ಪತ್ನಿ ಕೊಂದು ಜೈಲು ಸೇರಿದ್ದ, ಎಂಎ ಪದವಿಯೊಂದಿಗೆ ಬಿಡುಗಡೆಯಾದ!

ಒಬ್ಬ ವ್ಯಕ್ತಿ ಜೈಲಿಗೆ ಹೋದರೆ ಸಾಕು...ಆತನ ಜೀವನವಷ್ಟೇ...ಇನ್ನು ಅವನಿಗೆ ಜೈಲೇಗತಿ...ಆತನಿಗೆ ಭವಿಷ್ಯವಿಲ್ಲ ಎಂದು ಎಷ್ಟೋ ಮಂದಿ ತಿಳಿಯುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಪತ್ನಿಯನ್ನು ಕೊಂದು...
ಜೈಲಿನಿಂದ ಬಿಡುಗಡೆಗೊಂಡ ಸಂಸತದಲ್ಲಿ ಹೊರಬರುತ್ತಿರುವ ಕೈದಿಗಳು
ಜೈಲಿನಿಂದ ಬಿಡುಗಡೆಗೊಂಡ ಸಂಸತದಲ್ಲಿ ಹೊರಬರುತ್ತಿರುವ ಕೈದಿಗಳು
Updated on: 

ಬಳ್ಳಾರಿ: ಒಬ್ಬ ವ್ಯಕ್ತಿ ಜೈಲಿಗೆ ಹೋದರೆ ಸಾಕು...ಆತನ ಜೀವನವಷ್ಟೇ...ಇನ್ನು ಅವನಿಗೆ ಜೈಲೇಗತಿ...ಆತನಿಗೆ ಭವಿಷ್ಯವಿಲ್ಲ ಎಂದು ಎಷ್ಟೋ ಮಂದಿ ತಿಳಿಯುತ್ತಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಪತ್ನಿಯನ್ನು ಕೊಂದು ಜೈಲಿಗೆ ಹೋಗಿದ್ದರೂ, ತನ್ನ ಕನಸನ್ನು ನನಸು ಮಾಡಿಕೊಂಡು ಎಂಎ ಪದವಿ ಪಡೆದುಕೊಳ್ಳುವ ಮೂಲಕ ಜೈಲಿನಿಂದ ಬಿಡುಗೊಂಡು ಹೊಸ ಜೀವನದತ್ತ ಹೆಜ್ಜೆ ಹಾಕಿದ್ದಾನೆ.

ಬಿ.ವಿ. ವೆಂಕಟೇಶ್ ಜೈಲಿನಿಂದಲೇ ಎಂ.ಎ. ಪದವಿ ಪಡೆದು ಸನ್ನಡತೆಯ ಆಧಾರದ ಮೇಲೆ 14 ವರ್ಷದ ಬಳಿಕ ನಿನ್ನೆಯಷ್ಟೇ ಜೈಲಿನಿಂದ ಬಿಡುಗಡೆಗೊಂಡಿದ್ದಾರೆ.

ಜೈಲಿಗೆ ಹೋಗಲು ಕಾರಣ ಹಾಗೂ ತಮ್ಮ ಜೀವನದಲ್ಲಿ ನಡೆದ ಘಟನೆಗಳನ್ನು ವೆಂಕಟೇಶ್ ಅವರು ಎಳೆಎಳೆಯಾಗಿ ಬಿಚ್ಚಿಟ್ಟಿದ್ದು ಹೀಗೆ.

ಮೂಲತಃ ತುಮಕೂರು ಜಿಲ್ಲೆಯ ಬೀರನಕಲ್ಲಿನ ನಿವಾಸಿಯಾಗಿರುವ ವೆಂಕಟೇಶ್ ಅವರಿಗೆ ಇದೀಗ 49 ವರ್ಷ. 2003ರಲ್ಲಿ ವರದಕ್ಷಿಣೆ ಕಿರುಕುಳ ಮತ್ತು ಕೊಲೆ ಪ್ರಕರಣದಲ್ಲಿ ಜೈಲಿಗೆ ಸೇರಿದ್ದರು.

ತುಮಕೂರಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ ಸಿ ಪದವಿ ಪೂರ್ಣಗೊಳಿಸಿದ್ದೆ, ಮುಂದಿನ ವಿದ್ಯಾಭ್ಯಾಸ ಮಾಡಲು ಇಚ್ಛಿಸಿದ್ದೆ. ಆದರೆ, ವಿದ್ಯಾಭ್ಯಾಸಕ್ಕೆ ಬಡತನ ಅಡ್ಡಿಯಾಗಿತ್ತು. ಹೀಗಾಗಿ ಬೆಂಗಳೂರಿನಲ್ಲಿಯೇ ಬ್ಯಾಗ್ ಅಂಗಡಿ ಇಟ್ಟುಕೊಂಡು ಜೀವನ ನಡೆಸುತ್ತಿದ್ದೆ. ನಂತರ ಕೆಲ ಅಂಗಡಿಗಳಲ್ಲಿ ಕಾರ್ಯನಿರ್ವಹಿಸಲು ಆರಂಭಿಸಿದ್ದೆ. ಕೆಲ ಅಂಗಡಿಯ ಮಾಲೀಕರು ನನಗೆ ಸ್ವಂತ ಅಂಗಡಿ ಇಟ್ಟುಕೊಳ್ಳಲು ಸಹಾಯ ಮಾಡಿದ್ದರು.

