ಕೆಂಡದಂತಾದ ಬೆಂಗಳೂರು: ಒಂದು ಎಳನೀರು ಬೆಲೆ 35 ರುಪಾಯಿ

ದಿನ ಕಳೆದಂತೆ ಹೆಚ್ಚುತ್ತಿರುವ ಬಿಸಿಲ ಝಳಕ್ಕೆ ಬೆಂಗಳೂರಿಗರು ತತ್ತರಿಸಿದ್ದಾರೆ. ಈ ಮಧ್ಯೆ ಬೆಂಗಳೂರಿನಲ್ಲಿ ಎಳನೀರು ಬೆಲೆ ಸಹ ಗಗನಕ್ಕೇರಿದೆ...
ಎಳನೀರು
ಎಳನೀರು

ಬೆಂಗಳೂರು: ದಿನ ಕಳೆದಂತೆ ಹೆಚ್ಚುತ್ತಿರುವ ಬಿಸಿಲ ಝಳಕ್ಕೆ ಬೆಂಗಳೂರಿಗರು ತತ್ತರಿಸಿದ್ದಾರೆ. ಈ ಮಧ್ಯೆ ಬೆಂಗಳೂರಿನಲ್ಲಿ ಎಳನೀರು ಬೆಲೆ ಸಹ ಗಗನಕ್ಕೇರಿದೆ.

ಹೌದು. ದೇಹವನ್ನು ತಂಪಾಗಿಡಲು ಹಾಗೂ ಧಗೆಯನ್ನು ತಣಿಸಿಕೊಳ್ಳುವ ಸಲುವಾಗಿ ಬೆಂಗಳೂರು ಮಂದಿ ಎಳನೀರಿಗೆ ಮೊರೆ ಹೋಗುತ್ತಿದ್ದಾರೆ. ಹೀಗಾಗಿ ಎಳನೀರಿಗೆ ಬೇಡಿಕೆ ಹೆಚ್ಚಾಗಿದ್ದರಿಂದ ಎಂದಿಗಿಂತ 10 ರುಪಾಯಿ ಹೆಚ್ಚಾಗಿದೆ. 25 ರುಪಾಯಿ ಇದ್ದ ಎಳನೀರು ಬೆಲೆ ಏಕಾಏಕಿ 35 ರುಪಾಯಿಗೆ ಏರಿಕೆಯಾಗಿದೆ.

ಕೆಲ ದಿನಗಳಿಂದ ಬೆಂಗಳೂರಿನಲ್ಲಿ ಉಷ್ಣಾಂಶ ಹೆಚ್ಚಾಗಿದೆ. ಪ್ರಪ್ರಥಮವೆಂಬಂತೆ ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಉಷ್ಣಾಂಶ 40 ಡಿಗ್ರಿ ಸೆಲ್ಷಿಯಸ್ ದಾಖಲಾಗಿತ್ತು. ಇದರಿಂದಾಗಿ ಜನರು ತತ್ತರಿಸಿದ್ದು, ಎಳನೀರು ಮೊರೆ ಹೋಗಬೇಕಾಗಿ ಬಂದಿದೆ.

ಸಾಮಾನ್ಯವಾಗಿ ಒಂದು ಎಳನೀರು ಬೆಲೆ 25 ರುಪಾಯಿ ಇತ್ತು. ಇದೀಗ ಬೇಡಿಕೆ ಹೆಚ್ಚಾಗಿದ್ದರಿಂದ ಈ ಬೆಲೆ 30 ರಿಂದ 35 ರುಪಾಯಿಗೆ ಏರಿಕೆಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com