್ ಬಳಸಲು ಸಲಹೆ ನೀಡಿದ್ದಾರೆ. ನಾನ್‌ಸ್ಟಿಕ್ ಕುಕ್‌ವೇರ್ ಅನ್ನು ಅತಿಯಾಗಿ ಬಿಸಿ ಮಾಡುವುದು ಅಥವಾ ಪ್ಯಾನ್‌ಗಳನ್ನು ಸ್ಕ್ರಾಚಿಂಗ್ ಮಾಡುವುದರಿಂದ ಹೊರಬರುವ ಲೇಪನದಲ್ಲಿನ ರಾಸಾಯನಿಕಗಳು ಈ ಜ್ವರಕ್ಕೆ ಕಾರಣವಾಗಬಹುದು ಎಂದು, ಹೀಗಾಗಿ ಅವುಗಳನ್ನು ಬಳಕೆ ಮಾಡದಂತೆ ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಸ್ಕ್ರಾಚ್ ಅಥವಾ ಹಾನಿಗೊಳಗಾದ ಪ್ಯಾನ್‌ಗಳ ಬಳಕೆಯನ್ನು ತಕ್ಷಣವೇ ತ್ಯಜಿಸಬೇಕು ಏಕೆಂದರೆ ಅವುಗಳಿಂದ ರಾಸಾಯನಿಕಗಳು ದೇಹದಲ್ಲಿ ಉಳಿಯಬಹುದು ಮತ್ತು ಮೂತ್ರಪಿಂಡ ಮತ್ತು ವೃಷಣ ಕ್ಯಾನ್ಸರ್ ಸೇರಿದಂತೆ ಗಮನಾರ್ಹ ಆರೋಗ್ಯ ಅಪಾಯಗಳನ್ನು ಉಂಟುಮಾಡಬಹುದು ಎಂದು ಹೇಳಿದ್ದಾರೆ. ನಾನ್‌ಸ್ಟಿಕ್ ಪ್ಯಾನ್ ಅನ್ನು ಹೆಚ್ಚಿನ ತಾಪಮಾನದಲ್ಲಿ ಬಿಸಿಮಾಡಿದಾಗ, ಕೆಲವು ನಾನ್‌ಸ್ಟಿಕ್ ಪ್ಯಾನ್‌ಗಳ ಮೇಲಿನ ಲೇಪನವು ಹದಗೆಡಲು ಪ್ರಾರಂಭಿಸಬಹುದು ಮತ್ತು ಆಕ್ಸಿಡೀಕೃತ, ಫ್ಲೋರಿನೇಟೆಡ್ ಪದಾರ್ಥಗಳ ಸಂಕೀರ್ಣ ಮಿಶ್ರಣವನ್ನು ಗಾಳಿಯಲ್ಲಿ ಬಿಡುಗಡೆ ಮಾಡಬಹುದು. ಈ ಹಾನಿಕಾರಕ ಪದಾರ್ಥಗಳನ್ನು ಹೊಗೆಯ ರೂಪದಲ್ಲಿ ಉಸಿರಾಡುವುದರಿಂದ ಈ ರೀತಿಯ ಅಸ್ವಸ್ಥತೆ ಸಂಭವಿಸಬಹುದು. ತಲೆನೋವು, ಶೀತ, ಜ್ವರ, ಎದೆಯ ಬಿಗಿತ, ಕೆಮ್ಮು ಮತ್ತು ಗಂಟಲು ನೋವು ಮುಂತಾದ ರೋಗಲಕ್ಷಣಗಳಿಗೆ ಕಾರಣವಾಗುತ್ತದೆ ಎಂದು ಆಸ್ಟರ್ CMI ಆಸ್ಪತ್ರೆಯ ಕ್ಲಿನಿಕಲ್ ನ್ಯೂಟ್ರಿಷನ್ ಮತ್ತು ಡಯೆಟಿಕ್ಸ್ ಸೇವೆಗಳ ಮುಖ್ಯಸ್ಥ ಎಡ್ವಿನಾ ರಾಜ್ ತಿಳಿಸಿದ್ದಾರೆ.

ಟೆಫ್ಲಾನ್ ಜ್ವರ ದ ಲಕ್ಷಣಗಳು ಕೆಲವೇ ಗಂಟೆಗಳಲ್ಲಿ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತವೆ. ಅತಿಯಾಗಿ ಬಿಸಿ ಮಾಡಿದ ಟೆಫ್ಲಾನ್ ಕುಕ್‌ವೇರ್‌ನಿಂದ ಬರುವ ನಿರಂತರ ಹೊಗೆ ಸೇವಿಸುವ ಕಾರಣದಿಂದ ಥೈರಾಯ್ಡ್, ಕೆಲವು ರೀತಿಯ ಕ್ಯಾನ್ಸರ್‌ಗಳು ಮತ್ತು ಬಂಜೆತನದಂತಹ ಸಮಸ್ಯೆಗಳು ಶುರುವಾಗುತ್ತವೆ ಎಂದು ವೈದ್ಯರು ಹೇಳಿದ್ದಾರೆ.