ಇದರಿಂದ ನಾನು ನನ್ನದೇ ಆದ 4 ಅಂಗಡಿಗಳನ್ನು ತೆರೆದಿದ್ದೆ, ವ್ಯಾಪಾರ, ವ್ಯವಹಾರದಲ್ಲಿ ಯಶಸ್ಸನ್ನು ಕಂಡಿದ್ದೆ. ಮಹಿಳೆಯರು, ಮಕ್ಕಳು, ಶಾಲಾ ಮಕ್ಕಳಿಗೆ ಬ್ಯಾಗ್ ಗಳನ್ನು ತಯಾರಿಸಲು ಆರಂಭಿಸಿದ್ದೆ. ಕೆಲ ವರ್ಷಗಳ ನಂತರ ಹೋಲ್ ಸೇಲ್ ವ್ಯಾಪಾರ ಮಾಡಲು ಆರಂಭಿಸಿದ್ದೆ. ಜೀವನ ತುಂಬಾ ಚೆನ್ನಾಗಿತ್ತು. ನನ್ನ ಅಡಿಯಲ್ಲಿ 200ಕ್ಕೂ ಹೆಚ್ಚು ಕೆಲಸಗಾರರು ಕೆಲಸ ಮಾಡುತ್ತಿದ್ದರು. ದಿನದ ಸಂಪಾದನೆ ರು.2 ಲಕ್ಷ ಆಗಿತ್ತು. ಬಸ್ ನಲ್ಲಿ ಹೋಗುತ್ತಿದ್ದರೆ, ಒಂದಾದರೂ ನಮ್ಮ ಕಾರ್ಖಾನೆಯಲ್ಲಿ ತಯಾರಿಸಿದ್ದ ಬ್ಯಾಗ್ ಕಾಣುತ್ತಿತ್ತು. ಆದರೆ, ಒಂದು ಕರಾಳದಿನ ನನ್ನ ಜೀವನದಲ್ಲಿ ಎಲ್ಲವೂ ಬದಲಾಗುವಂತೆ ಮಾಡಿಬಿಟ್ಟಿತ್ತು.

ನನ್ನ ತಂಗಿ ಹಾಗೂ ನನ್ನ ಪತ್ನಿ ಪ್ರತೀ ನಿತ್ಯ ಜಗಳವಾಡುತ್ತಿದ್ದರು. ಜಗಳದಿಂದ ಬೇಸತ್ತು ನನ್ನ ಪತ್ನಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿದ್ದಳು. ಆದರೆ, ನನಗೆ ಜೀವಾವಧಿ ಶಿಕ್ಷೆಯಾಗಿತ್ತು.

2006ರಲ್ಲಿ ಪತ್ನಿಯ ತಂಗಿಯನ್ನೇ ವಿವಾಹವಾಗಿದ್ದ ವೆಂಕಟೇಶ್ ಅವರಿಗೆ ಇದೀಗ ಎರಡು ವರ್ಷದ ಹೆಣ್ಣು ಮಗುವಿದೆ. ಮೊದಲ ಪತ್ನಿಯ ಮಗ ಇದೀಗ ಕಾಲೇಜ್ ಗೆ ಹೋಗುತ್ತಿದ್ದಾನೆ. ಸೆರೆವಾಸದಲ್ಲಿದ್ದಾಗ ವೆಂಕಟೇಶ್ ಅವರು ಪತ್ರಿಕೋದ್ಯಮ ಹಾಗೂ ಸಮಾಜ ಸೇವೆ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದಾರೆ. ಇದರ ನಡುವೆಯೇ ಜೇನುಸಾಕಣೆ ಮತ್ತು ಕೋಳಿಸಾಕಾಣಿಕೆ ಕೃಷಿ ವಿಷಯದಲ್ಲೂ ಡಿಪ್ಲೋಮಾ ಮಾಡಲು ಆರಂಭಿಸಿದ್ದಾರೆ. ಇವರ ವಿದ್ಯಾಭ್ಯಾಸಕ್ಕೆ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯ ಸಹಾಯ ಮಾಡಿದೆ.

ಇದೀಗ ಎಂ.ಎ ಪದವಿ ಪಡೆದಿರುವ ವೆಂಕಟೇಶ್ ಅವರು ಮತ್ತೆ ಹೊಸ ಜೀವನದತ್ತ ಹೆಜ್ಜೆ ಹಾಕಲು ಇಚ್ಛಿಸುತ್ತಿದ್ದಾರೆ, ಬ್ಯಾಂಕ್ ಗಳು ಸಹಾಯ ಮಾಡಿದರೆ, ಮೊದಲಿನಂತೆಯೇ ಬ್ಯಾಗ್ ವ್ಯವಹಾರ ನಡೆಸಲು ಆಸೆಪಡುತ್ತಿದ್ದಾರೆ. ಒಂದು ವೇಳೆ ನಾನು ನನ್ನ ವ್ಯವಹಾರವನ್ನು ಮುಂದುವರೆಸಲು ಸಾಧ್ಯವಾಗದಿದ್ದರೆ, ಪತ್ರಕರ್ತನಾಗಲು ಇಚ್ಛಿಸುತ್ತೇನೆಂದು ವೆಂಕಟೇಶ್ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com