ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ; ಸ್ಥಳಾವಕಾಶದ ಕೊರತೆ!

ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಸಂತಸದ ಸುದ್ದೀಯಾದರೆ ಸಂತಸದ ಸುದ್ದಿಯಲ್ಲೇ ಮತ್ತೊಂದು ಅತಂಕವೂ ಎದುರಾಗಿದೆ
ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚಳ; ಸ್ಥಳಾವಕಾಶದ ಕೊರತೆ!

ಬೆಂಗಳೂರು: ರಾಜ್ಯದಲ್ಲಿ ಹುಲಿಗಳ ಸಂಖ್ಯೆ ಹೆಚ್ಚುತ್ತಿದೆ ಎನ್ನುವುದು ಸಂತಸದ ಸುದ್ದೀಯಾದರೆ ಸಂತಸದ ಸುದ್ದಿಯಲ್ಲೇ ಮತ್ತೊಂದು ಅತಂಕವೂ ಎದುರಾಗಿದೆ. ಹುಲಿಗಳ ಸಂಖ್ಯೆ ಹೆಚ್ಚುತ್ತಿರುವುದರೊಂದಿಗೆ ಸ್ಥಳಾವಕಾಶದ ಕೊರತೆಯೂ ಹೆಚ್ಚುತ್ತಿದೆ.
ಜಾಗದ ಕೊರತೆ ಎದುರಾಗಿರುವ ಪರಿಣಾಮ ಹುಲಿಗಳು ಕಾದಾಟ ನಡೆಸುತ್ತಿದ್ದು, 2015 ರ ಆಗಸ್ಟ್ ನಿಂದ 2016 ರ ಮಾರ್ಚ್ ವರೆಗೆ ಒಟ್ಟು 5 ಹುಲಿಗಳು ಸಾವನ್ನಪ್ಪಿವೆ. ಈ ಪೈಕಿ 3 ಹುಲಿಗಳು ಕಾದಾಟ ನಡೆಸಿ ಸಾವನ್ನಪ್ಪಿರುವುದು ಖಚಿತವಾಗಿದೆ. ಕರ್ನಾಟಕದ ಬಂಡೀಪುರ, ನಾಗಹೊಳೆಯಲ್ಲಿ ಹುಲಿಗಳ ಸಂತತಿ ಹೆಚ್ಚುತ್ತಿದು 1 ,516 ಚದರ ಕಿಮಿ ಪ್ರದೇಶದಲ್ಲಿ 177 ಪ್ರಾಣಿಗಳಿವೆ ಎಂದು ತಿಳಿದುಬಂದಿದೆ.
ಒಂದೆಡೆ ಹುಲಿಗಳು ಜಾಗದ ಕೊರತೆಯನ್ನು ಎದುರಿಸುತ್ತಿದ್ದಾರೆ ಮತ್ತೊಂದೆಡೆ ಬಂಡೀಪುರದ ಹೆಡಿಯಾಲ ಪ್ರದೇಶದಲ್ಲಿ ನರಭಕ್ಷಕ ಹುಲಿಯನ್ನು ಜನರೇ ಹೊಡೆದುರುಳಿಸಿದ್ದಾರೆ. ಹೆಚ್ಚುತ್ತಿರುವ ಹುಲಿಗಳ ಸಂತತಿ ಬಗ್ಗೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಟಿಸಿದೆ. ಎಕ್ಸ್ ಪ್ರೆಸ್ ನೊಂದಿಗೆ ಮಾತನಾಡಿರುವ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಎನ್ ಸಿ ಕಾಂತರಾಜು, ನಾಗರ ಹೊಳೆಯಲ್ಲಿ ಎರಡು ಹುಲಿಗಳು, ಬಂಡೀಪುರದಲ್ಲಿ ಒಂದು ಹುಲಿ ಪರಸ್ಪರ ಕಾದಾಟ ನಡೆಸಿ ಸಾವನ್ನಪ್ಪಿವೆ ಎಂದು ಮಾಹಿತಿ ನೀಡಿದ್ದಾರೆ.
ಬಂಡೀಪುರದಲ್ಲಿ  72 ಹುಲಿಗಳು ಹಾಗೂ ನಾಗರ ಹೊಳೆಯಲ್ಲಿ 105 ಹುಲಿಗಳಿವೆ, ಹುಲಿಗಳು ವಾರಕ್ಕೆ ಒಂದು ಪ್ರಾಣಿಯನ್ನು ಬೇಟೆಯಾಡುತ್ತವೆ, ವರ್ಷಕ್ಕೆ 52 ಪ್ರಾಣಿಗಳು ಆಹಾರವಾಗಬೇಕಾಗುತ್ತದೆ. ನಾಗರಹೊಳೆಯಲ್ಲಿ ಪ್ರತಿ 9 ಚದರ ಕಿಮಿ ಗೆ ಒಂದು ಹುಲಿ ಇದ್ದು, ಬಂಡೀಪುರದಲ್ಲಿ 8 ಚದರ ಕಿಮಿಗೆ ಒಂದು ಹುಲಿ ಕಾಣಲು ಸಿಗುತ್ತವೆ, ಈ ಪ್ರದೇಶಗಳಲ್ಲಿ ಹುಲಿಗಳಿಗೆ ಅಗತ್ಯ ಬೇಟೆ ಸಿಗುವುದರಿಂದ, ಯಾವುದೇ ಸಮಸ್ಯೆ ಇಲ್ಲ ಹಾಗೂ ಈಗಿರುವ ಜಾಗಕ್ಕಿಂತ ಹೆಚ್ಚು ಸ್ಥಳಾವಕಾಶ ಅಗತ್ಯ ಇಲ್ಲ ಎನ್ನುತ್ತಾರೆ ನಾಗರಹೊಳೆ ರಾಷ್ಟ್ರೀಯ ಉದ್ಯಾನದ ನಿರ್ದೇಶಕ ಎನ್ ಸಿ ಕಾಂತರಾಜು. ತಜ್ಞರ ಪ್ರಕಾರ ನಿರ್ದಿಷ್ಟ ಜೀವಿಗಳ ಆಕ್ರಮಣದಿಂದ ಹುಲಿಗಳು ಸಾವನ್ನಪ್ಪುತ್ತಿವೆ, ಹುಲಿಗಳ ನಡುವೆ ಸಂಗಾತಿಗಳಿಗಾಗಿ ಕಾದಾಟ, ಜಾಗಕ್ಕಾಗಿ ಕಾದಾಟ ನಡೆಯುವುದು ಸಾಮಾನ್ಯವಾದ ಸಂಗತಿಯಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com