ಬೆಂಗಳೂರು: ಚಿನ್ನದ ಸರದ ಜೊತೆಗೆ ಟೆಕ್ಕಿಯನ್ನು ದೋಚಿ ಕಳ್ಳರಾದ ಪೊಲೀಸರು!

ಕೆ.ಆರ್ ಪುರಂ ಟ್ರಾಫಿಕ್ ಪೊಲೀಸರು ತನ್ನ ಚಿನ್ನದ ಸರ ಹಾಗೂ ಹಣವನ್ನು ದೋಚಿದ್ದಾರೆ ಎಂದು ಸಾಪ್ಟ್ ವೇರ್ ಎಂಜಿನೀಯರ್ ಒಬ್ಬರು ದೂರಿದ್ದಾರೆ.
ಕಾಲ್ಪನಿಕ ಚಿತ್ರ
ಕಾಲ್ಪನಿಕ ಚಿತ್ರ

ಬೆಂಗಳೂರು: ಕೆ.ಆರ್ ಪುರಂ ಟ್ರಾಫಿಕ್ ಪೊಲೀಸರು ತನ್ನ ಚಿನ್ನದ ಸರ ಹಾಗೂ ಹಣವನ್ನು ದೋಚಿದ್ದಾರೆ ಎಂದು ಸಾಪ್ಟ್ ವೇರ್ ಎಂಜಿನೀಯರ್ ಒಬ್ಬರು ದೂರಿದ್ದಾರೆ.

ವೆಂಕಿ ನಲ್ಲಗುಟ್ಲ ಎಂಬ ಸಾಫ್ಟ್ ವೇರ್ ಇಂಜಿಯನೀಯರ್ ಆಗಸ್ಟ್ 15 ರಂದು ತಮ್ಮ ಸಂಬಂಧಿ ಜೊತೆ ಹೊರಗೆ ಹೋಗಿದ್ದರು. ಈ ವೇಳೆ ನೋ ಪಾರ್ಕಿಂಗ್ ನಲ್ಲಿ ಕಾರು ನಿಲ್ಲಿಸಿದ್ದರು. ಅನಂತರ ಪೊಲೀಸರು ನೋ ಪಾರ್ಕಿಂಗ್ ಗಾಗಿ ದಂಡ ಹಾಕಿದರು. ವೆಂಕಿ ದಂಡ ಪಾವತಿಸಿದ್ದಕ್ಕೆ ರಸೀದಿ ಕೇಳಿದ್ದಾರೆ.

ಈ ವೇಳೆ ಆಕ್ರೋಶಗೊಂಡ ಪೊಲೀಸರು ರಸೀದಿ ಕೇಳೋದಿಕ್ಕೆ ನೀನು ಯಾರು ಎಂದು ಕೇಳಿದ್ದಾರೆ. ಅದಕ್ಕೆ ಪ್ರತಿಕ್ರಿಯಿಸಿದ ವೆಂಕಿ ನಾನು ಈ ದೇಶದ ಪ್ರಜೆ ಎಂದು ಹೇಳಿದ್ದಾನೆ, ಇದರಿಂದ ಕೋಪಗೊಂಡ ಮೂವರು ಪೊಲೀಸರು ಆತನ ಮೇಲೆ ಹಲ್ಲೆ ಮಾಡಿದ್ದಾರೆ.

ನಂತರ ಆತನನ್ನು ಸ್ಥಳೀಯ ಠಾಣೆಗೆ ಕರೆದುಕೊಂಡು ಬಂದು ಆತನ ಬಳಿಯಿದ್ದ 40 ಸಾವಿರ ರು ಮೌಲ್ಯದ ಚಿನ್ನದ ಸರವನ್ನು ಕಸಿದುಕೊಂಡಿದ್ದಾರೆ. ಜೊತೆಗೆ ಎರಡು ಮೊಬೈಲ್ ಗಳನ್ನು ಕಿತ್ತುಕೊಂಡಿದ್ದಾರೆ. ಬಳಿಕ ಆತನ ವಿರುದ್ಧ ಡ್ರಿಂಕ್ ಅಂಡ್ ಡ್ರೈವ್ ಕೇಸು ದಾಖಲಿಸಿದ್ದಾರೆ. ನಾನು ಕುಡಿದಿದ್ದೆ ಎಂಬುದನ್ನು ಸಾಬೀತು ಪಡಿಸಲು ಪೊಲೀಸರು ನನಗೆ ಯಾವ ಪರೀಕ್ಷೆಯನ್ನು ನಡೆಸಲಿಲ್ಲ.

ನಂತರ ಎಲ್ಲಾ ಚರ್ಚೆ ನಡೆಸಿ, ಆರು ಗಂಟೆಗಳ ನಂತರ ಮಧ್ಯರಾತ್ರಿ 2 ಗಂಟೆ ವೇಳೆಗೆ ನನ್ನನ್ನು ಕರೆದು 3 ಸಾವಿರ ರೂ ಕೊಟ್ಟರೆ ಬಿಡುವುದಾಗಿ ತಿಳಿಸಿದರು. ನನ್ನ ಪರ್ಸ್ ನಲ್ಲಿದ್ದ ಹಣವನ್ನೆಲ್ಲಾ ತೆಗೆದುಕೊಂಡು ಖಾಲಿ ಪರ್ಸ್ ಕೊಟ್ಟರು. ನಂತರ ಮೊಬೈಲ್ ಗಳನ್ನು ವಾಪಸ್ ಕೊಟ್ರು, ಆದರೆ ಚಿನ್ನದ ಸರವನ್ನು ಮಾತ್ರ ವಾಪಸ್ ನೀಡಲಿಲ್ಲ. ಅವರಿಗೆ ಸ್ವಲ್ಪವೂ ಕರಣೆ ಎಂಬುದು ಇಲ್ಲ ಎಂದು ಆತ ದೂರಿದ್ದಾರೆ.

ಸಂಚಾರ ಡಿಸಿಪಿ ಅಭಿಷೇಕ್ ಗೋಯೆಲ್ ಬಳಿ ಈ ಸಂಬಂಧ ಬುಧವಾರ ಸಂಜೆ ದೂರು ದಾಖಲಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com