
ಮೈಸೂರು: ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಾಮಾಜಿಕ ಹಾಗೂ ಆರ್ಥಿಕ ಸಮೀಕ್ಷಾ ವರದಿಯನ್ನು45 ದಿನಗಳಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತದೆ ಎಂದು ಕೆಎಸ್'ಬಿಸಿಸಿ ಅಧ್ಯಕ್ಷ ಹೆಚ್.ಕಾಂತರಾಜು ಅವರು ಹೇಳಿದ್ದಾರೆ.
ಈ ಕುರಿತಂತೆ ಮಾತನಾಡಿರುವ ಅವರು, ಇನ್ನೆರೆಡು ವಾರಗಳಲ್ಲಿ ಜಿಲ್ಲೆಗಳು ತಮ್ಮ ಜನಗಣತಿಯನ್ನು ಆಯೋಗಕ್ಕೆ ಸಲ್ಲಿಸುತ್ತದೆ. 2-3 ತಿಂಗಳ ಹಿಂದೆಯೇ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಲು ನಿರ್ಧರಿಸಲಾಗಿತ್ತು. ಆದರೆ, ಒಂದರ ಹಿಂದೆ ಒಂದಂತೆ ಬಂದ ಚುನಾವಣೆಗಳು ನಿಧಾನಗತಿಯಾಗುವಂತೆ ಮಾಡಿತ್ತು. 45 ದಿನಗಳಲ್ಲಿ ವರದಿಯನ್ನು ಸರ್ಕಾರದ ಬಳಿ ಸಲ್ಲಿಸಲಾಗುತ್ತದೆ ಎಂದು ಹೇಳಿದ್ದಾರೆ.
ಇದೇ ವೇಳೆ ಜಾತಿ ಜನಗಣತಿ ವರದಿಯನ್ನು ಸೋರಿಕೆಯಾಗಿರೆ ಎಂಬ ಆರೋಪದ ವಿರುದ್ಧ ಕಿಡಿಕಾರಿರುವ ಅವರು, ಆಯೋಗಕ್ಕೆ ವರದಿ ಸಲ್ಲಿಕೆಯಾಗದಿದ್ದ ಮೇಲೆ ವರದಿ ಸೋರಿಕೆಯಾಗುವ ಪ್ರಶ್ನೆ ಹೇಗೆ ಬಂತು ಎಂದು ಕೇಳಿದ್ದಾರೆ.
Advertisement