ಬೆಂಗಳೂರಿನ ರಸ್ತೆಗುಂಡಿಗಳ ದುರಸ್ತಿಗೆ ವಿಶೇಷ ತಂಡ!

ಬೆಂಗಳೂರು ಮಹಾನಗರ ಪಾಲಿಗೆ ಶೀಘ್ರದಲ್ಲೇ 'ತುರ್ತು ಪ್ರತಿಕ್ರಿಯಾ ತಂಡ'ವನ್ನು ರಚಿಸಲಿದೆ. ರಸ್ತೆಗಳ ದುರಸ್ತಿಗಾಗಿಯೇ ರಚಿಸಲಾಗುತ್ತಿರುವ ವಿಶೇಷ ತಂಡ ಇದು. ಅಂದರೆ ಬೆಂಗಳೂರು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬೆಂಗಳೂರು ಮಹಾನಗರ ಪಾಲಿಗೆ ಶೀಘ್ರದಲ್ಲೇ 'ತುರ್ತು ಪ್ರತಿಕ್ರಿಯಾ ತಂಡ'ವನ್ನು ರಚಿಸಲಿದೆ. ರಸ್ತೆಗಳ ದುರಸ್ತಿಗಾಗಿಯೇ ರಚಿಸಲಾಗುತ್ತಿರುವ ವಿಶೇಷ ತಂಡ ಇದು. ಅಂದರೆ ಬೆಂಗಳೂರು ನೀರು ಸರಬರಾಜು ಮಂಡಳಿ, ಬೆಂಗಳೂರು ಮೆಟ್ರೋ ರೇಲ್ ಕಾರ್ಪೊರೇಷನ್ (ಬಿ ಎಂ ಆರ್ ಸಿ) ಇತ್ಯಾದಿ ಸಂಸ್ಥೆಗಳು ರಸ್ತೆ ಆಗಿದಾಕ್ಷಣ ದುರಸ್ತಿಗೆ ಈ ತಂಡ ಸನ್ನದ್ಧವಾಗಿರುತ್ತದೆ.
"ಈ ಯೋಜನೆಗೆ ಮುಖ್ಯ ಕಾರ್ಯದರ್ಶಿ ಜಂಟಿ ಸಮಿತಿ ಅನುಮೋದಿಸಿದ್ದು, ಬಿ ಎಂ ಆರ್ ಸಿ ಎಲ್ ವ್ಯವಸ್ಥಾಪಕ ನಿರ್ದೇಶಕ ಮತ್ತು ನಗರ ರಸ್ತೆ ಸಾರಿಗೆ ಡೈರೆಕ್ಟೊರೇಟ್ ವಿ ಮಂಜುಳಾ ಅವರು ಕೂಡ ಒಪ್ಪಿಕೊಂಡಿದ್ದಾರೆ. ನಂತರ ನಾವು ಟೆಂಡರ್ ಕರೆಯಲಿದ್ದೇವೆ. ಇದು ವಾರ್ಷಿಕ ಒಪ್ಪಂದವಾಗಿರಲಿದೆ" ಎನ್ನುತ್ತಾರೆ ಬಿಬಿಎಂಪಿ ಸೂಪರಿಂಟೆಂಡೆಂಟ್ ಎಂಜಿನಿಯರ್ ಕೆ ಟಿ ನಾಗರಾಜ್. 
ಈ ಏಜೆನ್ಸಿಯನ್ನು ನವೆಂಬರ್ 1 ರಂದು ಘೋಷಿಸುವ ಸಾಧ್ಯತೆ ಇದೆ. ಇನ್ನುಮುಂದೆ ರಸ್ತೆ ಅಗೆಯುವ ಯಾವುದೇ ಸಂಸ್ಥೆಯಾಗಲಿ ಬಿಬಿಎಂಪಿ ಬಳಿ ಮುಂಗಡ ಭದ್ರತಾ ಹಣ ಇಡಬೇಕಾಗುತ್ತದೆ. ಈ ಹಣವನ್ನು ತುರ್ತು ಪ್ರತಿಕ್ರಿಯಾ ತಂಡದ ಕೆಲಸಗಳಿಗೆ ಉಪಯೋಗಿಸಿಕೊಳ್ಳಲಾಗುವುದು. ಹಾಗೆಯೇ ಒಂದು ಬಾರಿಗೆ 1 ಕಿಲೋ ಮೀಟರ್ ರಸ್ತೆಯನ್ನಷ್ಟೇ ಅಗೆಯಲು ಅವಕಾಶ ನೀಡಲಾಗುವುದು.
