125 ವರ್ಷ ಹಳೆಯ ದೇವರಾಜ ಮಾರುಕಟ್ಟೆ ಕಟ್ಟಡ ಕುಸಿತ

125 ವರ್ಷಗಳ ಇತಿಹಾಸ ಹೊಂದಿರುವ ಮೈಸೂರಿನ ದೇವರಾಜ ಮಾರುಕಟ್ಟೆಯ ಪಾರಂಪರಿಕ ಕಟ್ಟಡವೊಂದು ಭಾನುವಾರ ಸಂಜೆ ಕುಸಿದುಬಿದ್ದಿದ್ದು, ಯಾವುದೇ...
ಕುಸಿದು ಬಿದ್ದಿರುವ ದೇವರಾಜ ಮಾರುಕಟ್ಟೆ ಕಟ್ಟಡ
ಕುಸಿದು ಬಿದ್ದಿರುವ ದೇವರಾಜ ಮಾರುಕಟ್ಟೆ ಕಟ್ಟಡ

ಮೈಸೂರು: 125 ವರ್ಷಗಳ ಇತಿಹಾಸ ಹೊಂದಿರುವ ಮೈಸೂರಿನ ದೇವರಾಜ ಮಾರುಕಟ್ಟೆಯ ಪಾರಂಪರಿಕ ಕಟ್ಟಡವೊಂದು ಭಾನುವಾರ ಸಂಜೆ ಕುಸಿದುಬಿದ್ದಿದ್ದು, ಯಾವುದೇ ಪ್ರಾಣಹಾನಿಗಳು ಸಂಭವಿಸಿಲ್ಲ.

ಮಾರುಕಟ್ಟೆಯ ಉತ್ತರ ಪ್ರವೇಶದ್ವಾರದ, ಧನ್ವಂತರಿ ರಸ್ತೆಯಿಂದ ಮಾರುಕಟ್ಟೆ ಪ್ರವೇಶಿಸುವ ದ್ವಾರದ ಒಳಭಾಗದಲ್ಲಿ ಕಟ್ಟಡ ಕುಸಿದುಬಿದ್ದಿದೆ. ಭಾನುವಾರವಾದ್ದರಿಂದ ದೊಡ್ಡಮಟ್ಟದ ಹಾನಿಗಳು ಸಂಭವಿಸಿಲ್ಲ.

ಘಟನೆ ವೇಳೆ ಕಟ್ಟಡದಲ್ಲಿ ಕೆಲಸ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಈ ವೇಳೆ ಕಟ್ಟಡದಲ್ಲಿ ಕೆಲ ಶಬ್ಧ ಕೇಳಿಬರುತ್ತಿದ್ದಂತೆ ಕಾರ್ಮಿಕರು ಹೊರಗಡೆ ಬಂದಿದ್ದಾರೆ. ಈ ವೇಳೆ ಕಣ್ಣಮುಂದೆಯೇ ಕಟ್ಟಡ ಕುಸಿದು ಬೀಳುತ್ತಿರುವುದನ್ನು ಕಾರ್ಮಿಕರು ನೋಡಿದ್ದಾರೆ.

ಕಟ್ಟಡ ಕುಸಿದುಬಿದ್ದ ಕ್ಷಣಗಳನ್ನು ಸ್ಥಳದಲ್ಲಿಯೇ ಇದ್ದ ಪ್ರವೀಣ್ ಎಂಬುವವರು ವಿವರಿಸಿದ್ದು ಹೀಗೆ, ಕಟ್ಟಡ ಗೋಡೆಗಳು ಇದ್ದಕ್ಕಿದ್ದಂತೆ ಸಂಜೆ 4 ಗಂಟೆ ಸುಮಾರಿಗೆ ಬಿರುಕು ಬಿಡಲು ಆರಂಭಿಸಿತ್ತು. ಇದನ್ನು ಗಮನಿಸಿದ್ದ ಇಂಜಿನಿಯರ್ ಕೂಡಲೇ ಹೊರ ಬರುವಂತೆ ತಿಳಿಸಿದರು. ಇದರಂತೆ ಎಲ್ಲಾ ಕಾರ್ಮಿಕರಿಗೂ ಮಾಹಿತಿ ನೀಡಿ ಹೊರಗೆ ಓಡಿಬಂದೆವು. ನಂತರ ಇಂಜಿನಿಯರ್ ಅಧಿಕಾರಿಗಳಿಗೆ ಮಾಹಿತಿ ನೀಡಿದರು. ವಾರಾಂತ್ಯ ದಿನವಾದ್ದರಿಂದ ದೊಡ್ಡ ಮಟ್ಟದ ಹಾನಿಗಳಾವುದೂ ಸಂಭವಿಸಿಲ್ಲ. ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com