ಮಾತ್ರೆ ತಗೋಳೋ ಮುನ್ನ ಇರಲಿ ಎಚ್ಚರ: ಔಷಧಿ ಖರೀದಿಸುವಾಗ ಮರೆತೂ ಈ ತಪ್ಪುಗಳನ್ನು ಮಾಡಬೇಡಿ!

Choosing Safe Medicines: ಆನ್‌ಲೈನ್ ರಿಯಾಯಿತಿ ಎಂದು ಬಿಲ್ ಇಲ್ಲದೇ ಔಷಧಿ ಖರೀದಿ ಮಾಡೋದು ಎಷ್ಟು ಡೇಂಜರ್ ಗೊತ್ತಾ? ಔಷಧಿ ಖರೀದಿಯಲ್ಲಿ ನಿರ್ಲಕ್ಷ್ಯ ಮಾಡಿದರೆ ಆರೋಗ್ಯವೇ ಪಣಕ್ಕೆ ಇಟ್ಟಂತೆ! ಹಾಗಾಗಿ, ಔಷಧಿ ಖರೀದಿ ಮಾಡೋ ಮುನ್ನ ತಪ್ಪದೇ ಪಾಲಿಸಬೇಕಾದ ನಿಯಮಗಳ ಕುರಿತ ಮಾಹಿತಿ ಇಲ್ಲಿದೆ:
Choosing Safe Medicines: Online Risks vs Pharmacy Advice
ಮಾತ್ರೆ ತಗೋಳೋ ಮುನ್ನ ಇರಲಿ ಎಚ್ಚರAI Image
Updated on

Choosing Safe Medicines: ತರಕಾರಿ ಖರೀದಿಸುವಾಗ ಹತ್ತು ಬಾರಿ ಪರೀಕ್ಷಿಸುವ ನಾವು, ಜೀವ ಉಳಿಸಬೇಕಾದ ಔಷಧಿಯನ್ನು ಖರೀದಿಸುವಾಗ ಮಾತ್ರ ಅಷ್ಟೇ ಜಾಗರೂಕತೆ ವಹಿಸುತ್ತಿದ್ದೇವಾ? ಆನ್‌ಲೈನ್‌ನಲ್ಲಿ ಸಿಗುವ ಭರ್ಜರಿ ರಿಯಾಯಿತಿಯ ಆಸೆಗೋ ಅಥವಾ ಗಡಿಬಿಡಿಯಲ್ಲೋ ನಾವು ಮಾಡುವ ಸಣ್ಣ ತಪ್ಪು, ಅಡ್ಡಪರಿಣಾಮಗಳ ಸುಳಿಗೆ ಸಿಲುಕಿಸಿ ಇಡೀ ಆರೋಗ್ಯವನ್ನೇ ಬುಡಮೇಲು ಮಾಡಬಹುದು. ಎಕ್ಸ್‌ಪೈರಿ ದಿನಾಂಕದಿಂದ ಹಿಡಿದು ನಕಲಿ ಮಾತ್ರೆಗಳ ಜಾಲದವರೆಗೆ, ಔಷಧಿ ಕೊಳ್ಳುವ ಮುನ್ನ ಪ್ರತಿಯೊಬ್ಬರೂ ತಿಳಿದುಕೊಳ್ಳಲೇಬೇಕಾದ ಮಾಹಿತಿ ಇಲ್ಲಿದೆ:

  • ಎಕ್ಸ್ಪೈರಿ ಡೇಟ್ ನೋಡದೆ ಔಷಧಿ ಖರೀದಿ

ಇದು ಅತಿ ದೊಡ್ಡ ತಪ್ಪು. ಅನೇಕರು ಮಾತ್ರೆಗಳ ಮೇಲಿನ ಎಕ್ಸ್ಪೈರಿ ಡೇಟ್ ನೋಡುವುದೇ ಇಲ್ಲ. ಅವಧಿ ಮುಗಿದ ಔಷಧ ತಗೆದುಕೊಂಡರೆ ಅದು ಕೆಲಸ ಮಾಡುವುದಿಲ್ಲ, ಜೊತೆಗೆ ಅಡ್ಡಪರಿಣಾಮ ಕೂಡ ಬರಬಹುದು. ಹಾಗಾಗಿ, ಔಷಧಿ ತೆಗೆದುಕೊಂಡ ತಕ್ಷಣ ಮೊದಲು ಎಕ್ಸ್ಪೈರಿ ಡೇಟ್ ಚೆಕ್ ಮಾಡಿ, ಕನಿಷ್ಠ 6 ತಿಂಗಳ ಅವಧಿ ಇರುವ ಔಷಧಿಯನ್ನೇ ತೆಗೆದುಕೊಳ್ಳಿ.

  • ಪ್ರಿಸ್ಕ್ರಿಪ್ಷನ್ ಇಲ್ಲದೆ ಆ್ಯಂಟಿಬಯೋಟಿಕ್ ಮತ್ತು ನಿದ್ದೆ ಮಾತ್ರೆ ಬೇಡವೇ ಬೇಡ

ತಲೆನೋವು, ಜ್ವರಕ್ಕೆ ಎಂದು ಸ್ವತಃ ತಾವೇ ಮೆಡಿಕಲ್ ಶಾಪ್ ಗೆ ಹೋಗಿ ಆ್ಯಂಟಿಬಯೋಟಿಕ್ ತೆಗೆದುಕೊಳ್ಳುವುದು ತುಂಬಾ ಅಪಾಯಕಾರಿ. ಅದರಲ್ಲೂ, ವೈದ್ಯರ ಸಲಹೆ ಇಲ್ಲದೆ ಆ್ಯಂಟಿಬಯೋಟಿಕ್ ತಿಂದರೆ ದೇಹದಲ್ಲಿ ಆ್ಯಂಟಿಬಯೋಟಿಕ್ ರೆಸಿಸ್ಟೆನ್ಸ್ ಬರುತ್ತದೆ. ಯಾಕಂದ್ರೆ, ಮುಂದೆ ಯಾವುದಾದರು ದೊಡ್ಡ ಕಾಯಿಲೆ ಬಂದಾಗ ಔಷಧವೇ ಕೆಲಸ ಮಾಡುವುದಿಲ್ಲ.

