ಸಂಶೋಧಕರಾದ ಮೊಹಮ್ಮದ್ ಅಯಾಜುದ್ದೀನ್ ಪಟೇಲ್, ರೆಹಮಾನ್ ಪಟೇಲ್ ಮತ್ತು ಮೊಹಮ್ಮದ್ ಇಸ್ಲಾಯಿಲ್ ಅವರು ಕಲಬುರ್ಗಿಯ ಕೋಟೆಯಲ್ಲಿರುವ ಫಿರಂಗಿ ಕುರಿತು ಸಂಶೋಧನೆ ಕೈಗೊಂಡಿದ್ದರು. ಸಂಶೋಧನೆ ವೇಳೆ ಬಾರಾ ಘಜಿ ಟಾಪ್ 29 ಅಡಿ ಉದ್ದದ ಫಿರಂಗಿಯಾಗಿದ್ದು ಇದನ್ನು ಬಹಮನಿ ಸಾಮ್ರಾಟರು ಬಳಸುತ್ತಿದ್ದು ಇದು 14ನೇ ಶತಮಾನದ್ದು ಎಂಬುದನ್ನು ಗುರುತಿಸಿದ್ದಾರೆ.