ಪಾಕಿಸ್ತಾನಕ್ಕೆ ಹೋದರೆ ನರಕಕ್ಕೆ ಹೋದಂತೆ ಎಂದು ಮನೋಹರ್ ಪರಿಕ್ಕರ್ ಅವರು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಪಾಕ್ ಗೆ ಭೇಟಿ ನೀಡಿ ಬಂದಿದ್ದ ನಟಿ ರಮ್ಯಾ ಅವರು, ಪಾಕಿಸ್ತಾನದ ಜನರು ತುಂಬಾ ಒಳ್ಳೇಯವರು, ಅವರು ನಮ್ಮಂತೆ. ಹಾಗಂತ ಪಾಕ್ ನರಕವಲ್ಲ ಎಂದು ಹೇಳಿ ಟಾಂಗ್ ನೀಡಿದ್ದರು. ರಮ್ಯಾ ಹೇಳಿಕೆ ವಿರುದ್ಧ ಮಂಡ್ಯ ಸೇರಿದಂತೆ ರಾಜ್ಯಾದ್ಯಂತ ತೀವ್ರ ಆಕ್ರೋಶ, ಟೀಕೆ ವ್ಯಕ್ತವಾಗಿತ್ತು.