  • ಬಿಲ್ ತೆಗೆದುಕೊಳ್ಳದಿರುವುದು

ಔಷಧಿ ಖರೀದಿಸಿದಾಗ ಬಿಲ್ ತೆಗೆದುಕೊಳ್ಳುವುದು ತುಂಬಾ ಮುಖ್ಯ. ಬಿಲ್ ಇಲ್ಲದಿದ್ದರೆ ಆ ಔಷಧ ಅಸಲಿಯೋ ನಕಲಿಯೋ ಎಂದು ತಿಳಿಯುವುದಿಲ್ಲ. ಒಂದು ವೇಳೆ ಅಡ್ಡಪರಿಣಾಮ ಬಂದರೆ ದೂರು ನೀಡಲು ಬಿಲ್ ಬೇಕೇ ಬೇಕು. ಆನ್ಲೈನ್ ನಲ್ಲಿ ಖರೀದಿಸಿದರೂ ಬಿಲ್ ಡೌನ್ ಲೋಡ್ ಮಾಡಿ ಇಟ್ಟುಕೊಳ್ಳಿ.

Choosing Safe Medicines: Online Risks vs Pharmacy Advice
ಅತಿಯಾಗಿ ಕಾಫಿ ಕುಡಿತೀರಾ? ಹುಷಾರ್, ಮುಂದೆ ಈ ಸಮಸ್ಯೆ ಎದುರಾಗಬಹುದು! Neurosurgeon ಸಲಹೆ ಏನು?
  • ಆನ್ಲೈನ್ ನಲ್ಲಿ ಅಪರಿಚಿತ ವೆಬ್ ಸೈಟ್ ನಲ್ಲಿ ಔಷಧಿ ಖರೀದಿ

ಆನ್ಲೈನ್ ನಲ್ಲಿ ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಯಾವುದೇ ವೆಬ್ ಸೈಟ್ ಅಥವಾ ವಾಟ್ಸಾಪ್ ನಲ್ಲಿ ಬರುವ ಲಿಂಕ್ ನಿಂದ ಔಷಧಿ ಖರೀದಿಸಬೇಡಿ. ಯಾವಾಗಲೂ ಲೈಸೆನ್ಸ್ ಇರುವ, ಹೆಸರುವಾಸಿಯಾದ ಆ್ಯಪ್ ಗಳಾದ 1mg, PharmEasy, Netmeds ನಂತಹ ಕಡೆ ಮಾತ್ರ ಖರೀದಿಸಿ. ಈ ವೇಳೆ ಔಷಧಿಯ ಪ್ಯಾಕಿಂಗ್ ಹರಿದಿದೆಯೇ, ಸೀಲ್ ಓಪನ್ ಆಗಿದೆಯೇ ಎಂದು ಚೆಕ್ ಮಾಡಿ.

  • ಒಂದೇ ಔಷಧದ ಬೇರೆ ಬ್ರ್ಯಾಂಡ್ ಅಥವಾ ಬೇರೆ ಪವರ್ ತೆಗೆದುಕೊಳ್ಳುವುದು

ವೈದ್ಯರು 500 mg ಮಾತ್ರೆ ಬರೆದಿದ್ದರೆ ಮೆಡಿಕಲ್ ಶಾಪ್ ನವರು 250 mg ಕೊಟ್ಟರೆ ಅಥವಾ ಒಂದು ಕಂಪನಿಯ ಮಾತ್ರೆ ಬದಲು ಇನ್ನೊಂದು ಕಂಪನಿಯ ಮಾತ್ರೆ ಕೊಟ್ಟರೆ ತೆಗೆದುಕೊಳ್ಳಬೇಡಿ. ವೈದ್ಯರನ್ನು ಕೇಳದೆ ಡೋಸ್ ಬದಲಾಯಿಸುವುದು ಅಪಾಯ.

  • ಔಷಧಿಯನ್ನು ಹೇಗೆ ಇಡಬೇಕು ಎಂದು ಕೇಳದಿರುವುದು..

ಕೆಲವು ಔಷಧಿಗಳನ್ನು ಫ್ರಿಜ್ ನಲ್ಲಿ ಇಡಬೇಕು, ಕೆಲವನ್ನು ಬಿಸಿಲಿಗೆ ಇಡಬಾರದು. ಇದನ್ನು ಕೇಳದೆ ಹೋದರೆ ಔಷಧ ಹಾಳಾಗುತ್ತದೆ.

Choosing Safe Medicines: Online Risks vs Pharmacy Advice
ಬಾದಾಮಿ, ವಾಲ್ನಟ್, ಗೋಡಂಬಿ: ಯಾವ ಸೂಪರ್‌ಫುಡ್ ಯಾವಾಗ ತಿನ್ನಬೇಕು?

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com