
ಬೆಂಗಳೂರು: ಪಿಜಿಯೊಂದಕ್ಕೆ ನುಗ್ಗಿದ ಅಪರಿಚಿತ ವ್ಯಕ್ತಿ ತಮಿಳು ನಾಡು ಮೂಲದ ಐಟಿ ಉದ್ಯೋಗಿ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ.
ಸೋಮವಾರ ಈ ಕೃತ್ಯ ನಡೆದಿದ್ದು, ಮಂಗಳವಾರ ತಡವಾಗಿ ಬೆಳಕಿಗೆ ಬಂದಿದೆ. 25 ವರ್ಷ ವಯಸ್ಸಿನ ಸಂತ್ರಸ್ತೆ ಒಂದು ವರ್ಷದಿಂದ ನಗರದ ಖಾಸಗಿ ಐಟಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ತನ್ನ ಸ್ನೇಹಿತರ ಜೊತೆ ಪಿಜಿಯಲ್ಲಿ ವಾಸಿಸುತ್ತಿದ್ದಳು. ಸೋಮವಾರ ಬೆಳಗ್ಗೆ ಆಕೆಯ ಸ್ನೇಹಿತರು ಕೆಲಸಕ್ಕೆ ಹೋಗಿದ್ದರು, ಆದರೆ ಅನಾರೋಗ್ಯದ ಕಾರಣ ಸಂತ್ರಸ್ತೆ ವಾಪಸ್ ಪಿಜಿಗೆ ಬಂದಿದ್ದಳು.
ಈ ವೇಳೆ ಪಿಜಿಯೊಳಗೆ ನುಗ್ಗಿದ ಅಪರಿಚಿತ ಚಾಕು ತೋರಿಸಿ, ಹೆದರಿಸಿ ಆಕೆಯ ಮೇಲೆ ಅತ್ಯಾಚಾರ ನಡೆಸಿ ಪರಾರಿಯಾಗಿದ್ದಾನೆ.
ಆರೋಪಿ ಕಳ್ಳತನ ಮಾಡಲು ಕಟ್ಟಡದೊಳಗೆ ನುಗ್ಗಿದ್ದಾನೆ. ಆದರೆ ಪಿಜಿ ಕಟ್ಟಡದಲ್ಲಿ ಏನು ಸಿಗದ ಕಾರಣ ಅತ್ಯಾಚಾರವೆಸಗಿದ್ದಾನೆ ಎಂದು ಪೊಲೀಸರು ಶಂಕಿಸಿದ್ದಾರೆ.
ಈ ಸಂಬಂಧ ಪರಪ್ಪನ ಅಗ್ರಹಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಆರೋಪಿ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.
Advertisement