ಅಪಘಾತ
ರಾಜ್ಯ
ಕೂಡ್ಲಿಗಿಯಲ್ಲಿ ಕಾರು ಲಾರಿ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 4 ಸಾವು
ಕೂಡ್ಲಿಗಿಯ ಶಿವಪುರದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ತಡರಾತ್ರಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ...
ಬಳ್ಳಾರಿ: ಕೂಡ್ಲಿಗಿಯ ಶಿವಪುರದ ರಾಷ್ಟ್ರೀಯ ಹೆದ್ದಾರಿ 13ರಲ್ಲಿ ತಡರಾತ್ರಿ ಕಾರು ಮತ್ತು ಲಾರಿ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ನಾಲ್ವರು ಮೃತಪಟ್ಟಿದ್ದಾರೆ.
ಮೃತರು ಒಂದೇ ಕುಟುಂಬದವರಾಗಿದ್ದು ವಿಜಯಪುರದ ಸಿಂಧಿಗಿ ಮೂಲದ ಬಸವರಾಜ್, ಕಿರಣ್, ಮಂಜುನಾಥ್ ಮತ್ತು ಸಂಗಮೇಶ್ ಎಂದು ಗುರುತಿಸಲಾಗಿದೆ.
ಅಪಘಾತ ಸ್ಥಳಕ್ಕೆ ಕೂಡ್ಲಿಗಿ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


