ಬೆಂಗಳೂರು: ಯುವಕರಿಂದಲೇ ಹೆಚ್ಚಿನ ಪ್ರಮಾಣದ ಸಂಚಾರ ನಿಯಮ ಉಲ್ಲಂಘನೆ

ಸುರಕ್ಷಿತ ಚಾಲನೆ ಬಗ್ಗೆ ಜಾಗೃತಿ, ಪದೇ ಪದೇ ಪರಿಶೀಲನೆ ನಡೆಸುತ್ತಿದ್ದರೂ, ನಗರದಲ್ಲಿ ಯುವ ಜನಾಂಗವೇ ಹೆಚ್ಚಿನ ಪ್ರಮಾಣದಲ್ಲಿ ಸಂಚಾರ ನಿಯಮ ಉಲ್ಲಂಘನೆ ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on

ಬೆಂಗಳೂರು: ಸುರಕ್ಷಿತ ಚಾಲನೆ ಬಗ್ಗೆ ಜಾಗೃತಿ, ಪದೇ ಪದೇ ಪರಿಶೀಲನೆ ನಡೆಸುತ್ತಿದ್ದರೂ, ನಗರದಲ್ಲಿ ಯುವ ಜನಾಂಗವೇ ಹೆಚ್ಚಿನ ಪ್ರಮಾಣದಲ್ಲಿ ಸಂಚಾರ ನಿಯಮ ಉಲ್ಲಂಘನೆ ಮಾಡುತ್ತಿದೆ. ಈ ಟ್ರೆಂಡ್ ಸಂಚಾರಿ ಪೊಲೀಸರ ಆತಂಕಕ್ಕೆ ಕಾರಣವಾಗಿದೆ.

ಫ್ರೀ ವೀಲಿಂಗ್, ಜಿಗ್ ಜಾಗ್ ಡ್ರೈವಿಂಗ್, ತ್ರಿಪಲ್ಸ್ ಡ್ರೈವಿಂಗ್, ದೋಷಯುಕ್ತ ಸೈಲೆನ್ಸರ್ ಗಳ ಬಳಕೆ, ವೀಲಿಂಗ್ ಮಾಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಿದೆ. 2014 ರಲ್ಲಿ 167 ಮಂದಿ ವಿರುದ್ಧ ವೀಲಿಂಗ್ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಸು ದಾಖಲಾಗಿತ್ತು, 2015 ರಲ್ಲಿ ಅದು 399 ಕ್ಕೇರಿದೆ.

ರೇಸಿಂಗ್, ಸ್ಪೀಡ್ ಟ್ರಯಲ್ ಮಾಡಿದ್ದಕ್ಕೆ 2014 ರಲ್ಲಿ 319 ಮಂದಿ ವಿರುದ್ಧ ಕೇಸು ದಾಖಲಾಗಿತ್ತು, 2014 ರಲ್ಲಿ 758 ಬೈಕ್ ಸವಾರರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ವರ್ಷದ ಜನವರಿಯಿಂದ ಅಕ್ಟೋಬರ್ ವರೆಗೆ 19 ರಿಂದ 30 ವಯಸ್ಸಿನೊಳಗಿನ 1,499 ಯುವಕರ ವಿರುದ್ಧ ರೇಸಿಂಗ್ ಮಾಡಿದ್ದಕ್ಕಾಗಿ ಕೇಸು ದಾಖಲಿಸಲಾಗಿದೆ.

ಹೆಚ್ಚಿನ ಪ್ರಮಾಣದ ಅಪಘಾತಗಳು ಮಧ್ಯ ಸೇವನೆ, ಡ್ರಗ್ಸ್  ಒತ್ತಡಗಳಿಂದಾಗಿ ನಡೆಯುತ್ತಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.ಶೇ. 40 ರಷ್ಟು ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಯುವಕರ ವಿರುದ್ಧವೇ ದಾಖಲಾಗಿವೆ. ಎಷ್ಟೇ ಪ್ರಕರಣ ದಾಖಲಿಸಿದರೂ ಯುವ ಜನತೆ ತಮ್ಮ ವರ್ತನೆ ಬದಲಾಯಿಸಿಕೊಳ್ಳುತ್ತಿಲ್ಲ, ಕೇಸ್ ಗೆ ಕಟ್ಟುವ ದಂಡದ ಪ್ರಮಾಣ ಕಡಿಮೆ ಇರುವುದರಿಂದ ಪುನಾರವರ್ತನೆಯಾಗುತ್ತಿವೆ ಎಂದು ಹೇಳಲಾಗಿದೆ.

ಅಧಿಕ ವೇಗ, ಸುರಕ್ಷತೆ ಬಗ್ಗೆ ನಿರ್ಲಕ್ಷ್ಯ, ಸೀಟ್ ಬೆಲ್ಟ್ ಹಾಗೂ ಹೆಲ್ಮೆಟ್ ಧರಿಸದಿರುವುದು ಕೂಡ ಅಪಘಾತಕ್ಕೆ ಕಾರಣಗಳಾಗುತ್ತಿವೆ. 19 ರಿಂದ 30 ವರ್ಷದ ಮಹಿಳೆ ಹಾಗೂ ಪುರುಷರಿದರೇ ಹೆಚ್ಚಿನ ಪ್ರಮಾಣದ ದುರಂತ ನಡೆಯುತ್ತಿವೆ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. 2013 ರ ಜನವರಿಯಿಂದ 2016 ರ ಜುಲೈ ವರೆಗೆ ರಸ್ತೆ ಅಪಘಾತದಲ್ಲಿ 2,728 ಮಂದಿ ಸಾವನ್ನಪ್ಪಿದ್ದಾರೆ. ಅದರಲ್ಲಿ ಸುಮಾರು 869 ಮಂದಿ 18 ರಿಂದ 30 ವರ್ಷ ವಯೋಮಿತಿಯವರಾಗಿದ್ದಾರೆ.  ಉಳಿದ 865 ಮಂದಿ 31ರಿಂದ 50 ವರ್ಷ ವಯಸ್ಸಿನವರಾಗಿದ್ದಾರೆ. ಸಂಚಾರಿ ಪೊಲೀಸರು ಕೇವಲ ಕೇಸು ಮಾತ್ರ ದಾಖಲಿಸಬಹುದು, ಅಮೂಲ್ಯವಾದ ಜೀವ ಉಳಿಸಿಕೊಳ್ಳಲು ಸವಾರರೇ ಶಿಸ್ತನ್ನು ಅನುಸರಿಸಬೇಕು ಎಂದು ಸಂಚಾರಿ ತಜ್ಞ ಎಂ.ಎನ್ ಶ್ರೀಹರಿ ಹೇಳುತ್ತಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com