ಮಂಗಳೂರಿನಿಂದ ರೈಲಿನಲ್ಲೇ ಮರಳು ಕಳ್ಳಸಾಗಣೆ!

ಇಷ್ಟು ದಿನ ಲಾರಿಗಳಲ್ಲಿ ಮರಳು ಕಳ್ಳಸಾಗಣೆ ಮಾಡುತ್ತಿದ್ದ ಕಳ್ಳರು ಇದೀಗ ತಮ್ಮ ಕಳ್ಳಸಾಗಣೆಗೆ ರೈಲುಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು, ಗೂಡ್ಸ್ ರೈಲಿನ ಸುಮಾರು 6 ಬೋಗಿಗಳಲ್ಲಿ...
ಮರಳು ಸಾಗಾಣಿಕೆ ಮಾಡುತ್ತಿದ್ದ ಗೂಡ್ಸ್ ರೈಲನ್ನು ತಡೆಹಿಡಿದಿರುವ ಬಂಟ್ವಾಳ ಪೊಲೀಸರು
ಮರಳು ಸಾಗಾಣಿಕೆ ಮಾಡುತ್ತಿದ್ದ ಗೂಡ್ಸ್ ರೈಲನ್ನು ತಡೆಹಿಡಿದಿರುವ ಬಂಟ್ವಾಳ ಪೊಲೀಸರು

ಮಂಗಳೂರು: ಇಷ್ಟು ದಿನ ಲಾರಿಗಳಲ್ಲಿ ಮರಳು ಕಳ್ಳಸಾಗಣೆ ಮಾಡುತ್ತಿದ್ದ ಕಳ್ಳರು ಇದೀಗ ತಮ್ಮ ಕಳ್ಳಸಾಗಣೆಗೆ ರೈಲುಗಳನ್ನು ಬಳಸಿಕೊಳ್ಳಲು ಮುಂದಾಗಿದ್ದು, ಗೂಡ್ಸ್ ರೈಲಿನ ಸುಮಾರು 6 ಬೋಗಿಗಳಲ್ಲಿ ಸಾಗಾಣಿಕೆ ಮಾಡುತ್ತಿದ್ದ ಅಕ್ರಮ ಮರಳನ್ನು ಬಂಟ್ವಾಳ ಪೊಲೀಸರು ಬುಧವಾರ ವಶಕ್ಕೆ ಪಡೆದುಕೊಂಡಿದ್ದಾರೆ.

ಗೂಡ್ಸ್ ರೈಲಿನಲ್ಲಿ ಮರಳು ಕಳ್ಳ ಸಾಗಾಣಿಕೆ ಮಾಡುತ್ತಿರುವುದಾಗಿ ಮಾಹಿತಿ ತಿಳಿದ ಬಂಟ್ವಾಳ ಪೊಲೀಸರು ಬುಧವಾರ ರೈಲನ್ನು ತಡೆದಿದ್ದಾರೆ. ಈ ವೇಳೆ ರೈಲನ್ನು ತಪಾಸಣೆಗೊಳಪಡಿಸಿದಾಗ 31 ಬೋಗಿಗಳ ಪೈಕಿ 6 ಬೋಗಿಗಳಲ್ಲಿ ಮರಳು ಸಾಗಿಸುತ್ತಿರುವುದಾಗಿ ತಿಳಿದುಬಂದಿದೆ.

ಇನ್ನು ಈ ಬಗ್ಗೆ ರೈಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದು, ಗುತ್ತಿಗೆದಾರರೊಬ್ಬರು ಬೋಗಿಗಳನ್ನು ಬುಕ್ ಮಾಡಿಕೊಂಡಿದ್ದರು. ಮರಳನ್ನು ಸಕಲೇಶಪುರಕ್ಕೆ ಕೊಂಡೊಯ್ಯುತ್ತಿರುವುದಾಗಿ ಹೇಳಿದ್ದರು. ಆದರೆ, ಬೆಂಗಳೂರಿಗೆ ತೆಗೆದುಕೊಂಡು ಹೋಗುತ್ತಿರುವುದು ನಮ್ಮ ಗಮನಕ್ಕೆ ಬಂದಿರಲಿಲ್ಲ ಎಂದು ಹೇಳಿದೆ.

