ಜನಾರ್ಧನ ರೆಡ್ಡಿ
ರಾಜ್ಯ
ಉದ್ಯಮಿಯೊಂದಿಗೆ ಗಣಿ ಧಣಿ ಗಾಲಿ ಜನಾರ್ದನ ರೆಡ್ಡಿ ಪುತ್ರಿ ನಿಶ್ಚಿತಾರ್ಥ
ಮಾಜಿ ಸಚಿವ ಹಾಗೂ ಗಣಿ ಧಣಿ ಜನಾರ್ದನ ರೆಡ್ಡಿ ಏಕೈಕ ಪುತ್ರಿಗೆ ವಿವಾಹ ನಿಶ್ಚಯ ಆಗಿದೆ...
ಬೆಂಗಳೂರು: ಮಾಜಿ ಸಚಿವ ಹಾಗೂ ಗಣಿ ಧಣಿ ಜನಾರ್ದನ ರೆಡ್ಡಿ ಏಕೈಕ ಪುತ್ರಿಗೆ ವಿವಾಹ ನಿಶ್ಚಯ ಆಗಿದೆ.
ಗಾಲಿ ಜನಾರ್ದನ ರೆಡ್ಡಿ ಪುತ್ರಿ ಬ್ರಹ್ಮಿಣಿ, ಹೈದರಾಬಾದ್ ಉದ್ಯಮಿಯಯನ್ನು ವರಿಸಲಿದ್ದಾರೆ. ಬೆಂಗಳೂರಿನ ಪಾರಿಜಾತ ನಿವಾಸದಲ್ಲಿ ಎರಡು ದಿನಗಳ ಹಿಂದೆ ಆಪ್ತರ ಸಮುಖ್ಮದಲ್ಲಿ ನಡೆದ ಸಮಾರಂಭದಲ್ಲಿ ಬ್ರಹ್ಮಿಣಿ ನಿಶ್ಚಿತಾರ್ಥ ನಡೆದಿದೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಹೈದ್ರಾಬಾದ್ ಮೂಲದ ಉದ್ಯಮಿಯಾಗಿರುವ ರೆಡ್ಡಿ ಅಳಿಯ, ವಿದೇಶದಲ್ಲಿ ರಿಯಲ್ ಎಸ್ಟೇಟ್ ಸೇರಿದಂತೆ ಕನ್ಸ್‌ಟ್ರಕ್ಷನ್ ಕಂಪನಿ ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ.
ನಿಶ್ಚಿತಾರ್ಥದಲ್ಲಿ ವರನ ಪೋಷಕರು ಹಾಗೂ ಜನಾರ್ಧನ ರೆಡ್ಡಿ ಕುಟುಂಬದ ಆಪ್ತರು ಮಾತ್ರ ಭಾಗವಹಿಸಿದ್ದರು ಎಂದು ಹೇಳಲಾಗಿದೆ.