ಟ್ರಾಫಿಕ್ ಪೊಲೀಸರ ಆತಂಕಕ್ಕೆ ಕಾಲೇಜು ಹುಡುಗಿಯರು ಕಾರಣ

ಮೌಂಟ್ ಕಾರ್ಮೆಲ್ ಕಾಲೇಜು ಹುಡುಗಿಯರದ್ದೇ ಪ್ರತಿ ದಿನ ತಲೆನೋವಾಗಿದೆ. ಇದು ಶಿವಾಜಿನಗರದಲ್ಲಿರುವ ಟ್ರಾಫಿಕ್ ಪೊಲೀಸ್ ಶಂಕರ್ ನಾಯಕ್ ..
ಶಂಕರ್ ನಾಯಕ್
ಶಂಕರ್ ನಾಯಕ್
Updated on

ಬೆಂಗಳೂರು:  ಮೌಂಟ್ ಕಾರ್ಮೆಲ್ ಕಾಲೇಜು ಹುಡುಗಿಯರದ್ದೇ ಪ್ರತಿ ದಿನ ತಲೆನೋವಾಗಿದೆ. ಇದು ಶಿವಾಜಿನಗರದಲ್ಲಿರುವ ಟ್ರಾಫಿಕ್ ಪೊಲೀಸ್ ಶಂಕರ್ ನಾಯಕ್ ಅವರ ಬೇಸರದ ನುಡಿ.

ಮೌಂಟ್ ಕಾಲೇಜು ವಿದ್ಯಾರ್ಥಿನಿಯರು ಪ್ರತಿದಿನ ಸಂಚಾರಿ ನಿಯಮ ಉಲ್ಲಂಘಿಸುತ್ತಿರುತ್ತಾರೆ. ಹೆಲ್ಮೆಟ್ ಇಲ್ಲದೇ ಡ್ರೈವ್ ಮಾಡುವುದು, ಒಂದೇ ಸ್ಕೂಟರ್ ನಲ್ಲಿ ಮೂರು ಜನ ಹೋಗುವುದು, ತಮ್ಮ ರಕ್ಷಣೆ ಬಗ್ಗೆ ಗಮನ ಕೊಡದೇ ರಿಸ್ಕ್ ತೆಗೆದುಕೊಳ್ಳುತ್ತಾರೆ ಎಂಬುದು ಶಂಕರ್ ನಾಯಕ್ ಆಅವರ ಆಕ್ಷೇಪ.

ದಿ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಜೊತೆ ಮಾತನಾಡಿ ತಮ್ಮ ದೈನಂದಿನ ಟ್ರಾಫಿಕ್ ಪೊಲೀಸ್ ಜೀವನದ ಬಗ್ಗೆ ಹಲವು ಸಂಗತಿಗಳನ್ನು ತಿಳಿಸಿದ್ದಾರೆ.

ಸಂಚಾರಿ ನಿಯಮಗಳನ್ನು ಕಾಲೇಜು ವಿದ್ಯಾರ್ಥಿಗಳೇ ಹೆಚ್ಚು ಮುರಿಯುತ್ತಾರೆ. ಅದರಲ್ಲೂ ಹುಡುಗರದ್ದೇ ಹೆಚ್ಚು ಕಾರು ಬಾರು. ತಮ್ಮ ನೌಕರಿಯನ್ನು ಅತೀವವಾಗಿ ಪ್ರೀತಿಸುವ ಶಂಕರ್ ನಾಯಕ್ 2008 ರಲ್ಲಿ ಹೆಲ್ಮೆಟ್ ಇಲ್ಲದೇ ವಾಹನ ಚಲಿಸುತ್ತಿದ್ದ  ವ್ಯಕ್ತಿಯನ್ನು ಹಿಡಿದು ಮೊದಲ ಕೇಸ್ ಹಾಕಿದ್ದರು.

ಎಂ ಎ ಪದವೀಧರರಾಗಿರುವ ಶಂಕರ್ ನಾಯಕ್. ಶಿಕ್ಷಕರಾಗಬೇಕೆಂದು ಕವಸಪ ಕಂಡಿದ್ದರು. ಮೂಲತ: ತುಮಕೂರಿನವರಾದ ಶಂಕರ್ ನಾಯಕ್ 2005 ರಲ್ಲಿ ತುಮಕೂರಿನಂದ ಬೆಂಗಳೂರಿಗೆ ಬಂದು ಯಲಹಂಕದಲ್ಲಿ ವಾಸವಿದ್ದಾರೆ.

ಪ್ರತಿದಿನ ಬೆಳಗ್ಗೆ 7 ಗಂಟೆಗೆ ತಮ್ಮ ಕೆಲಸ ಆರಂಭಿಸುವ ಶಂಕರ್ ನಾಯಕ್ ಮಧ್ಯಾಹ್ನ 2 ಗಂಟೆಯವರೆಗೂ ಸಂಚಾರಿ ನಿಯಮ ಉಲ್ಲಂಘನೆ ಮಾಡುವವರ ಹಿಂದೆ ಹೋಗಿ ಅವರನ್ನು ನಿಲ್ಲಿಸಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಾರೆ. ಪ್ರತಿದಿನ ಸುಮಾರು 60 70 ನಿಯಮ ಉಲ್ಲಂಘನೆ ಕೇಸು ಗಳನ್ನು ದಾಖಲಿಸುತ್ತಾರೆ. ತಮ್ಮ ಪಾಳಿ ಮುಗಿದ ಮೇಲೆ ಮನೆಗೆ ಹೋಗಿ ತಮ್ನ ಇಬ್ಬರು ಗಂಡು ಮಕ್ಕಳ ಜೊತೆ ಕಾಲ ಕಳೆಯುತ್ತಾರೆ.

ನಟಿ ಮಾಲಾಶ್ರೀ ಹಾಗೂ ಡಾ.ರಾಜ್ ಕುಮಾರ್ ಅಭಿಮಾನಿಯಾಗಿರುವ ಶಂಕರ್ ನಾಯಕ್ ಬಿಡುವಿನ ವೇಳೆ ಮಾಲಾಶ್ರೀ ಮತ್ತು ರಾಜ್ ಕುಮಾರ್ ಅವರ ಹಳೇಯ ಸಿನಿಮಾಗಳನ್ನು ನೋಡುತ್ತಾರಂತೆ. ಸಚಿನ್ ತೆಂಡೂಲ್ಕರ್ ಗಿಂತ ಉತ್ತಮ ಕ್ರಿಕೆಟಿಗ ಇನ್ನೊಬ್ಬನಿಲ್ಲ ಎಂದು ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com