ರಾಜ್ಯ ವಿಧಾನಸಭಾ ಚನಾವಣೆ ಫಲಿತಾಂಶ 2023: ಸರ್ವಜ್ಞನಗರದಲ್ಲಿ ಕೆಜೆ.ಜಾರ್ಜ್ ಗೆಲುವು

ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ 2023 ಪ್ರಕಟಗೊಂಡಿದ್ದು, ಸರ್ವಜ್ಞನಗರದಲ್ಲಿ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್ ಅವರು ಗೆಲುವು ಸಾಧಿಸಿದ್ದಾರೆ.
ಕೆಜೆ.ಜಾರ್ಜ್
ಕೆಜೆ.ಜಾರ್ಜ್
Updated on

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ 2023 ಪ್ರಕಟಗೊಂಡಿದ್ದು, ಸರ್ವಜ್ಞನಗರದಲ್ಲಿ ಮಾಜಿ ಸಚಿವ, ಹಿರಿಯ ಕಾಂಗ್ರೆಸ್ ಮುಖಂಡ ಕೆ.ಜೆ.ಜಾರ್ಜ್ ಅವರು ಗೆಲುವು ಸಾಧಿಸಿದ್ದಾರೆ.

ಸರ್ವಜ್ಞನಗರ ಕ್ಷೇತ್ರವು ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಮೇ. 10 ರಂದು ನಡೆದ ಚುನಾವಣೆಯಲ್ಲಿ ಕ್ಷೇತ್ರದಲ್ಲಿ ಶೇ.49.10ರಷ್ಟು ಮತದಾನವಾಗಿತ್ತು.  ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕ ಕೆ.ಜೆ. ಜಾರ್ಜ್ ಅವರದೇ ಪಾರುಪತ್ಯ.

ಕ್ಷೇತ್ರದಲ್ಲಿ 1967ರಿಂದ 2018ರವರೆಗೆ ನಡೆದ ಬಹುತೇಕ ಸಾರ್ವತ್ರಿಕ ಚುನಾವಣೆಗಳಲ್ಲಿ ಕಾಂಗ್ರೆಸ್‌ನ ಕೈ ಮೇಲಾಗಿದೆ. ಈ ಬಾರಿ ಕೂಡ ಕ್ಷೇತ್ರದಲ್ಲಿ ಜಾರ್ಜ್ ಗೆಲುವು ಸಾಧಿಸಿದ್ದಾರೆ. ಜಾರ್ಜ್ ಅವರು ಕಮಲ ಪಾಳಯದ ಅಭ್ಯರ್ಥಿ ಪದ್ಮನಾಭರೆಡ್ಡಿ ವಿರುದ್ಧ 49,397 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com