
ಬೆಂಗಳೂರು: ನಗರಕ್ಕೆ ಹೊಸದಾದ 637 ಹೊಸ ಕೆಎಸ್ಆರ್ ಟಿಸಿ ಬಸ್ ಗಳು ಪಾದಾರ್ಪಣೆ ಮಾಡಲಿದ್ದು, ಹೊಸ ಬಸ್ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಚಾಲನೆ ನೀಡಲಿದ್ದಾರೆ.
ರಾಜ್ಯದ ಮಧ್ಯಮ ಹಾಗೂ ಸಣ್ಣ ಪ್ರದೇಶಗಳಿಗೆ ಉನ್ನತ ಮಟ್ಟದಲ್ಲಿ ಸಂಪರ್ಕ ಒದಗಿಸುವ ಉದ್ದೇಶದಿಂದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (ಕೆಎಸ್ಆರ್ ಟಿಸಿ)ಯು ಹೊಸದಾಗಿ 637 ಹೊಸ ಬಸ್ ಗಳನ್ನು ಬಿಟ್ಟಿದ್ದು, ಹೊಸ ಬಸ್ ಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಬೆಳಿಗ್ಗೆ ವಿಧಾನಸೌಧದ ಬಳಿ ಚಾಲನೆ ನೀಡಲಿದ್ದಾರೆ.
ಚಾಲನೆಗೊಳ್ಳಲಿರುವ ಹೊಸಬಸ್ ಗಳು ಮಂಗಳೂರು, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಚಿತ್ರದುರ್ಗ, ರಾಮನಗರ, ತುಮಕೂರು, ಕೋಲಾರ ಸೇರಿದಂತೆ ಇನ್ನಿತರೆ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸಲಿದೆ. ಹೊಸ್ ಬಸ್ ಗಳಲ್ಲಿ ಸಿಸಿಟಿವಿ, ಪ್ಯಾನಿಕ್ ಬಟನ್, ಎಲ್ ಇಡಿ ಡಿಸ್ಪ್ಲೇ ಜೊತೆಗೆ ವಾಯ್ಸ್ ಅನೌನ್ಸ್ ಮೆಂಟ್ ಸಿಸ್ಟಮ್ ಸೇರಿದಂತೆ ಅಗತ್ಯ ತಂತ್ರಜ್ಞಾನ ವ್ಯವಸ್ಥೆಗಳನ್ನು ಅಳವಡಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಹೊಸ ಕೆಎಸ್ಆರ್ ಟಿಸಿ ಬಸ್ ಬಸ್ ಗಳ ಚಾಲನಾ ಸಮಾರಂಭದಲ್ಲಿ, ಕೇಂದ್ರ ಸಚಿವ ವೆಂಕಯ್ಯನಾಯ್ಡು, ಡಿ.ವಿ. ಸದಾನಂದಗೌಡ ಮತ್ತು ರಾಜ್ಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಹಾಜರಾಗಲಿದ್ದಾರೆ.
Advertisement