ಜಿಲ್ಲೆಗಳಿಗೆ ಸಾಗಿಸಲಾಗುವ ಅಕ್ರಮ ಮರಳು ಸಾಗಾಣಿಕೆ ಮೇಲೆ ಸರ್ಕಾರ ನಿಷೇಧ ಹೇರಿದ ನಂತರ ಮರಳು ಸಾಗಣಿಕಾ ಕಳ್ಳರು ಇದೀಗ ರಾತ್ರಿ ವೇಳೆಯಲ್ಲಿ ಮರಳನ್ನು ಅಕ್ರಮವಾಗಿ ಸಾಗಾಣಿಕೆ ಮಾಡಲು ಆರಂಭಿಸಿದ್ದಾರೆ. ಇದಕ್ಕಾಗಿ ಕರಾವಳಿ ತೀರ ಪ್ರದೇಶಗಳನ್ನು ಬಳಸಿಕೊಂಡು ಬೆಂಗಳೂರು ಮತ್ತು ಮೈಸೂರಿಗೆ ಸಾಗಾಣಿಕೆ ಮಾಡಲಾಗುತ್ತಿದೆ.

ಮರಳು ಸಾಗಾಣಿಕೆ ಮಾಡುವುದಕ್ಕೆ ಸರ್ಕಾರದಿಂದ ಅನುಮತಿ ಪಡೆಯಬೇಕು. 70 ದಿನಗಳ ಕಾಲ ಅನುಮತಿ ನೀಡಲು ಸರ್ಕಾರ ಕಾಲಾವಾಶವನ್ನು ತೆಗೆದುಕೊಳ್ಳುತ್ತದೆ. ಹೀಗಾಗಿ ದಕ್ಷಿಣ ಕನ್ನಡದಿಂದ ಮೈಸೂರು ಮತ್ತು ಬೆಂಗಳೂರಿಗೆ ಅಕ್ರಮವಾಗಿ ಮರಳು ಸಾಗಾಣಿಕೆ ಮಾಡಲಾಗುತ್ತಿದೆ. ಇದರಲ್ಲಿ ಪ್ರಭಾವಶಾಲಿ ರಾಜಕಾರಣಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳ ಕೈವಾಡವಿರುತ್ತದೆ ಎಂದು ಮರುಳು ಸಾಗಾಣಿಕೆ ಮಾಡುವ ವ್ಯಕ್ತಿಯೊಬ್ಬರು ಮಾಹಿತಿ ನೀಡಿದ್ದಾರೆ.

ಪ್ರಸ್ತುತ ಬಂಟ್ವಾಳ ಪೊಲೀಸರು ವಶಕ್ಕೆ ಪಡೆದುಕೊಂಡಿರುವ ಮರಳು ಕುರಿತಂತೆ ಮಾಹಿತಿ ನೀಡಿರುವ ಗಣಿ ಮತ್ತು ಭೂವಿಜ್ಞಾನ ಇಲಾಖೆಯು, ಮೂರು ಘಟಕ ಮರಳುಗಳ ಬೆಲೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ರು.12 ಸಾವಿರವಾಗುತ್ತದೆ. ಇದೇ ಮರಳನ್ನು ಬೆಂಗಳೂರು ಅಥವಾ ಮೈಸೂರಿನಲ್ಲಿ ಮಾರಾಟ ಮಾಡಿದರೆ ರು.70,000 ದೊರೆಯುತ್ತದೆ ಎಂದು ಹೇಳಿದೆ.

ಕಾನೂನಾತ್ಮಕವಾಗಿ ಮರಳು ಸಾಗಾಣಿಕೆಗೆ ಅನುಮತಿ ಪಡೆಯಲು ಹರಸಾಹಸ ಪಡುತ್ತಿರುವ ಮರಳು ಗುತ್ತಿಗೆದಾರರಾಗಿವ ಪುರುಷೋತ್ತಮ್ ಅವರು ಮಾತನಾಡಿ, ಸ್ಥಳೀಯ ಸಣ್ಣ ಮರಳು ಸಾಗಾಣಿಕೆದಾರರಿಗೆ ಇಲ್ಲಿನ ಪ್ರಭಾವಶಾಲಿ ರಾಜಕಾರಣಿಗಳು ಸಂಪೂರ್ಣವಾಗಿ ಬಾಗಿಲು ಮುಚ್ಚಿದ್ದಾರೆ ಮತ್ತು ಅಕ್ರಮವಾಗಿ ಮರಳು ಸಾಗಾಣಿಕೆ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com