'ಪೈಥಾನ್' ಬರುವ ಸಾಧ್ಯತೆಯಿಲ್ಲ
ಕಳೆದ ವರ್ಷ ರಸ್ತೆಗುಂಡಿಗಳನ್ನು ಮುಚ್ಚಲು 'ಪೈಥಾನ್' ಯಂತ್ರಗಳನ್ನು ಬಳಸಲಾಗಿತ್ತು. ಒಬ್ಬ ಮನುಷ್ಯ ಚಲಾವಣೆ ಮಾಡಬಹುದಾದ ಈ ಯಂತ್ರ ಕೇವಲ 2 ನಿಮಿಷಗಳಲ್ಲಿ ಎರಡು ಅಡಿಯ ರಸ್ತೆ ಗುಂಡಿಯನ್ನು ದುರಸ್ತಿ ಮಾಡುವ ಸಾಮರ್ಥ್ಯ ಹೊಂದಿತ್ತು. ಆದರೆ ಬಿಬಿಎಂಪಿ ಈ ಒಪ್ಪಂದವನ್ನು ನವೀಕರಿಸುವ ಆಸಕ್ತಿ ತೋರಿಲ್ಲ. 
"ರಸ್ತೆಗುಂಡಿ ದುರಸ್ತಿ ಹಗರಣವಾಗಿದೆ. ಈ ತೊಂದರೆಯನ್ನು ನಿವಾರಿಸಲು ಬಿಬಿಎಂಪಿ ಬಳಿ ಸರಿಯಾದ ಯೋಜನೆಯಿಲ್ಲ. ಹಾಗೆಯೇ, ಟೆಂಡರ್ ಕರೆಯಲು ಹೆಚ್ಚೆಚ್ಚು ಗುಂಡಿಗಳಾಗುವವರೆಗೂ ಬಿಬಿಎಂಪಿ ಕಾಯುತ್ತದೆ. ಕಾರ್ಪೊರೇಟರ್ ಗಳು ಒಂದಾಗಿ ಪೈಥಾನ್ ಬಳಕೆ ತಡೆಯಲು ಮೇಯರ್ ಬಳಿ ಹೋಗಿದ್ದಾರೆ. ಅವರು ಈ ಯಂತ್ರದ ಬಳಕೆ ನಿಷೇಧಿಸಿ ತನಿಖೆಗೆ ಆದೇಶಿಸಿದ್ದಾರೆ" ಎನ್ನುತ್ತಾರೆ ನಗರ ಅಭಿವೃದ್ಧಿ ತಜ್ಞ ಆರ್ ಕೆ ಮಿಶ್ರಾ. 
ಪೈಥಾನ್ ಯಂತ್ರದ ಸಾಮರ್ಥ್ಯದ ಬಗ್ಗೆ ಮೆಚ್ಚುಗೆ ವ್ಯಕ್ತ ಪಡಿಸುವ ಕೆ ಟಿ ನಾಗರಾಜ್ "ಖಾಸಗಿ ಸಂಸ್ಥೆಯೊಂದಿಗಿನ ಒಪ್ಪಂದ ಮುಗಿದಿದ್ದರಿಂದ ಅದನ್ನು ನಿಲ್ಲಿಸಬೇಕಾಯಿತು. ಈಗ ಹೊಸ ಟೆಂಡರ್ ಕರೆಯಬೇಕಿದೆ" ಎನ್ನುತ್ತಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com