ಕೃಷಿ ಹೊಂಡ ನಿರ್ಮಾಣ, ರೈತರಿಗೆ ವರದಾನ

ರಾಜ್ಯದ ಹಲವು ಜಿಲ್ಲೆಗಳು ಬರದಿಂದ ತತ್ತರಿಸಿವೆ, ನೀರಿಲ್ಲದೇ ಎಲ್ಲಿಯೂ ಒಂದು ಸ್ವಲ್ಪವೂ ಹಸಿರು ಕಾಣುತ್ತಿಲ್ಲ. ಆದರೆ ಹುಬ್ಬಳ್ಳಿ ಧಾರವಾಡದ ಕೆಲ ತಾಲೂಕುಗಳು ಹಸಿರಿನಿಂದ ,,
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಹುಬ್ಬಳ್ಳಿ:  ರಾಜ್ಯದ ಹಲವು ಜಿಲ್ಲೆಗಳು ಬರದಿಂದ ತತ್ತರಿಸಿವೆ, ನೀರಿಲ್ಲದೇ ಎಲ್ಲಿಯೂ ಒಂದು ಸ್ವಲ್ಪವೂ ಹಸಿರು ಕಾಣುತ್ತಿಲ್ಲ. ಆದರೆ ಹುಬ್ಬಳ್ಳಿ ಧಾರವಾಡದ ಕೆಲ ತಾಲೂಕುಗಳು ಹಸಿರಿನಿಂದ ಕಂಗೊಳಿಸುತ್ತಿವೆ. ಇದಕ್ಕೆ ಕಾರಣ ಕೃಷಿ ಹೊಂಡ.

ಹೌದು ಹುಬ್ಬಳ್ಳಿ ಧಾರವಾಡ ಅವಳಿ ಜಿಲ್ಲೆಗಳಲ್ಲಿ ರೈತರು ಕೃಷಿ ಹೊಂಡಗಳಿಂದ ಹಲವು ಸವಲತ್ತು ಪಡೆಯುತ್ತಿದ್ದಾರೆ. ನವಲಗುಂದದ ಸುಮಾರು 287 ರೈತರು ತಮ್ಮ ಜಮೀನಿನಲ್ಲಿ ಕೃಷಿ ಭಾಗ್ಯ ಯೋಜನೆಯಡಿ ಕೃಷಿ ಹೊಂಡಗಳನ್ನು ತೆರೆದು , ಮಳೆ ನೀರನ್ನು ಸಂಗ್ರಹಿಸಿದ್ದಾರೆ.

ಕಳೆದ ಬಾರಿ ಸುರಿದ ಹೆಚ್ಚಿನ ಮಳೆಯ ಲಾಭ ಪಡೆದ ರೈತರು ತಮ್ಮ ಜಮೀನಿನಲ್ಲಿ ಕೃಷಿ ಹೊಂಡಗಳನ್ನು ತೆಗೆದು ಅದರಲ್ಲಿ ನೀರನ್ನು ಸಂಗ್ರಹಿಸಿಟ್ಟಿದ್ದರು, ಹೀಗಾಗಿ ಅವರಿಗೆ ಬೇಸಿಗೆಯಲ್ಲೂ ವ್ಯವಸಾಯಕ್ಕೆ ನೀರಿನ ಸಮಸ್ಯೆ ಎದುರಾಗಿಲ್ಲ, ನವಲಗುಂದದಲ್ಲಿ ಸುಮಾರು 130 ಎಕರೆ ಭೂಮಿ ಹೊಂದಿರುವ ಬಸುರೆಡ್ಡಿ ರೂಗಿ ತನ್ನ ಜಮೀನಿನಲ್ಲಿ ದೊಡ್ಡ ಕೆರೆಯೊಂದನ್ನು ತೆಗೆದು ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸಿಟ್ಟಿದ್ದಾರೆ.

ಈತ ಸಾವಯ ವ್ಯವಸಾಯದ ಪದ್ಧತಿಯಲ್ಲಿ ಕಬ್ಬು ಬೆಳೆದ ಮೊದಲ ರೈತ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾನೆ. ಮಳೆಗಾಲದಲ್ಲಿ ಬೀಳುವ ಮಳೆ ನೀರನ್ನು ಸಂಗ್ರಿಹಿಸಿ ಹನಿ ನೀರಾವರಿ ಅಳವಡಿಸಿಕೊಂಡರೇ ಉತ್ತಮ ಅನುಕೂಲ. ಇನ್ನು ಈ ಜಿಲ್ಲೆಯ ಹಲವು ರೈತರು ಇದೇ ವಿಧಾನವನ್ನು ಅನುಸರಿಸುತ್ತಿರುವುದರಿಂದ, ಇವರೆಲ್ಲಾ ಜೋಳ, ಕಬ್ಬು, ಸೂರ್ಯಕಾಂತಿ, ಈರುಳ್ಳಿ ಬೆಳೆದು ಉತ್ತಮ ಲಾಭಗಳಿಸುತ್ತಿದ್ದಾರೆ.

 2015-16 ರಲ್ಲಿ ನಾಲ್ಕು ತಾಲೂಕಿನ ರೈತರು ಹಇಷ್ಟು ಸಂಖ್ಯೆಯ ಕೃಷಿ ಹೊಂಡಗಳನ್ನು ನಿರ್ಮಿಸಿದ್ದಾರೆ.


300- ಹುಬ್ಭಳ್ಳಿ
407-ಧಾರವಾಡ
538- ಕುಂದಗೋಳ
561- ನವಲಗುಂದ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com