"ಟೆಫ್ಲಾನ್ ಫ್ಲೂ" ಅನ್ನು ಸಾಮಾನ್ಯವಾಗಿ ಗುರುತಿಸಲಾಗುವುದಿಲ್ಲ, ಏಕೆಂದರೆ ಅದರ ರೋಗಲಕ್ಷಣಗಳು ಸಾಮಾನ್ಯ ಉಸಿರಾಟದ ಸೋಂಕುಗಳಿಗೆ ಹೋಲುತ್ತವೆ, ವಿಶೇಷವಾಗಿ ಫ್ಲೂ ಋತುವಿನಲ್ಲಿ ಉಂಟಾಗುವ ವೈರಲ್ ಸೋಂಕು ಎಂದು ಭಾವಿಸಲಾಗುತ್ತದೆ. ಇದರಿಂದ ತಪ್ಪಾದ ಚಿಕಿತ್ಸೆ ಮತ್ತು ಅಸಮರ್ಪಕ ರೋಗ ನಿರ್ಣಯಕ್ಕೆ ಕಾರಣವಾಗುತ್ತದೆ ಎಂದು ಬಿಜಿಎಸ್ ಆಸ್ಪತ್ರೆಯ ಇಂಟರ್ವೆನ್ಷನಲ್ ಶ್ವಾಸಕೋಶಶಾಸ್ತ್ರಜ್ಞ ಡಾ. ಪಿಎಚ್ ಮಂಜುನಾಥ್ ತಿಳಿಸಿದ್ದಾರೆ.

ಸಾಂದರ್ಭಿಕ ಚಿತ್ರ
ಮಂಕಿಪಾಕ್ಸ್ ಅಥವಾ Mpox: ರೋಗ ಲಕ್ಷಣಗಳು ಮತ್ತು ಚಿಕಿತ್ಸೆ (ಕುಶಲವೇ ಕ್ಷೇಮವೇ)

ಅಪಾಯವನ್ನು ಕಡಿಮೆ ಮಾಡಲು, ಅಡುಗೆ ಮಾಡುವಾಗ ಸರಿಯಾದ ಸರಿಯಾಗಿ ಗಾಳಿಯಾಟ ಖಚಿತಪಡಿಸಿಕೊಳ್ಳುಬೇಕು ಕುಕ್‌ವೇರ್‌ಗಳು ಹೆಚ್ಚು ಬಿಸಿಯಾಗುವುದನ್ನು ತಪ್ಪಿಸುವಂತಹ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಅವರು ಹೇಳಿದರು. ಟೆಫ್ಲಾನ್ ಪ್ಯಾನ್ ಅನ್ನು ಹೆಚ್ಚಿನ ತಾಪಮಾನಕ್ಕೆ ಬಿಸಿ ಮಾಡುವುದನ್ನು ತಪ್ಪಿಸಬೇಕು. ನಾನ್‌ಸ್ಟಿಕ್ ಪ್ಯಾನ್‌ಗಳು ಕಡಿಮೆ ಸಮಯದಲ್ಲಿ ಬೇಗ ಬಿಸಿಯಾಬಹುದು, ಆದ್ದರಿಂದ ನಾನ್‌ಸ್ಟಿಕ್ ಪ್ಯಾನ್‌ಗಳನ್ನು ಪೂರ್ವಭಾವಿಯಾಗಿ ಕಾಯಿಸುವುದನ್ನು ನಿಲ್ಲಿಸಿ. ಯಾವಾಗಲೂ ಎಣ್ಣೆ, ತುಪ್ಪ, ಬೆಣ್ಣೆಯಂತಹುಗಳನ್ನೇ ಹಾಕಿ ಬಿಸಿ ಮಾಡಬೇಕು. ಅಡುಗೆ ಮಾಡಿದ ನಂತರ ಜ್ವರ ತರಹದ ಲಕ್ಷಣಗಳು ಕಂಡುಬಂದರೆ ವ್ಯಕ್ತಿಗಳು ವೈದ್ಯರನ್ನು ಸಂಪರ್ಕಿಸಬೇಕು ಎಂದು ತಜ್ಞರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com