ಬೆಂಗಳೂರು: ಮರೆತು ಹೋಗಿದ್ದ ಪರ್ಸ್ ಅನ್ನು ಮಹಿಳೆಗೆ ವಾಪಸ್ ನೀಡಿ ಪ್ರಾಮಾಣಿಕತೆ ಮೆರೆದ ಆಟೋ ಚಾಲಕ

ನಗರದ ವಿಲ್ಸನ್ ಗಾರ್ಡನ್ ನ ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಪರ್ಸ್ ಅನ್ನು ವಾಪಸ್ ಅವರಿಗೆ ಸೇರಿಸುವ ಮೂಲಕ ಆಟೋ ಚಾಲಕರೊಬ್ಬರು ತಮ್ಮ
ಆಟೋ ಚಾಲಕ ಸನಾವುಲ್ಲಾ
ಆಟೋ ಚಾಲಕ ಸನಾವುಲ್ಲಾ

ಬೆಂಗಳೂರು: ಪ್ರಯಾಣಿಕರ ಜೊತೆ ಆಟೋ ಚಾಲಕರ ಅಸಭ್ಯ ವರ್ತನೆ, ಮೀಟರ್ ಗಿಂತ ಹೆಚ್ಚಿನ ಹಣ, ಕರೆದ ಸ್ಥಳಕ್ಕೆ ಬರೊಲ್ಲ ಎಂಬುದು ಆಟೋ ಚಾಲಕರ ವಿರುದ್ಧ ಇರುವ ಸಾಮಾನ್ಯ ದೂರುಗಳು. ಇದೆಲ್ಲದರ ನಡುವೆ ಕೆಲ ಆಟೋ ಚಾಲಕರು ಇನ್ನೂ ಪ್ರಾಮಾಣಿಕತೆ, ನ್ಯಾಯ, ನೀತಿ, ಆದರ್ಶಗಳನ್ನಿಟ್ಟುಕೊಂಡು ಬದುಕುತ್ತಿದ್ದಾರೆ.

ನಗರದ ವಿಲ್ಸನ್ ಗಾರ್ಡನ್ ನ ಪ್ರಯಾಣಿಕರೊಬ್ಬರು ಆಟೋದಲ್ಲಿ ಬಿಟ್ಟು ಹೋಗಿದ್ದ ಪರ್ಸ್ ಅನ್ನು ವಾಪಸ್ ಅವರಿಗೆ ಸೇರಿಸುವ ಮೂಲಕ ಆಟೋ ಚಾಲಕರೊಬ್ಬರು ತಮ್ಮ ಪ್ರಾಮಾಣಿಕತೆ ಮೆರೆದಿದ್ದಾರೆ.

ಐಟಿ ಕಂಪನಿ ಉದ್ಯೋಗಿಯೊಬ್ಬರು ಸೋಮವಾರ ಗುರುಪ್ಪನ ಪಾಳ್ಯಕ್ಕೆ ತಮ್ಮ ಮೂರು ವರ್ಷದ ಮಗುವಿನೊಂದಿಗೆ ಶಾಪಿಂಗ್ ಗೆ ಹೋಗಿ ವಾಪಸ್ ಆಟೋದಲ್ಲಿ  ವಿಲ್ಸನ್ ಗಾರ್ಡನ್ ನ ತಮ್ಮ ಮನೆಗೆ ಬಂದಿದ್ದರು.

ವಿಲ್ಸನ್ ಗಾರ್ಡನ್ ನಲ್ಲಿರುವ ಮನೆಗೆ ಬರಲು ಆಟೋ ಚಾಲಕರು ಡಬಲ್ ಮೀಟರ್ ನೀಡುವಂತೆ ಕೇಳುತ್ತಿದ್ದರು, ಅಂದು ಸನಾವುಲ್ಲಾ ಎಂಬುವರ ಆಟೋ ಹತ್ತಿದ ಮಹಿಳೆಗೆ ಆಶ್ಯರ್ಯ ಕಾದಿತ್ತು.  ಮೀಟರ್ ನಲ್ಲಿ ಬಂದಷ್ಟು ದುಡ್ಡನ್ನು ಮಾತ್ರ ತೆಗೆದುಕೊಳ್ಳುವುದಾಗಿ ಸನಾವುಲ್ಲಾ ಎಂಬ ಆಟೋ ಚಾಲಕ ಒಪ್ಪಿದ್ದರು.

