
ಹಾಸನ: ಹಾಸನದ ಕೆಲವು ಪ್ರದೇಶಗಳಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹೀಗಾಗಿ ಜಿಲ್ಲಾಡಳಿತ ಖಾಸಗಿ ಬೋರ್ ವೆಲ್ ಮಾಲೀಕರುಗಳ ಮೊರೆ ಹೋಗಿದೆ.
ಪ್ರತಿದಿನ ನೀರು ಪೂರೈಸುವಂತೆ ಖಾಸಗಿ ಬೋರ್ ವೆಲ್ ಗಳ ಮಾಲೀಕರ ಮುಂದೆ ಜಿಲ್ಲಾಡಳಿತ ಬೇಡಿಕೆಯನ್ನಿಟ್ಟಿದೆ. ನೀರು ಪೂರೈಸಿದರೇ ನಿರಂತರ ಭಾಗ್ಯ ಜ್ಯೋತಿ ಅಡಿಯಲ್ಲಿ ಮೋಟಾರ್ ಗಳಿಗೆ ಉಚಿತ ವಿದ್ಯುತ್, ಹಾಗೂ ಪ್ರತಿ ತಿಂಗಳು 4-6 ಸಾವಿರ ರೂ ಪಾವತಿಸುವುದಾಗಿ ಜಿಲ್ಲಾಡಳಿತ ತಿಳಿಸಿದೆ ಎನ್ನಲಾಗಿದೆ.
ನಗರದಲ್ಲಿ ತಲೆದೋರಿರುವ ನೀರಿನ ಸಮಸ್ಯೆ ಹಿನ್ನೆಲೆಯಲ್ಲಿ ಇತ್ತೀಚೆಗೆ ನಡೆದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗಿದೆ,
ಪ್ರತಿ ತಾಲೂಕಿನಲ್ಲೂ ಖಾಸಗಿ ಬೋರ್ ವೆಲ್ ಗಳ ಮಾಲೀಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅವಶ್ಯಕತೆಯಿರುವ ಪ್ರದೇಶಗಳಿಗೆ ದಿನದಲ್ಲಿ ಒಂದು ಬಾರಿ ನೀರು ಪೂರೈಸುವಂತೆ ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
Advertisement