ಜೂನ್ ವರೆಗೂ ಕುಡಿಯುವ ನೀರಿನ ಸಮಸ್ಯೆಯಿಲ್ಲ: ಎಂ.ಬಿ. ಪಾಟೀಲ್

ಡೆಡ್ ಸ್ಟೋರೇಜ್ ನೀರನ್ನು ಉಪಯೋಗಿಸಲು ಸರ್ಕಾರ ತಯಾರಿದ್ದು, ಜೂನ್ ತಿಂಗಳ ವರೆಗೂ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್...
ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್
ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್
Updated on

ಬೆಂಗಳೂರು: ಡೆಡ್ ಸ್ಟೋರೇಜ್ ನೀರನ್ನು ಉಪಯೋಗಿಸಲು ಸರ್ಕಾರ ತಯಾರಿದ್ದು, ಜೂನ್ ತಿಂಗಳ ವರೆಗೂ ಕುಡಿಯುವ ನೀರಿಗೆ ಸಮಸ್ಯೆ ಇಲ್ಲ ಎಂದು ಜಲ ಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರು ಗುರುವಾರ ಹೇಳಿದ್ದಾರೆ.

ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು,  ಕುಡಿಯುವ ನೀರಿಗಾಗಿ ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ. ಪ್ರಸ್ತುತ ಡೆಡ್ ಸ್ಟೋರೇಜ್ ನೀರನ್ನು ಬಳಸಿಕೊಳ್ಳಲು ಸರ್ಕಾರ ಸಿದ್ಧವಿದ್ದು, ಬರುವ ಜೂನ್ ವರೆಗೂ ಕುಡಿಯು ನೀರಿಗೆ ಸಮಸ್ಯೆ ಆಗುವುದಿಲ್ಲ ಎಂದು ಹೇಳಿದ್ದಾರೆ.

ರಾಜ್ಯದ ವಿವಿಧ ಜಲಾಶಯಗಳಲ್ಲಿ ಜೂನ್ ವರೆಗೂ ಬಳಕೆಯ ಅವಶ್ಯವಿರುವ ನೀರಿನ ಸಂಗ್ರಹವಿದೆ. ಈ ವೇಳೆಗೆ  ಮಳೆ ಬಂದರೆ ಸಮಸ್ಯೆ ಬಗೆಹರಿಯುತ್ತದೆ. ಜೂನ್ ವೇಳೆಗೂ ಮಳೆ ಬಾರದಿದ್ದರೆ ಪರಿಸ್ಥಿತಿ ಕಷ್ಟವಾಗುತ್ತದೆ. ಹೀಗಾಗಿ ನೀರಿನ ಮಿತ ಬಳಕೆಗೆ ರಾಜ್ಯ ಸರ್ಕಾರ ಹೆಚ್ಚಿನ ಒತ್ತು ನೀಡುತ್ತಿದೆ ಎಂದು ಹೇಳಿದ್ದಾರೆ.

ಇನ್ನು ಮಹಾರಾಷ್ಟ್ರದಿಂದ ಕರ್ನಾಟಕಕ್ಕೆ 1 ಟಿಎಂಸಿ ನೀರು ಬಂದಿದೆ. ಅಲ್ಲದೆ, ಉಜ್ಜಿಯಿನಿ ಅಣೆಕಟ್ಟಿನಿಂದ ಮತ್ತೊಂದು ಟಿಎಂಸಿ ನೀರನ್ನು ನೀಡುವಂತೆ ಮನವಿಯನ್ನುಮಾಡಲಾಗಿದೆ ಎಂದಿದ್ದಾರೆ.

ಮೇಕೆದಾಟು ಯೋಜನೆಗೆ ಡಿಪಿಆರ್ ಸಿದ್ಧ
ಮೇಕೆದಾಟು ಕುಡಿಯುವ ನೀರಿನ ಯೋಜನಗೆ ಡಿಪಿಆರ್ ಸಿದ್ಧವಾಗಿದ್ದು, ಮೇ ತಿಂಗಳಿನಲ್ಲಿ ಸಿದ್ದಪಡಿಸಲಾಗಿರುವ ಡಿಪಿಆರ್ ನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸುತ್ತೇವೆ. ಇದಕ್ಕೆ ಕೇಂದ್ರ ಪರಿಸರ ಮತ್ತು ಜಲ ಆಯೋಗದಿಂದ ಅನುಮೋದನೆ ಸಿಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.

ರು.5 ಸಾವಿರ ಕೋಟಿ ಮೌಲ್ಯದ ಯೋಜನೆ ಇದಾಗಿದ್ದು, ಯೋಜನೆಗೆ 2 ಸಾವಿರ ಎಕರೆ ಭೂ ಭಾಗ ಬೇಕಾಗಿದೆ. ಇದರಲ್ಲಿ ಬಹಳಷ್ಟು ಅರಣ್ಯ ಇಲಾಖೆಯ ಭೂಮಿ ಒಳಗೊಂಡಿದೆ. ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿಯನ್ನು ಭಾಗಶಃ ಪಡೆದಿದ್ದು, ಯೋಜನೆಯ ಪ್ರಸ್ತಾವನೆಯ ಅಂಗೀಕಾರಕ್ಕೆ ಮನವಿ ಸಲ್ಲಿಸಲಾಗುವುದು. ಮೇಕೆದಾಟು ಯೋಜನೆಯಿಂದ ರಾಜ್ಯಕ್ಕೆ 60 ಟಿಎಂಸಿ ಕುಡಿಯುವ ನೀರು ಲಭ್ಯವಾಗಲಿದೆ ಎಂದು ಹೇಳಿದ್ದಾರೆ.

ಪ್ರಸ್ತುತ ಜಲಾಶಯಗಳಲ್ಲಿ ಲಭ್ಯವಿರುವ ನೀರಿನ ಪ್ರಮಾಣತೆ

  • ಕೆಆರ್ಎಸ್ 10.10 ಟಿಎಂಸಿ
  • ಕಬಿನಿ 4.49 ಟಿಎಂಸಿ
  • ತುಂಗಭದ್ರ 2.68 ಟಿಎಂಸಿ
  • ಆಲಮಟ್ಟಿ 17.67 ಟಿಎಂಸಿ
  • ನಾರಾಯಣ್ಪುರ್ 13.9 ಟಿಎಂಸಿ
  • ಹೇಮಾವತಿ 4.97 ಟಿಎಂಸಿ
  • ಹಾರಂಗಿ 1.24 ಟಿಎಂಸಿ

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com