ಅದಾದ ನಂತರ ಸ್ಥಳ ತಲುಪಿದ ಮಹಿಳೆ ಬ್ಯಾಗ್ ನೊಂದಿಗೆ ಮನೆಗೆ ತೆರಳಿದ್ದರು. ಮಹಿಳೆಯನ್ನು ಬಿಟ್ಟು ಬಂದ ಚಾಲಕ ಸನಾವುಲ್ಲಾ ಸೀಟಿನ ಮೇಲೆ ಪರ್ಸ್ ಇರುವುದನ್ನು ಗಮನಿಸಿ, ಅದು ತಾನು ಕೊನೆಯಲ್ಲಿ ಡ್ರಾಪ್ ಮಾಡಿದ ಮಹಿಳೆಯದ್ದೇ ಎಂದು ಖಚಿತ ಪಡಿಸಿಕೊಂಡರು. ನಂತರ ನೆರೆಹೊರೆಯವರ ಸಹಾಯದಿಂದ ಪರ್ಸ್ ನಲ್ಲಿದ್ದ ಮಹಿಳೆಯ ಫೋನ್ ನಂಬರ್ ಪಡೆದುಕೊಂಡು ಆಕೆಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.

ಮರುದಿನ ಬೆಳಗ್ಗೆ ಆಟೋ ಚಾಲಕ ಸನಾವುಲ್ಲಾ ಪರ್ಸ್ ಅನ್ನು ಮಹಿಳೆಗೆ ವಾಪಸ್ ನೀಡಿದ್ದಾರೆ. ಕಳೆದ 3 ವರ್ಷಗಳಿಂದ ಸನಾವುಲ್ಲಾ ಆಟೋ ಓಡಿಸುತ್ತಿದ್ದಾರೆ. ಇದಕ್ಕೂ ಮೊದಲು ಸನಾವುಲ್ಲಾ ಮನೆಗಳಿಗೆ ಪೈಂಟಿಂಗ್ ಮಾಡುವ ಕೆಲಸ ಮಾಡುತ್ತಿದ್ದರು. ನಮ್ಮ ವಾಹನಗಳಲ್ಲಿ ಪ್ರಯಾಣಿಕರು ಯಾವುದೇ ವಸ್ತುವನ್ನು ಬಿಟ್ಟು ಹೋದರು ಅದನ್ನು ವಾಪಸ್ ಅವರಿಗೆ ತಲುಪಿಸುವುದು ನಮ್ಮ ಜವಾಬ್ದಾರಿ ಎಂದು ಹೇಳಿದ್ದಾರೆ.

ಪರ್ಸ್ ನಲ್ಲಿ ಹಣ ಸ್ವಲ್ಪವೇ ಇದ್ದುದ್ದು, ಆದರೆ ಅದರಲ್ಲಿ, ಎಟಿಎಂ ಕಾರ್ಡ್, ಪ್ಯಾನ್ ಕಾರ್ಡ್ ಹಾಗೂ ಡೆಬಿಟ್ ಕಾರ್ಡ್ ಗಳಿದ್ದವು. ಆಟೋ ಚಾಲಕ ಸನಾವುಲ್ಲಾ ಅವರಿಗೆ ಹೇಗೆ ಧನ್ಯವಾದ ತಿಳಿಸಬೇಕು ಎಂಬುದು ಗೊತ್ತಾಗುತ್ತಿಲ್ಲ ಎಂದು ಮಹಿಳೆ ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ತಿಳಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com