ಆಗ ತಮ್ಮ ಬಳಿ ಇದ್ದ ರು.25,000 ಹಣವನ್ನು ಪೊಲೀಸರಿಗೆ ನೀಡಿದ ವೆಂಕಟಪ್ಪ ಇನ್ನುಳಿದ ಹಣವನ್ನು ಇನ್ನೆರಡು ದಿನಗಳಲ್ಲಿ ನೀಡುವುದಾಗಿ ತಿಳಿಸಿ ಹೊರ ಬಂದಿದ್ದಾರೆ. ನಂತರ ಕೊಡಿಗೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಠಾಣೆಯಿಂದ ಪ್ರಕರಣ ಸಿಸಿಬಿಗೆ ವರ್ಗಾವಣೆಯಾಗಿದೆ. ಸಿಸಿಬಿ ಪೊಲೀಸರಿಗೆ ವೆಂಕಟಪ್ಪ ನಡೆದ ಘಟನೆ ಬಗ್ಗೆ ವಿವರಿಸಿದ್ದಾರೆ. ಸಿಸಿಬಿ ಪೊಲೀಸರು ವೆಂಕಟಪ್ಪನಿಂದ ಮೂವರು ಪೊಲೀಸರಿಗೆ ಕರೆ ಮಾಡಿಸಿ, ಇನ್ನುಳಿದ ಹಣ ನೀಡುವುದಾಗಿ ತಿಳಿಸಿ ಎಲ್ಲಿ ಬರೇಬೇಕು ಎಂದು ಕೇಳಿದ್ದಾರೆ. ಅವರು ತಿಳಿಸಿದ ಜಾಗಕ್ಕೆ ಪೇದೆಗಳು ತೆರಳಿದಾಗ ಸಿಸಿಬಿ ಪೊಲೀಸರು ಅವರನ್ನು ಬಂಧಿಸಿದ್ದಾರೆ.