ಒತ್ತುವರಿ ತೆರವಿನಲ್ಲಿ ರಾಜಕಾರಣಿಗಳು, ಬಿಲ್ಡರ್ಸ್ ಗಳು ಭಾಗಿ: ಎನ್.ಆರ್. ರಮೇಶ್

ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು ರು.1.20 ಲಕ್ಷ ಕೋಟಿಯಷ್ಟು ಕೆರೆ, ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿದ್ದು, ಒತ್ತುವರಿ ತೆರವಿನಲ್ಲಿ ರಾಜಕಾರಣಿಗಳು, ಬಿಲ್ಡರ್ಸ್ ಗಳು ಹಾಗೂ ಇನ್ನಿತರೆ ಸ್ಥಳೀಯ ಅಧಿಕಾರಿಗಳು ಭಾಗಿಯಾಗಿದ್ದಾರೆಂದು...
ಒತ್ತುವರಿ ಭೂಮಿಯನ್ನು ತೆರೆವುಗೊಳಿಸಿರುವ ಅಧಿಕಾರಿಗಳು
ಒತ್ತುವರಿ ಭೂಮಿಯನ್ನು ತೆರೆವುಗೊಳಿಸಿರುವ ಅಧಿಕಾರಿಗಳು

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಒಟ್ಟು ರು.1.20 ಲಕ್ಷ ಕೋಟಿಯಷ್ಟು ಕೆರೆ, ರಾಜಕಾಲುವೆಗಳನ್ನು ಒತ್ತುವರಿ ಮಾಡಲಾಗಿದ್ದು, ಒತ್ತುವರಿ ತೆರವಿನಲ್ಲಿ ರಾಜಕಾರಣಿಗಳು, ಬಿಲ್ಡರ್ಸ್ ಗಳು ಹಾಗೂ ಇನ್ನಿತರೆ ಸ್ಥಳೀಯ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ಬಿಜೆಪಿ ಮಾಜಿ ಕಾರ್ಪೊರೇಟರ್ ಎನ್.ಆರ್. ರಮೇಶ್ ಅವರು ಆರೋಪಿಸಿದ್ದಾರೆ.

ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿ ದಾಖಲೆಗಳನ್ನು ಬಿಡುಗಡೆ ಮಾಡಿ ನಂತರ ಮಾತನಾಡಿರುವ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಬರುವ 1500 ಎಕರೆ ಭೂಮಿಯನ್ನು ಕಬಳಿಕೆ ಮಾಡಲಾಗಿದೆ. ಇದರಲ್ಲಿ 368 ಬಿಲ್ಡರ್ಸ್ ಗಳು, 13 ರಾಜಕಾರಣಿಗಳು ಹಾಗೂ 71 ಸ್ಥಳೀಯ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ಹೇಳಿದ್ದಾರೆ.

ಭೂಕಬಳಿಕೆ ಕುರಿತಂತೆ ಆರ್ ಟಿಐ ಬಳಿ ದಾಖಲೆಗಳನ್ನು ಕೇಳಲಾಗಿತ್ತು. 6 ತಿಂಗಳ ಹಿಂದೆಯೇ ಈ ಬಗ್ಗೆ ದಾಖಲೆಗಳನ್ನು ಸಂಗ್ರಹಿಸಿದ್ದೇನೆ. ಸೂಕ್ಷ್ಮ ಪರಿಸರ ಪ್ರದೇಶಗಳಲ್ಲಿ ಕಾಂಪ್ಲೆಕ್ಸ್ ಗಳು, ಶಾಪಿಂಗ್ ಮಾಲ್ ಗಳು, ಟೆಕ್ ಪಾರ್ಕ್ ಗಳು ಹಾಗೂ ಆಸ್ಪತ್ರೆಗಳನ್ನು ನಿರ್ಮಾಣ ಮಾಡಿರುವ ಬಗ್ಗೆ ನನ್ನ ಬಳಿ ದಾಖಲೆಗಳಿವೆ. ಕೆಲ ಕಟ್ಟಡಗಳು ಬೆನಾಮಿ ರಾಜಕಾರಣಿಗಳ ಹಸರಿನಲ್ಲಿದೆ. ಆದರೆ, ಇಂತಹ ರಾಜಕಾರಣಿಗಳು ಹಾಗೂ ಬಿಲ್ಡರ್ಸ್ ಗಳ ವಿರುದ್ಧ ಮಾತ್ರ ಸರ್ಕಾರ ಯಾವುದೇ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿಲ್ಲ. ಕಟ್ಟಡ ನಿರ್ಮಾಣ ಮಾಡಲು ಇಂತಹ ವ್ಯಕ್ತಿಗಳಿಗೆ ಅನುಮತಿ ನೀಡಿರುವ ಬಿಬಿಎಂಪಿ ಹಾಗೂ ಬಿಡಿಎದಲ್ಲಿರುವ 71 ಭ್ರಷ್ಟ ಅಧಿಕಾರಿಗಳ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕಿದೆ ಎಂದು ಹೇಳಿದ್ದಾರೆ.

ಸರ್ಕಾರ ಕೇವಲ ಬಡವರು ಹಾಗೂ ಮಧ್ಯಮವರ್ಗದ ಜನರನ್ನು ಟಾರ್ಗೆಟ್ ಮಾಡಿಕೊಂಡು ಒತ್ತುವರಿ ಮಾಡುತ್ತಿದೆ. ಆದರೆ, ರಾಜಕಾರಣಿಗಳ ಪ್ರಭಾವವನ್ನು ಹೊಂದಿರುವ ವ್ಯಕ್ತಿಗಳ ಭೂಮಿಯನ್ನು ಮಾತ್ರ ಒತ್ತುವರಿ ಮಾಡುತ್ತಿಲ್ಲ ಎಂದಿದ್ದಾರೆ.

ಇದೇ ವೇಳೆ ಬಿಜೆಪಿಯವರು ನಿಯಮ ಉಲ್ಲಂಘಿಸಿದ್ದು ಕಂಡುಬಂದರೆ ಎಂಬ ಪ್ರಶ್ನೆಗೆ ಉತ್ತರಿಸಿರುವ ಅವರು, ಒಂದು ವೇಳೆ ಬಿಜೆಪಿಯಲ್ಲಿನ ಯಾವುದೇ ವ್ಯಕ್ತಿ ಇದರಲ್ಲಿ ಭಾಗಿಯಾದರೆ, ಅದನ್ನು ಬಹಿರಂಗಪಡಿಸಲಾಗುತ್ತದೆ ಎಂದರು. ಅಲ್ಲದೆ, ಜೆ.ಪಿ. ನಗರದಲ್ಲಿ ನಿರ್ಮಾಣವಾಗಿರುವ ಡಾಲರ್ಸ್ ಕಾಲೋನಿ ಅಕ್ರಮವಾಗಿದ್ದು, ಸರ್ಕಾರ ಮೊದಲು ಅದನ್ನು ಒತ್ತುವರಿ ಮಾಡಲಿ. ಇಲ್ಲಿನ ಲೇಔಟ್ ನ್ನು 56-91 ಎಖರೆ ಲಿಂಗಣ್ಣ ಕೆರೆ ಭೂಮಿಯಿಂದ ನಿರ್ಮಾಣ ಮಾಡಲಾಗಿದೆ. ಲೇಔಟ್ ನಿರ್ಮಾಣದಲ್ಲಿ ಕೆಲಸ ಸಚಿವರು, ಹಾಗೂ ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿದ್ದಾರೆಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com